ತುಮಕೂರು: ಕೊಳೆಗೇರಿ ಜನರು ನಿರಂತರ ಹೋರಾಟದಿಂದ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು. ಕೊಳೆಗೇರಿ ಜನರ ಬಗ್ಗೆ ಕಾಳಜಿ ವಹಿಸುವ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಕೊಳಗೇರಿ ಸಮಿತಿ ಕಾರ್ಯದರ್ಶಿ ಶೆಟ್ಟಾಳಯ್ಯ ಹೇಳಿದರು.

ಸೋಮವಾರ ಸ್ಲಂ ಜನಾಂದೋಲನಾ-ಕರ್ನಾಟಕ ಮತ್ತು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಗರದ ಮಂಡಿಪೇಟೆ, ಶಾಂತಿ ಹೋಟೆಲ್, ಗುಬ್ಬಿವೀರಣ್ಣ ರಂಗಮಂದಿರ ಹಿಂಭಾಗದ ಗುಡಿಸಲು ಪ್ರದೇಶ, ಮಂಡಿಪೇಟೆ ದೊಡ್ಡಚರಂಡಿ ಮತ್ತು ಎಸ್ಎನ್ ಪಾಳ್ಯ ಕೊಳಚೆ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ‘ಭೂಮಿ ಮತ್ತು ವಸತಿಗಾಗಿ ನಮ್ಮ ಮತ’ ಎಂಬ ಪ್ರಚಾರಾಂದೋಲನ ಸಭೆಯಲ್ಲಿ ಮಾತನಾಡಿದರು.

ಕೊಳೆಗೇರಿಗಳೆಂದರೆ ಎಲ್ಲ ಪಕ್ಷಗಳು ಮತ ಬ್ಯಾಂಕ್ ಎಂದು ಭಾವಿಸಿವೆ. ಆದರೆ, ಇಲ್ಲಿನ ಮತದಾರರು ಮತಗಳನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು. ಪ್ರಬುದ್ಧತೆಯಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಕೊಳೆಗೇರಿ ಜನರ ಬಗ್ಗೆ ಸಮಾಜಕ್ಕಿರುವ ಕೀಳು ಭಾವನೆ ಹೋಗಲಾಡಿಸಲು ಈ ಚುನಾವಣೆಯಲ್ಲಿ ರಾಜಕೀಯವಾಗಿ ಪ್ರಬುದ್ಧತೆಯಿಂದ ಮತ ಚಲಾಯಿಸಬೇಕು ಎಂದರು.

ಮಂಡಿಪೇಟೆ ಗೋವಿಂದಮ್ಮ ಮಾತನಾಡಿದರು. ಸಭೆಯಲ್ಲಿ ಮುಖಂಡರಾದ ಭೂಮಿಪಾಲ್, ಮಂಜುನಾಥ್, ಜೈಪಾಲ್, ಮಾರಿಮುತ್ತು , ಮುರುಗ, ಸುಬ್ಬ, ಗೌರಮ್ಮ, ರಾಜಮ್ಮ, ಭೀಮಕ್ಕ, ಅರುಣ್, ಗಾಯಿತ್ರಿ, ಶೃತಿ, ರಘು, ಲತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.