ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಶುಕ್ರವಾರಸಂಸತ್ ಭವನಕ್ಕೆಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಿದ್ದಾರೆ.

ಸಂಸತ್ ಭವನದ ಪರಿಸರದಲ್ಲಿ ಗುಂಪು ಸೇರುವುದನ್ನು ನಿರ್ಬಂಧಿಸಿದ್ದು, 50 ಮಂದಿ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ: ಶಿಲ್ಲಾಂಗ್ ಭೇಟಿ ರದ್ದು ಮಾಡಿದ ಅಮಿತ್ ಶಾ

ವಿಶ್ವವಿದ್ಯಾನಿಲಯದ ಆವರಣದಿಂದ ವಿದ್ಯಾರ್ಥಿಗಳು ಮೆರವಣಿಗೆ ಆರಂಭ ಮಾಡುತ್ತಿದ್ದಂತೆ ಪ್ರತಿಭಟನಕಾರರನ್ನು ಚದುರಿಸುವುದಕ್ಕಾಗಿ ದೆಹಲಿ ಪೊಲೀಸರು ಅಶ್ರು ವಾಯು ಮತ್ತು ಲಾಠಿ ಪ್ರಯೋಗ ನಡೆಸಿದ್ದಾರೆ.

ವಿದ್ಯಾರ್ಥಿಗಳು ಸಂಸತ್ತಿಗೆ ತಲುಪದಂತೆ ತಡೆಯಲು ದೆಹಲಿ ಮೆಟ್ರೊ ರೈಲು ಕಾರ್ಪರೇಷನ್ (ಡಿಎಂಆರ್‌ಸಿ) ಪಟೇಲ್ ಚೌಕ್ ಮತ್ತು ಜನಪಥ್ ನಿಲ್ದಾಣವನ್ನುಕೆಲವು ಗಂಟೆಗಳ ಕಾಲ ಮುಚ್ಚಿತ್ತು.

ಇದೀಗ ಈ ಎರಡೂ ನಿಲ್ದಾಣದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿದೆ ಡಿಎಂಆರ್‌ಸಿ ಟ್ವೀಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.