ಮೈಸೂರು:ಅನರ್ಹ ಶಾಸಕಅಡಗೂರು ಎಚ್.ವಿಶ್ವನಾಥ್ ವಿರುದ್ಧ ನಾನು ಮಾಡಿರುವ ಆರೋಪಕ್ಕೆ ಈಗಲೂ ಬದ್ಧ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಗುರುವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮದವರ ಬಳಿ ಮಾತನಾಡಿದ ಅವರು, ‘ಸದನದಲ್ಲಿ ನಾನು ಏನು ಮಾತನಾಡಿದ್ದೇನೆಯೋ ಅದು ಸತ್ಯ. ಈಗಾಗಲೇ ತಾಯಿಯ ಸನ್ನಿಧಾನಕ್ಕೆ ಬಂದಿದ್ದೇನೆ. ಸತ್ಯ ಏನೆಂದು ಆಕೆಗೆ ಗೊತ್ತು. ಎಲ್ಲರಿಗೂ ಒಳ್ಳೆದು ಮಾಡಲೆಂದು ಪ್ರಾರ್ಥಿಸಿದ್ದೇನೆ. ನನ್ನ ಹೇಳಿಕೆ, ನಿಲುವಿಗೆ ಬದ್ಧ’ ಎಂದು ಹೇಳಿದರು.

ಇದನ್ನೂ ಓದಿ:ವಿಶ್ವನಾಥ್ ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ಕ್ಷಮೆ ಯಾಚಿಸುವೆ–ಸಾ.ರಾ ಮಹೇಶ್

‘ನಾನುಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಿಲ್ಲ ಅನ್ನೋದು ಸತ್ಯ. ನನ್ನ ವಿರುದ್ಧದ ವೈಯಕ್ತಿಕ ಆರೋಪ ಸಾಬೀತುಪಡಿಸಿದರೆ ಕ್ಷಮೆ ಯಾಚಿಸುವೆ. ರಾಜೀನಾಮೆ ಪತ್ರ ಇನ್ನೂ ವಾಪಸ್ ತೆಗೆದುಕೊಂಡಿಲ್ಲ’ ಎಂದೂ ಅವರು ಹೇಳಿದರು.

ವಿಶ್ವನಾಥ್ ಅವರು ಪ್ರಮಾಣಮಾಡಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ತಾಯಿಯೇ ನೋಡಿಕೊಳ್ಳಲಿ ಎಂದರು. ಆಣೆಗೆ ಕರೆದಿದ್ದಾರೆ, ಬಂದಿದ್ದೇನೆ. ಅವರನ್ನು ಕರೆದುಕೊಂಡು ಬರುತ್ತೇನೆ ಅಂತ ನಾನು ಹೇಳಿಲ್ಲ.
ಸತ್ಯವಂತರು ಯಾರು ಎಂಬುದನ್ನು ತಾಯಿ ಚಾಮುಂಡೇಶ್ವರಿ, ಜನರು ತೀರ್ಮಾನ ಮಾಡುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಅವರ ಬಗ್ಗೆ ಮಾತನಾಡಲಾರೆ ಎಂದು ಮಹೇಶ್ ಹೇಳಿದರು.

ಇದನ್ನೂ ಓದಿ:ರಾಜೀನಾಮೆ ಸಲ್ಲಿಸಿರುವೆ: ಮಹೇಶ್

‘ಅಕ್ಟೋಬರ್ 17ರಂದು ಚಾಮುಂಡಿ ಬೆಟ್ಟಕ್ಕೆ ಬಂದು ನಾನು ₹ 25 ಕೋಟಿಗೆ ಮಾರಾಟವಾಗಿದ್ದೇನೆ ಎಂಬುದನ್ನು ಸಾಬೀತು ಮಾಡಿರಿ’ ಎಂದು ಎಚ್.ವಿಶ್ವನಾಥ್ ಸವಾಲು ಹಾಕಿದ್ದರು. ಇದಕ್ಕೆ ಮರುಸವಾಲು ಹಾಕಿದ್ದ ಮಹೇಶ್, ರಿಯಲ್ ಎಸ್ಟೇಟ್ ಉದ್ಯಮವನ್ನು ಬಿಟ್ಟು ನನ್ನ ವಿರುದ್ಧ ಮಾಡಿರುವ ಬೇರೆಲ್ಲಾ ಆರೋಪಗಳು ನಿಜ ಎಂದು ಚಾಮುಂಡಿ ಎದುರು ಪ್ರಮಾಣ ಮಾಡಲಿ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.