ಡೆಹ್ರಡೂನ್: ಲೋಕಸಭೆ ಚುನಾವಣಾ ಫಲಿತಾಂಶಕ್ಕೆ ಕೆಲವೇ ದಿನಗಳ ಮುನ್ನ(ಮೇ 23) ಪ್ರಧಾನಿ ನರೇಂದ್ರ ಮೋದಿ ಶನಿವಾರ ಕೇದಾರನಾಥ ಮಂದಿರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಒಂದು ತಿಂಗಳ ಸುದೀರ್ಘ ಪ್ರಚಾರ ಮುಗಿಸಿರುವ ಪ್ರಧಾನಿ, ಎರಡು ದಿನಗಳ ಕಾಲ ಕೇದಾರನಾಥ ಹಾಗೂ ಬದರಿನಾಥ ಕ್ಷೇತ್ರಗಳಿಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ.

ಬೆಳಿಗ್ಗೆ 9.30ಕ್ಕೆ ಬಂದಿಳಿದ ಪ್ರಧಾನಿ, ದೇವರ ದರ್ಶನ ಪಡೆದು ಕೇದರಪುರಿ ಮರುನಿರ್ಮಾಣ ಯೋಜನೆ ಕೆಲಸಗಳನ್ನು ಪರಿಶೀಲಿಸಿದರು. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ.

ಮೋದಿ ಅವರು ಭಾನುವಾರ ಬದರಿನಾಥಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ದೇವರ ದರ್ಶನ ಪಡೆದು, ದೇವಸ್ಥಾನ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಾಮರ್ಶಿಸಲಿದ್ದಾರೆ.

‘ಪ್ರಧಾನಿ ಆದ ನಂತರ ನರೇಂದ್ರ ಮೋದಿ ಅವರು ಬದರಿನಾಥಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು’ ಎಂದು ಬದರಿನಾಥ ಕೇದಾರನಾಥ ದೇವಸ್ಥಾನ ಸಮಿತಿ ಮುಖ್ಯಸ್ಥ ಮೋಹನ್ ಪ್ರಸಾದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.