ನವದೆಹಲಿ: ಆನಂದ್ ತೇಲ್ದುಂಬ್ದೆ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲು ಭಾರತ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿವಿವಿಧ ದೇಶಗಳಲ್ಲಿ ಸಕ್ರಿಯವಾಗಿರುವ 90 ಸಂಘಟನೆಗಳು, 50 ವಿದ್ಯಾಸಂಸ್ಥೆಗಳುವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗಟರ್ಸ್ ಅವರಿಗೆ ಮನಸಿ ಸಲ್ಲಿಸಿವೆ. ಈ ಮನವಿಗೆನೋಂ ಚಾಮ್ಸ್ಕಿ ಸೇರಿದಂತೆ ಆರು ಬುದ್ಧಿಜೀವಿಗಳು ಸಹಿ ಮಾಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್ ನೀಡಿದ್ದ ರಕ್ಷಣೆಯ ಭರವಸೆ ಪರಿಗಣಿಸದೆ ತೇಲ್ತುಂಬ್ಡೆ ಬಂಧನ

ನಕ್ಸಲ್ ಚಳವಳಿಯೊಂದಿಗೆ ಸಂಪರ್ಕಮತ್ತು ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ಕೈವಾಡವಿದೆ ಎನ್ನುವ ಅರೋಪ ಹೊರಿಸಿತೇಲ್ದುಂಬ್ದೆ ಮತ್ತು ಇತರ 10 ಹೋರಾಟಗಾರರವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಭುತ್ವದೊಂದಿಗೆ ಭಿನ್ನಮತ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಈ ಆಟೋಪಗಳನ್ನು ಹೊರಿಸಲಾಗಿದೆ. ಇದು ಗಂಭೀರ ಸ್ವರೂಪದ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಭೀಮಾ ಕೊರೆಗಾಂವ್ ವಿಜಯೋತ್ಸವ ನಡೆದ ಡಿ.31, 2017ರಂದು ತೇಲ್ದುಂಬ್ದೆ ಘಟನಾ ಸ್ಥಳದಲ್ಲಿ ಇರಲೇ ಇಲ್ಲ. ಆದರೂ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಪುಣೆ ಪೊಲೀಸರು ನಕಲಿ ಪತ್ರಗಳನ್ನು ಸೃಷ್ಟಿಸಿದ್ದಾರೆ ಎಂದು ದೂರಲಾಗಿದೆ.

ಈ ಹಿನ್ನೆಲೆಯಲ್ಲಿ ನಾವು ವಿಶ್ವಸಂಸ್ಥೆಯು ಶೀಘ್ರ ಭಾರತ ಸರ್ಕಾರದೊಂದಿಗೆ ಮಾತುಕತೆ ಆರಂಭಿಸಬೇಕು. ಡಾ.ತೇಲ್ತುಂಬ್ದೆ ವಿರುದ್ಧ ಹೊರಿಸಿರುವ ಆರೋಪಗಳನ್ನು ತಕ್ಷಣ ಹಿಂಪಡೆಯಲು ಸೂಚಿಸಬೇಕು. ನ್ಯಾಯ ಕಾಪಾಡಬೇಕು ಮತ್ತು ಪ್ರಜಾಪ್ರಭುತ್ವವನ್ನು ಗಂಡಾಂತರದಿಂದ, ಆಡಳಿತಶಾಹಿಯ ದಬ್ಬಾಳಿಕೆಯಿಂದರಕ್ಷಿಸಬೇಕು. ನಿಮ್ಮನ್ನು ಮುಖತಃ ಬೇಟಿಮಾಡಿ ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅವರು ಕೋರಿದ್ದಾರೆ.

ಪತ್ರದ ಪೂರ್ಣ ಪಠ್ಯ ಮತ್ತು ಬೆಂಬಲ ವ್ಯಕ್ತಪಡಿಸಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಪಟ್ಟಿಯನ್ನು ‘ದಿ ವೈರ್’ ಜಾಲತಾಣ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.