ಐವನ್ ಡಿಸೋಜ, ಪತ್ನಿಗೆ ಕೋವಿಡ್
ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜ ಹಾಗೂ ವೈದ್ಯೆಯಾಗಿರುವ ಅವರ ಪತ್ನಿ ಡಾ.ಕವಿತಾ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಐವನ್ ಡಿಸೋಜ ಮತ್ತು ಅವರ ಪತ್ನಿ ಸ್ವಯಂಪ್ರೇರಿತರಾಗಿ ಕೋವಿಡ್ ತಪಾಸಣೆಗಾಗಿ ಶುಕ್ರವಾರ ಸಂಜೆ ಗಂಟಲಿನ ದ್ರವದ ಮಾದರಿಗಳನ್ನು ನೀಡಿದ್ದರು. ಶನಿವಾರ ವರದಿಗಳು ಲಭಿಸಿದ್ದು, ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮಾಹಿತಿಯನ್ನು ಐವನ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.Last Updated 1 ಆಗಸ್ಟ್ 2020, 16:19 IST