‘ತಂದೆ ಮತ್ತು ತಾಯಿ ಕೊಡುವ ಪ್ರೀತಿಗಿಂತ ಮಿಗಿಲಾದುದು ಯಾವುದೂ ಇಲ್ಲ’ ಎಂಬ ಸಂದೇಶ ಹೊತ್ತಿರುವ ಸಿನಿಮಾ ‘ಇದಂ ಪ್ರೇಮಂ ಜೀವನಂ’ ತೆರೆಗೆ ಬರಲು ಸಜ್ಜಾಗಿ ನಿಂತಿದೆ. ಮಾರ್ಚ್ 9ರಂದು ಅಥವಾ ಮಾರ್ಚ್ 16ರಂದು ಈ ಸಿನಿಮಾ ತೆರೆಗೆ ಬರಲಿದೆ.

ಸಿನಿಮಾ ಕೆಲಸಗಳು ಮುಗಿದಿವೆ ಎಂಬುದನ್ನು ಹೇಳಲು ನಿರ್ದೇಶಕ ರಾಘವಾಂಕ ಪ್ರಭು ಪತ್ರಿಕಾಗೋಷ್ಠಿ ಕರೆದಿದ್ದರು. ‘ಸಿನಿಮಾ ಬಿಡುಗಡೆ ಮಾರ್ಚ್ 9ಕ್ಕೆ ಎಂದು ಈ ಮೊದಲು ಹೇಳಿದ್ದೆವು. ಕ್ಯೂಬ್ ಮತ್ತು ಯುಎಫ್ಒ ಶುಲ್ಕವನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕರೆ ನೀಡಿರುವ ಬಂದ್ನ ಕಾರಣ ಸಿನಿಮಾವನ್ನು ಈ ವಾರ ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ. ಸಿನಿಮಾ ಬಿಡುಗಡೆ ಬಂದ್ ನಿರ್ಧಾರ ಕೈಬಿಟ್ಟರೆ ಈ ವಾರ ಬಿಡುಗಡೆ ಮಾಡುತ್ತೇವೆ. ಇಲ್ಲವಾದರೆ ಮುಂದಿನ ವಾರ ಆಗುತ್ತದೆ’ ಎಂದರು ರಾಘವಾಂಕ.

‘ಸಂಹಾರ’ ಚಿತ್ರದಲ್ಲಿ ನಟಿಸಿದ್ದ ಬಲ ರಾಜ್ವಾಡಿ ಅವರು ಈ ಸಿನಿಮಾದಲ್ಲೂ ಒಂದು ಪಾತ್ರ ನಿಭಾಯಿಸಿದ್ದಾರೆ. ‘ಈ ಚಿತ್ರದಲ್ಲಿ ನಿರ್ದೇಶಕರು ಹೊಸ ಮಾದರಿಯಲ್ಲಿ ಕಥೆ ಹೇಳಿದ್ದಾರೆ. ಅಸಾಮಾನ್ಯ ಮೇಕಿಂಗ್ ಈ ಸಿನಿಮಾದಲ್ಲಿ ಇದೆ. ನಿರ್ದೇಶಕರಿಗೆ ಒಳ್ಳೆಯ ಕೆಲಸ ಇದ್ದರೂ ಅದನ್ನು ತೊರೆದು, ಸಿನಿಮಾ ರಂಗ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದೆಯೂ ಇಲ್ಲೇ ನಿಲ್ಲುವ ಛಲ ಅವರಲ್ಲಿ ಇದೆ’ ಎಂದರು ರಾಜ್ವಾಡಿ.

‘ಸಿನಿಮಾದ ನಾಯಕ ಮತ್ತು ಅವನ ಚಿಕ್ಕಪ್ಪ ಒಟ್ಟಿಗೆ ಕುಳಿತು ಎಣ್ಣೆ ಹೊಡೆಯುವ ದೃಶ್ಯ ಸಿನಿಮಾದಲ್ಲಿ ಇದೆ. ಹೀರೊ ಮತ್ತು ಹೀರೊಯಿನ್ ನಡುವಣ ಲವ್ ಸ್ಟೋರಿಗಿಂತಲೂ ಈ ಇಬ್ಬರದ್ದು ದೊಡ್ಡ ಲವ್’ ಎಂದು ರಾಘವಾಂಕ ಚಟಾಕಿ ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.