ಮುಜಾಫರ್‌ನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ರದ್ದು ಮಾಡಿದ್ದರಿಂದ ನಮಗೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದರ ಬಗ್ಗೆ ವಿವರಿಸಿದ ಬಿಜೆಪಿ ಶಾಸಕ ವಿಕ್ರಮ್ ಸೈನಿ, 370ನೇ ವಿಧಿ ರದ್ದು ಮಾಡಿದ್ದರಿಂದ ಈಗ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆಯಾಗಬಹುದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಶಾಸಕರಾಗಿದ್ದಾರೆ ವಿಕ್ರಮ್ ಸೈನಿ. ಸಂವಿಧಾನದ370ನೇ ವಿಧಿ ರದ್ದು ಪಡಿಸಿರುವ ನಿರ್ಧಾರವನ್ನು ಸ್ವಾಗತಿ ಮುಜಾಫರ್‌ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೈನಿ, ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರದಿಂದಾಗಿ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೋಗಿ ಅಲ್ಲಿ ಜಮೀನು ಖರೀದಿಸಬಹುದು. ಅಲ್ಲಿಯವರನ್ನು ಮದುವೆಯಾಗಬಹುದು ಎಂದಿದ್ದಾರೆ.

ಇದನ್ನೂ ಓದಿ: ದೊಡ್ಡ ತೀರ್ಮಾನ’ದ ಹಿಂದಿನ ಆರು ಮಂದಿ

ನಮ್ಮ ಕಾರ್ಯಕರ್ತರು ತುಂಬಾ ಉತ್ಸುಕರಾಗಿದ್ದಾರೆ.ಮದುವೆಯಾಗದ ಯುವಕರು ಅಲ್ಲಿಗೆ ಹೋಗಿ ಮದುವೆಯಾಗಬಹುದು.ಅಲ್ಲಿ ಈಗ ಯಾವುದೇ ಸಮಸ್ಯೆಗಳಿಲ್ಲ. ಈ ಹಿಂದೆ ಅಲ್ಲಿ ಮಹಿಳೆಯರ ಮೇಲೆ ತುಂಬಾ ದಬ್ಬಾಳಿಕೆ ನಡೆಯುತ್ತಿತ್ತು. ಕಾಶ್ಮೀರದ ಮಹಿಳೆಯೊಬ್ಬರು ಉತ್ತರ ಪ್ರದೇಶದ ಯುವಕನನ್ನು ಮದುವೆಯಾದರೆ ಆಕೆಯ ಪೌರತ್ವ ರದ್ದು ಆಗುತ್ತಿತ್ತು.ಭಾರತ ಮತ್ತು ಕಾಶ್ಮೀರದಲ್ಲಿ ಬೇರೆ ಬೇರೆ ಪೌರತ್ವ ಇದೆ ಎಂದು ಸೈನಿ ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿಹರಿದಾಡುತ್ತಿದೆ.

ಮುಸ್ಲಿಂ ಕಾರ್ಯಕರ್ತರು ಸಂಭ್ರಮಿಸಬೇಕು.ಬೆಳ್ಳಗಿರುವ ಕಾಶ್ಮೀರದ ಯುವತಿಯರನ್ನು ಅವರು ಮದುವೆಯಾಗಬಹುದು.ಅಲ್ಲಿಯೂ ಸಂಭ್ರಮಾಚರಣೆ ಮಾಡಬೇಕು.ಹಿಂದೂ ಆಗಲೀ, ಮುಸ್ಲಿಂ ಆಗಲೀ ಎಲ್ಲರೂ ಸಂಭ್ರಮಿಸಬೇಕು.ಇಡೀ ದೇಶವೇ ಸಂಭ್ರಮಿಸಬೇಕಾದ ವಿಷಯ ಇದು ಎಂದು ಸೈನಿ ಹೇಳಿದ್ದಾರೆ.

ಆದಾಗ್ಯೂ, ಈ ರೀತಿ ಸ್ತ್ರೀ ದ್ವೇಷದ ಮಾತುಗಳ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ನಾನು ಹೇಳಿದ್ದರಲ್ಲಿ ಆಕ್ಷೇಪಾರ್ಹವಾದುದು ಏನಿದೆ ಎಂದು ಶಾಸಕ ಕೇಳಿದ್ದಾರೆ.

ಯಾವುದೇ ಸಮಸ್ಯೆ ಇಲ್ಲದೆ ಯಾರಿಗೆ ಬೇಕಾದರೂ ಕಾಶ್ಮೀರದ ಹುಡುಗಿಯರನ್ನು ಮದುವೆಯಾಗಬಹುದು. ಇದನ್ನೇ ನಾನು ಹೇಳಿದ್ದು, ಇದು ಸತ್ಯ ಸಂಗತಿಯೂ ಹೌದು.ಕಾಶ್ಮೀರದಲ್ಲಿರುವ ಜನರಿಗೆ ಸ್ವಾತಂತ್ರ್ಯ ಸಿಕ್ಕಿದೆ.ಅದಕ್ಕಾಗಿಯೇ ನಾವು ಈ ಕಾರ್ಯಕ್ರಮ ಆಯೋಜಿಸಿದ್ದು, ಈಗ ಕಾಶ್ಮೀರಗಳಿಗೆ ಸ್ವಾತಂತ್ರ್ಯ ದಕ್ಕಿದೆ. ಮೋದಿಜೀ ನಮ್ಮ ಕನಸು ನನಸು ಮಾಡಿದ್ದಾರೆ. ಇಡೀ ದೇಶವೇ ಸಂಭ್ರಮಿಸುತ್ತಿದೆ ಎಂದು ಶಾಸಕ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ:ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಸಮಗ್ರ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.