ಕೋವಿಡ್: ವಿದೇಶಾಂಗ, ರಕ್ಷಣಾ ಖಾತೆ ಸಚಿವರನ್ನು ಬದಲಿಸಿದ ಬ್ರೆಜಿಲ್ ಅಧ್ಯಕ್ಷ
ರಿಯೊ ಡಿ ಜನೈರೊ: ಕೋವಿಡ್ ಲಸಿಕೆ ಸಂಗ್ರಹದಲ್ಲಿ ಹಿಂದುಳಿದ ಕಾರಣಗಳಿಂದ ಬ್ರೆಜಿಲ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಎರ್ನೆಸ್ಟೊ ಅರೌಜೊ ಭಾರಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ, ವಿದೇಶಾಂಗ ಖಾತೆ ಸೇರಿದಂತೆ ಸಂಪುಟ ಸಚಿವರ ಬದಲಾವಣೆ ಮಾಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸುವ ಬ್ರೆಜಿಲ್‌ನಲ್ಲಿ ಕೋವಿಡ್–19 ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.Last Updated 30 ಮಾರ್ಚ್ 2021, 6:08 IST