ಮೈಸೂರು:ನಾನು ₹ 25 ಕೋಟಿಗೆ ಖರೀದಿಯಾಗಿದ್ದೇನೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ. ನನ್ನನ್ನು ಖರೀದಿಸಿದ ಆ ವ್ಯಕ್ತಿ ಬರಲಿ ಎಂದು ಕಾಯುತ್ತಿದ್ದೇನೆ ಎಂದು ಅನರ್ಹ ಶಾಸಕಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಚಾಮುಂಡೇಶ್ವರಿ ಬೆಟ್ಟದಲ್ಲಿ ಮಾಧ್ಯಮದವರ ಬಳಿ ಮಾತನಾಡಿದ ಅವರುಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಎಚ್.ವಿಶ್ವನಾಥ್ ವಿರುದ್ಧ ಮಾಡಿದ ಆರೋಪಗಳಿಗೆ ಬದ್ಧ: ಸಾ.ರಾ.ಮಹೇಶ್

‘ನಾನು ಆಣೆ ಮಾಡುತ್ತೇನೆ ಎಂದು ಹೇಳಿಲ್ಲ. ವಿಷಯ ತಿರುಚಬೇಡಿ. ನಾನ್ಯಾಕೆ ಆಣೆ ಮಾಡಲಿ? ಆರೋಪ ಮಾಡಿದ್ದು ಅವರು. ಅವರು ಆರೋಪ ಸಾಬೀತುಪಡಿಸಲಿ. ನನ್ನನ್ನು ಖರೀದಿಸಿದ ವ್ಯಕ್ತಿಯನ್ನು ತೋರಿಸಲಿ’ ಎಂದು ವಿಶ್ವನಾಥ್ ಸವಾಲು ಹಾಕಿದರು.

ಉಭಯ ನಾಯಕರು ಪಟ್ಟು ಬಿಡದ ಕಾರಣ ಬೆಟ್ಟದಲ್ಲಿ ತುಸು ಹೊತ್ತು ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಜತೆಗೆ ಮಹೇಶ್, ವಿಶ್ವನಾಥ್ ಬೆಂಬಲಿಗರೂ ಗದ್ದಲ ಉಂಟುಮಾಡಿದರು. ಬಳಿಕ ವಿಶ್ವನಾಥ್ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ವಿಶ್ವನಾಥ್ ಬೆಟ್ಟದಿಂದ ತೆರಳಿದರು.

ಇನ್ನಷ್ಟು...

ವಿಶ್ವನಾಥ್ ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ಕ್ಷಮೆ ಯಾಚಿಸುವೆ–ಸಾ.ರಾ ಮಹೇಶ್

ರಾಜೀನಾಮೆ ಸಲ್ಲಿಸಿರುವೆ: ಮಹೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.