ಯುವ ಮನಸು; ಹೊಸ ಕನಸು| ಸಣ್ಣ ಕಥೆಗಳನ್ನು ಬರೆಯುವಾಸೆ
ಈ ವರ್ಷದ ಆಗಸ್ಟ್ನಲ್ಲಿ ಪ್ರಕಟಗೊಂಡಿದ್ದ ನನ್ನ ಮೊದಲ ಕಾದಂಬರಿ ‘ಹಾಣಾದಿ’ ಓದುಗರಿಂದ, ವಿಮರ್ಶಕರಿಂದ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹೊಸ ವರ್ಷದ ಮೊದಲ ಹೆಜ್ಜೆಯಲ್ಲಿ ಎರಡನೇ ಮುದ್ರಣಕ್ಕೆ ‘ಹಾಣಾದಿ’ಯನ್ನು ಇನ್ನೊಂದಿಷ್ಟು ತಿದ್ದಿ-ತೀಡಿ ಪ್ರಕಟಿಸಬೇಕಿದೆ. ನನಗೆ ಮೊದಲಿನಿಂದಲೂ ಕಾದಂಬರಿಗಳ ಬಗ್ಗೆ ವಿಶೇಷ ಆಸಕ್ತಿ. ಲೈಬ್ರರಿಯ ಕಪಾಟುಗಳಲ್ಲಿ, ಹಳೆ ಪುಸ್ತಕದ ಅಂಗಡಿಗಳ ಗುಂಪುಗಳಲ್ಲಿ ನಾನು ಯಾವಾಗಲೂ ಹುಡುಕುವುದು ಇವುಗಳನ್ನೆ.Last Updated 28 ಡಿಸೆಂಬರ್ 2019, 19:30 IST