‘ಏರು ಮಡಿ’ಯಲ್ಲಿ ಸಾವಯವ ತರಕಾರಿ
ಸಾವಯವ ಹಾಲು ಉತ್ಪಾದನೆಯಲ್ಲಿ ಮುಂಚೂಣಿ ಯಲ್ಲಿರುವ ತುಮಕೂರು ಜಿಲ್ಲೆ ತಿಪಟೂರಿನ ಅಕ್ಷಯ ಕಲ್ಪ ಸಂಸ್ಥೆ, ಈಗ ಸಾವಯವ ತರಕಾರಿ ಬೆಳೆದು-ಗ್ರಾಹಕರಿಗೆ ತಲುಪಿಸುವ ‘ಮಾದರಿ’ಯೊಂದನ್ನು ರೂಪಿಸಿದೆ. ಒಂದು ಎಕರೆಯಲ್ಲಿ ‘ಏರು ಮಡಿ ಪದ್ಧತಿ’ಯಲ್ಲಿ ತರಕಾರಿ ಬೆಳೆದು, ಗ್ರಾಹಕರಿಗೆ ತಲುಪಿಸುತ್ತಿದೆ. ಮುಂದೆ ಈ ವಿಧಾನವನ್ನು ರೈತರು ಅಳವಡಿಸಿಕೊಂಡು ಸಾವಯವ ತರಕಾರಿ ಬೇಡಿಕೆಯನ್ನು ಪೂರೈಸುವಂತಾಗಲಿ ಎಂಬುದು ಸಂಸ್ಥೆಯ ಆಶಯ.Last Updated 8 ಜುಲೈ 2019, 19:30 IST