ನವದೆಹಲಿ: ಮೂರು ಶತಕೋಟಿ ಡಾಲರ್ (ಸುಮಾರು ₹ 21.50 ಸಾವಿರ ಕೋಟಿ)ಮೊತ್ತದ ರಕ್ಷಣಾ ಒಪ್ಪಂದಕ್ಕೆ ಭಾರತ–ಅಮೆರಿಕ ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮೆರಿಕದ ಅತ್ಯಾಧುನಿಕ, ವಿಶ್ವದಲ್ಲೇ ಅತ್ಯುತ್ತಮವಾದ ‘ಎಂಎಚ್–60ಆರ್’ ಮತ್ತು ‘ಅಪಾಚೆ’ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ನೀಡುವ 3 ಶತಕೋಟಿ ಡಾಲರ್ ಒಪ್ಪಂದಕ್ಕೆ ಇಂದು ನಾವು ಸಹಿ ಹಾಕಿದೆವು. ಇದು ನಮ್ಮ ಜಂಟಿ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ’ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಭಾರತ ಭೇಟಿಯ ಎರಡನೇ ದಿನವಾದ ಮಂಗಳವಾರ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ಇದನ್ನೂ ಓದಿ:‘ನಮಸ್ತೆ ಟ್ರಂಪ್’ನಲ್ಲಿ ಅಮೆರಿಕ ಅಧ್ಯಕ್ಷರಿಂದ ತಪ್ಪಾಗಿ ಹೊರಳಿದ ಮಾತುಗಳಿವು!

ಒಪ್ಪಂದದ ಪ್ರಕಾರ, ಭಾರತೀಯ ನೌಕಾಪಡೆ ಮತ್ತು ಭೂಸೇನೆಗೆ ಒಟ್ಟು 30 ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಅಮೆರಿಕ ಒದಗಿಸಬೇಕಿದೆ.

ಈ ಪೈಕಿ, ಭಾರತೀಯ ನೌಕಾಪಡೆಗೆ 2.12 ಶತಕೋಟಿ ಡಾಲರ್ (ಸುಮಾರು ₹ 15,000 ಕೋಟಿ) ವೆಚ್ಚದಲ್ಲಿ 24 ‘ಎಂಎಚ್–60ಆರ್’ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ಒದಗಿಸಲಿದೆ. ಇದು ಹಳೆಯದಾಗಿರುವ ‘ಸೀ ಕಿಂಗ್’ ಹೆಲಿಕಾಪ್ಟರ್‌ಗೆ ಪರ್ಯಾಯವಾಗಲಿದೆ. ಭೂಸೇನೆಗೆ 930 ದಶಲಕ್ಷ ಡಾಲರ್ (ಸುಮಾರು ₹ 6,500 ಕೋಟಿ) ವೆಚ್ಚದಲ್ಲಿ 6 ‘ಅಪಾಚೆ’ ಹೆಲಿಕಾಪ್ಟರ್‌ಗಳನ್ನು ಪೂರೈಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.