ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Water Cannon

ADVERTISEMENT

ಹರಿಯಾಣದಲ್ಲಿ ರೈತರ ಪ್ರತಿಭಟನೆ: ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಜಲಫಿರಂಗಿಯನ್ನು ಪ್ರಯೋಗ ಮಾಡಿದ್ದಾರೆ.
Last Updated 1 ಅಕ್ಟೋಬರ್ 2021, 8:18 IST
ಹರಿಯಾಣದಲ್ಲಿ ರೈತರ ಪ್ರತಿಭಟನೆ: ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

ಹರಿಯಾಣ ಸಿಎಂ ಮನೆಗೆ 'ಘೇರಾವ್' ಯತ್ನ: ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತಡೆ

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಯುವ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಹಾರಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಮನೆ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ್ದರಿಂದಾಗಿ ಬುಧವಾರ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದಾರೆ. ನಂತರ ಪೊಲೀಸರು ಹಲವಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಖಟ್ಟರ್ ಅವರ ಅಧಿಕೃತ ನಿವಾಸವನ್ನು 'ಘೇರಾವ್' ಹಾಕಲು ಯೋಜಿಸಿರುವುದಾಗಿ ಪ್ರತಿಭಟನಾಕಾರರು ಯೋಜಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತ ಮಾತನಾಡಿ, 'ದೆಹಲಿ ಚಲೋ'ಗೆ ತೆರಳುತ್ತಿದ್ದ ಸಾವಿರಾರು ರೈತರನ್ನು ತಡೆದಿದ್ದಕ್ಕಾಗಿ ಮತ್ತು ಅವರ ಮೇಲೆ ಜಲ ಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದಕ್ಕಾಗಿ ಖಟ್ಟರ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
Last Updated 2 ಡಿಸೆಂಬರ್ 2020, 13:03 IST
ಹರಿಯಾಣ ಸಿಎಂ ಮನೆಗೆ 'ಘೇರಾವ್' ಯತ್ನ: ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತಡೆ

ರೈತರ ತಡೆಯಲು ಬಲಪ್ರಯೋಗ: ಬಿಜೆಪಿ ವಿರುದ್ಧ ಹರಿಹಾಯ್ದ ಎಡಪಕ್ಷಗಳು

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ರಾಷ್ಟ್ರ ರಾಜಧಾನಿಯತ್ತ ತೆರಳುತ್ತಿದ್ದ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಬಳಸಿದ ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರಕ್ಕೆ ಎಡ ಪಕ್ಷಗಳು ಗುರುವಾರ ಛಾಟಿ ಬೀಸಿವೆ. ಇದು ಬಿಜೆಪಿಯ 'ರೈತ ವಿರೋಧಿ ಮುಖ'ವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿವೆ. ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸಲು 'ದೆಹಲಿ ಚಲೊ' ಕೈಗೊಂಡಿದ್ದ ಪಂಜಾಬ್‌ ರೈತರು, ಹರಿಯಾಣ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರ ಜಲಫಿರಂಗಿಗಳನ್ನು, ಅಶ್ರುವಾಯುವನ್ನು ಎದುರಿಸಬೇಕಾಯಿತು.
Last Updated 26 ನವೆಂಬರ್ 2020, 15:19 IST
ರೈತರ ತಡೆಯಲು ಬಲಪ್ರಯೋಗ: ಬಿಜೆಪಿ ವಿರುದ್ಧ ಹರಿಹಾಯ್ದ ಎಡಪಕ್ಷಗಳು

ವಿದ್ಯುತ್ ದರ ಏರಿಕೆ ಖಂಡಿಸಿ ಸಿಎಂ ಅಮರಿಂದರ್ ಸಿಂಗ್ ಮನೆ ಮುಂದೆ ಎಎಪಿ ಪ್ರತಿಭಟನೆ

ಮುಖ್ಯಮಂತ್ರಿ ನಿವಾಸದ ಕಡೆಗೆ ತೆರಳುವುದನ್ನು ತಪ್ಪಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದು, ಭಗವಂತ್ ಮನ್, ಹರ್ಪಾಲ್ ಚೀಮಾ ಮತ್ತು ಶಾಸಕ ರುಪಿಂದರ್ ರುಬಿ ಅವರನ್ನು ವಶಕ್ಕೆ ಪಡೆದಿದ್ದಾರೆ.
Last Updated 10 ಜನವರಿ 2020, 12:56 IST
ವಿದ್ಯುತ್ ದರ ಏರಿಕೆ ಖಂಡಿಸಿ ಸಿಎಂ ಅಮರಿಂದರ್ ಸಿಂಗ್ ಮನೆ ಮುಂದೆ ಎಎಪಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT
ADVERTISEMENT