ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಕಾಶ್ಮೀರ ವಿವಾದ ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸಲು ಆಸಕ್ತಿ ತೋರಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಬೇಕೆಂದು ಮೋದಿ ಮನವಿ ಮಾಡಿದ್ದರು ಅಂತಾರೆ ಟ್ರಂಪ್. ಇದು ನಿಜವಾಗಿದ್ದರೆ ಪ್ರಧಾನಿ ಮೋದಿ ಭಾರತದ ಹಿತಾಸಕ್ತಿ ಮತ್ತು1972ರ ಶಿಮ್ಲಾ ಒಪ್ಪಂದಕ್ಕೆ ದ್ರೋಹ ಬಗೆದಿದ್ದಾರೆ. ದುರ್ಬಲವಾದ ವಿದೇಶಾಂಗ ಸಚಿವಾಲಯ ಇದನ್ನು ನಿರಾಕರಿಸಿದರೆ ಸಾಲದು, ಟ್ರಂಪ್ ಜತೆಗಿನ ಮಾತುಕತೆಯಲ್ಲಿ ಏನಾಯಿತು ಎಂಬುದನ್ನು ಪ್ರಧಾನಿ ಮೋದಿ ದೇಶದ ಜನರಿಗೆ ತಿಳಿಸಬೇಕು ಎಂದು ಟ್ವೀಟಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಪ್ರಧಾನಿ ಮೋದಿ ಹೇಳಲಿಲ್ಲ, ಇದು ಸತ್ಯಕ್ಕೆ ದೂರವಾದ ಮಾತು ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದನ್ನು ರಾಹುಲ್ ಇಲ್ಲಿ ಉಲ್ಲೇಖಿಸಿದ್ದಾರೆ.

ಮೋದಿಯವರುಈ ರೀತಿ ಮನವಿ ಮಾಡಿರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ರಾಜ್ಯಸಭೆಯಲ್ಲಿ ಹೇಳಿದ್ದರು.ಅದೇ ವೇಳೆ ಪಾಕಿಸ್ತಾನ ಮತ್ತು ಭಾರತ ನಡುವಿನ ವಿಷಯವನ್ನು ದ್ವಿಪಕ್ಷೀಯ ಮಾತುಕತೆಯಿಂದಲೇ ಚರ್ಚಿಸುವ ನಿಲುವು ಭಾರತದದ್ದು ಎಂದಿದ್ದಾರೆ ಜೈ ಶಂಕರ್.

ಇದನ್ನೂ ಓದಿ:ಕಾಶ್ಮೀರ ವಿವಾದ: ಮಧ್ಯಸ್ಥಿಕೆಗೆ ಟ್ರಂಪ್ ಒಲವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.