ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಉದ್ಯೋಗ | ‘ಬ್ರೆಟ್’ನಲ್ಲಿ ಉಚಿತ ನೋಂದಣಿ
ಖಾಸಗಿ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ಯಾಂಕುಗಳಲ್ಲಿ ಒಂದಾದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್(IDFC First), ಇದೇ ಮಾರ್ಚ್ ತಿಂಗಳೊಳಗೆ ರಾಜ್ಯದಾದ್ಯಂತ ಸುಮಾರು 20 ಹೊಸ ಶಾಖೆಗಳನ್ನು ತೆರೆಯಲು ಯೋಜಿಸಿದೆ. ಇದರಿಂದಾಗಿ ಸುಮಾರು 500 ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಮಾತ್ರವಲ್ಲ, 2024ರ ಒಳಗೆ ರಾಜ್ಯದಲ್ಲಿ ಸುಮಾರು 1500 ರಷ್ಟು ಅಧಿಕಾರಿ ಹಂತದ(Officer cadre) ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ.
ದೇಶದಾದ್ಯಂತವಿರುವ ತನ್ನ ಶಾಖೆಗಳಲ್ಲಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬೆಂಗಳೂರಿನ ಬ್ರೆಟ್(BReT) ಸಲ್ಯೂಷನ್ಸ್ ಪ್ರವೈಟ್ ಲಿಮಿಟೆಡ್ ಸಂಸ್ಥೆಯನ್ನು ‘ನೇಮಕಾತಿ ಕನ್ಸಲ್ಟೆಂಟ್ ಸಂಸ್ಥೆ‘ಯಾಗಿ ನಿಯೋಜಿಸಿದೆ. Last Updated 11 ಜನವರಿ 2023, 23:00 IST