ಬೆಂಗಳೂರು:‘ನಾನು ಪಕ್ಷದಲ್ಲೇ ಇರುತ್ತೇನೆ,ಪಕ್ಷ ಬಿಟ್ಟು ಹೋಗುವುದಿಲ್ಲ.ಇಂದುಮತದಾನ ಇರುವ ಹಿನ್ನೆಲೆ ಬೆಂಗಳೂರಿಗೆ ಬಂದಿದ್ದೇನೆ. ನನ್ನ ವೈಯಕ್ತಿಕ ಕಾರಣಕ್ಕಾಗಿ ಸಿಎಲ್ಪಿ ಸಭೆಗೆ ಬಂದಿರಲಿಲ್ಲ. ಈ ಕುರಿತುನಾಯಕರ ಜೊತೆ ಮಾತನಾಡುತ್ತೇನೆ. ನಾನು ರಾಜೀನಾಮೆ ಕೊಡುವುದಿಲ್ಲ’ ಎಂದು ಅತೃಪ್ತ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಹೇಳಿದ್ದಾರೆ.

‘ಸಿಎಲ್ಪಿ ನಾಯಕರಿಗೆ ನನ್ನ ಗೈರು ಹಾಜರಿನ ಬಗ್ಗೆ ಕಾರಣ ಕೊಟ್ಟಿದ್ದೀನಿ. ನನ್ನ ಸ್ಪಷ್ಟನೆಯಲ್ಲಿ ತಪ್ಪು ಇದರೆ ಸೂಕ್ತ ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು.

ಇದನ್ನೂ ಓದಿ...‘ಕೈ’ಗೆ ಸಿಗದವರು ಬಿಜೆಪಿಗೆ?

‘ಮಲ್ಲಿಕಾರ್ಜುನ ಖರ್ಗೆ ಅವರು ದೊಡ್ಡವರು. ಅವರ ಬಗ್ಗೆ ನಾನು ಮಾತಾಡಲ್ಲ. ಸಮಯ ಬಂದಾಗ ಅವರ ಬಗ್ಗೆ ಮಾತಾಡ್ತೀನಿ. ಸ್ಥಳೀಯವಾಗಿ ನನ್ನ ಕ್ಷೇತ್ರದಲ್ಲಿ ಸಮಸ್ಯೆಗಳಿವೆ ಅದನ್ನು ನಮ್ಮ ನಾಯಕರಿಗೆ ಮನವರಿಕೆ ಮಾಡಿದ್ದೇನೆ’ ಎಂದರು.

‘ಸರ್ಕಾರ ಬೀಳಿಸುವ ವಿಚಾರ ನಾನು ಮಾಡಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಆಲ್ಲ. ನನ್ನ ಕ್ಷೇತ್ರದ ಮತದಾರರಿಗೆ ನಾನು ಸಚಿವನಾಗುವ ಒತ್ತಾಯ ಮಾಡಿದ್ದಾರೆ. ನಾನು ತಪ್ಪು ಮಾಡಿಲ್ಲ. ಸಿದ್ದರಾಮಯ್ಯನವರೇ ನಮ್ಮ ನಾಯಕ’ ಎಂದರು.

ನಾನು ಯಾರನ್ನೂ ಭೇಟಿ ಆಗಿಲ್ಲ. ಬಿಜೆಪಿಯವರಲ್ಲಿ ನನ್ನ ಗೆಳೆಯರಿದ್ದಾರೆ. ಸಂಪರ್ಕದಲ್ಲಿ ಇರದೇ ಇರಕ್ಕಾಗುತ್ತಾ? ನಾನು ಮುಂಬೈಗೆ ಹೋಗಿರಲ್ಲ ಎಂದು ಸ್ಪಷ್ಟನೆ ನೀಡಿದರು.

ಮಹೇಶ್ ಕುಮಟಳ್ಳಿ ಹೇಳಿಕೆ...
ಇವತ್ತೂ ಬಂದಿಲ್ಲ ಅನ್ನುವ ಕಳಂಕ ಹೊತ್ಕೊಳ್ಳೋಕೆ ನಾನು ಸಿದ್ಧ ಇಲ್ಲ. ಅಪ್ಪ ಮಕ್ಕಳ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಸ್ಥಿತಿ ನಮ್ಮದು. ಪಕ್ಷದಲ್ಲಿ ನಾಯಕರ ನಡುವಿನ ಜಗಳದಲ್ಲಿ ನಾವು ಬಡವಾದ್ವಿ. ರಮೇಶ ಜಾರಕಿಹೊಳಿ ವಿರುದ್ಧ ಮಹೇಶ್ ಕುಮಟಳ್ಳಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

‘ಅಸಮಾಧಾನ ಇತ್ತು,ಅದು ವಿಕೋಪಕ್ಕೆ ಹೋಯ್ತು. ಈ ಕುರಿತು ಇಂದು ನಾಯಕರ ಜೊತೆ ಮಾತನಾಡುತ್ತೇನೆ. ರಮೇಶ ಜಾರಕಿಹೊಳಿ ನನ್ನನ್ನು ನಿರ್ಬಂಧಿಸಿರಲಿಲ್ಲ. ಸ್ಪೀಕರ್ ಹಾಗೂಸಿದ್ದರಾಮಯ್ಯ ಎಲ್ಲರನ್ನು ಭೇಟಿ ಮಾಡುತ್ತೇನೆ. ಜತೆಗೆ, ಇಂದಿನಕಲಾಪದಲ್ಲೂ ಭಾಗವಹಿಸುತ್ತೇನೆ’ ಎಂದರು.

ಅತೃಪ್ತರ ಜೊತೆ ನಾನಿಲ್ಲ:ಶಾಸಕ ಬಿ.ನಾಗೇಂದ್ರ
‘ಕೆಲಸ ನಿಮಿತ್ತ ನಾನು ಹಲವು ಬಾರಿ ಮುಂಬೈ ಹೋಗುತ್ತಿರುತ್ತೇನೆ. ಹೊರತುಪಡಿಸಿ ಅತೃಪ್ತ ಶಾಸಕರೊಂದಿಗೆ ನಾನು ಇರಲಿಲ್ಲ’ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಹೇಳಿದರು.

ಗೋಕಾಕ್ನ ಅತೃಪ್ತ ಶಾಸಕರಮೇಶ್ ಜಾರಕಿಹೊಳಿ ಕೂಡ ಸದನದಲ್ಲಿ ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.