ಮೆಲ್ಬರ್ನ್: ಕಾಳ್ಗಿಚ್ಚಿನಿಂದ ನಿರ್ವಸಿತರಾದವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ ₹ 9,936 ಕೋಟಿ ಮಂಜೂರು ಮಾಡುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸೋಮವಾರ ಘೋಷಿಸಿದ್ದಾರೆ.

ರಾಷ್ಟ್ರೀಯ ಕಾಳ್ಗಿಚ್ಚು ನಿಯಂತ್ರಣ ಸಂಸ್ಥೆಗೆ ಹಣ ಮಂಜೂರು ಮಾಡಲಿದ್ದು, ಈ ಸಂಸ್ಥೆಯು ಜನರಿಗೆ ನೆರವಾಗಲಿದೆ ಎಂದಿದ್ದಾರೆ.

ಕಾಳ್ಗಿಚ್ಚಿನಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ, ರೈತರಿಗೆ ಮತ್ತು ವ್ಯಾಪಾರಿಗಳಿಗೆ ಈ ಮೂಲಕ ನೆರವು ನೀಡಲಾಗುವುದು ಎಂದು ಮಾರಿಸನ್ ತಿಳಿಸಿದ್ದಾರೆ.

‘ಪುನರ್ವಸತಿ ಕಾರ್ಯಗಳು ದೀರ್ಘ ಪ್ರಕ್ರಿಯೆಯಾಗಿದ್ದು, ಜನರೊಂದಿಗೆ ನಾವಿದ್ದೇವೆ’ ಎಂದಿದ್ದಾರೆ.

‘ಕಾಳ್ಗಿಚ್ಚು ಹಬ್ಬಿರುವ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ’ ಎಂದೂ ಹೇಳಿದ್ದಾರೆ.ಕಾಳ್ಗಿಚ್ಚಿಗೆ 1,500ಕ್ಕೂ ಹೆಚ್ಚು ಮನೆಗಳು ಆಹುತಿಯಾಗಿದ್ದು, 20 ಮಂದಿ ಬಲಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.