ಮುಂಬೈ (ಮಹಾರಾಷ್ಟ್ರ): ಶುಕ್ರವಾರಔರಂಗಬಾದ್ ಬಳಿ ರೈಲು ದುರಂತದಲ್ಲಿ ಸಾವನ್ನಪ್ಪಿದವಲಸೆ ಕಾರ್ಮಿಕರು ಸುಮಾರು 34ಕಿಲೋ ಮೀಟರ್ ದೂರ ನಡೆದು ನಂತರ ರೈಲು ಹಳಿಗಳ ಮೇಲೆ ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ನಿರ್ಧರಿಸಿ, ಹಾಗೆಯೇ ನಿದ್ರೆಗೆ ಜಾರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ.

ಸರಕು ತುಂಬಿದ ರೈಲು 16ಮಂದಿಯ ಮೇಲೆ ಶುಕ್ರವಾರ ಬೆಳಗಿನ ಜಾವ ಹರಿದ ಪರಿಣಾಮ ಎಲ್ಲರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದೂರದಲ್ಲಿ ಕುಳಿತಿದ್ದನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಔರಂಗಬಾದ್| ವಲಸೆ ಕಾರ್ಮಿಕರ ಮೇಲೆ ಹರಿದ ಗೂಡ್ಸ್ ರೈಲು; 16 ಮಂದಿ ಸಾವು

ವಲಸೆ ಕಾರ್ಮಿಕರು ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡುತಮ್ಮ ತವರು ರಾಜ್ಯವಾದ ಮಧ್ಯಪ್ರದೇಶದತ್ತ ನಡೆದುಕೊಂಡು ಹೋಗುತ್ತಿದ್ದರು. ಲಾಕ್‌ಡೌನ್ ಕಾರಣ ಬಸ್, ರೈಲು ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರ ರದ್ದಾಗಿದ್ದವು. ಈ ಕಾರಣದಿಂದಾಗಿ ಎಲ್ಲರೂ ರೈಲು ಹಳಿಗಳ ಮೂಲಕ ನಡೆದುಕೊಂಡೇ ಹೋಗಲು ನಿರ್ಧರಿಸಿದ್ದರು. ಸರಕು ಸಾಗಾಣಿಕೆ ರೈಲು
ಸಂಚಾರ ಇದ್ದೇ ಇರುತ್ತದೆ ಎಂಬುದು ಅವರ ಅರಿವಿಗೆ ಬಂದಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಮಿಕರು ಮಹಾರಾಷ್ಟ್ರದ ಜಲ್ನಾದಿಂದ ಭುಸ್ವಾಲ್‌ಗೆ ಹೊರಟಿದ್ದರು. ಇದರ ಅಂತರ 157 ಕಿಲೋ ಮೀಟರ್. ಇವರೆಲ್ಲಾ ಭುಸ್ವಾಲ್ ನಿಂದ 850 ಕಿಲೋಮೀಟರ್ ದೂರದಲ್ಲಿರುವಮಧ್ಯಪ್ರದೇಶದ ಉಮರಿಯಾ ಮತ್ತು ಶಂದೊಲ್ ಎಂಬ ತಮ್ಮ ಊರುಗಳಿಗೆ ತೆರಳುವ ಉದ್ದೇಶ ಹೊಂದಿದ್ದರು.

ಇದರಿಂದಾಗಿ ಗುರುವಾರ ರಾತ್ರಿ 7ಗಂಟೆಗೆ ಜಲ್ನಾದಿಂದ ರೊಟ್ಟಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಹೊತ್ತುಕೊಂಡುಹೊರಟಿದ್ದರು. ಇವರೆಲ್ಲಾ ರಸ್ತೆಯ ಮೂಲಕವೇ ನಡೆದು ಬರುತ್ತಿದ್ದರು. ಔರಂಗಾಬಾದ್ ಸಮೀಪ ರಸ್ತೆಯಿಂದ ರೈಲ್ವೆ ಹಳಿಗಳ ಮೂಲಕ ನಡೆದು ಬಂದಿದ್ದಾರೆ. ಸುಮಾರು 34 ಕಿಲೋಮೀಟರ್ದೂರ ನಡೆದು ಬಂದಿದ್ದರು. ನಡೆದು ನಡೆದೂ ಬಳಲಿದಕಾರ್ಮಿಕರು ಕಾರ್ನಾಡ್ ಹಾಗೂಬದ್ನಾಪುರ್ ರೈಲ್ವೆ ನಿಲ್ದಾಣಗಳ ಮಧ್ಯೆ ಇರುವ ರೈಲ್ವೆ ಹಳಿಗಳಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.

ಇದನ್ನೂ ಓದಿ:ವಲಸೆ ಕಾರ್ಮಿಕರ ಮೇಲೆ ಹರಿದ ರೈಲು| ಪ್ರಧಾನಿ ತೀವ್ರ ಬೇಸರ, ಅಗತ್ಯ ನೆರವಿನ ಭರವಸೆ

ಈ ಸಮಯದಲ್ಲಿ ಕುಳಿತಿದ್ದ ಹಾಗೆಯೇ ನಿದ್ರೆಗೆ ಜಾರಿದ್ದಾರೆ. ಬೆಳಗಿನ ಜಾವ 5.22ರ ಸಮಯದಲ್ಲಿ ಸರಕು ತುಂಬಿಕೊಂಡು ಬಂದ ರೈಲು ಮಲಗಿದ್ದವರ ಮೇಲೆ ಹರಿದಿದೆ. ಜನರು ಸಾಲಾಗಿ ಮಲಗಿರುವುದನ್ನು ಹತ್ತಿರದಿಂದನೋಡಿದ ಲೋಕೊಪೈಲೆಟ್‌ಗಳು ರೈಲು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗಲಿಲ್ಲ. ಆಗಈ ದುರಂತ ಸಂಭವಿಸಿದೆ.ಗಾಯಾಳುಗಳನ್ನು ಔರಂಗಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಇಲಾಖೆಯ ವಕ್ತಾರ ರಾಕೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.