ಆ್ಯಪಲ್ ಕಂಪನಿಯು ಆ್ಯಪಲ್ ವಾಚ್ ಬಳಕೆದಾರರಿಗೆ ಆರೋಗ್ಯ ಕಾಯ್ದುಕೊಳ್ಳುವ ಸ್ಫರ್ಧಾ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಫಿಟ್ನೆಸ್ ಕುರಿತಾದ ಅರಿವು ಹೆಚ್ಚಿಸಿದೆ.

ಫೆ.15ರಿಂದ ಆ್ಯಪಲ್ 'ಗೆಟ್ ಆ್ಯಕ್ಟಿವ್ ಇಂಡಿಯಾ' (ಭಾರತೀಯರೇ, ಸಕ್ರಿಯರಾಗಿರಿ) ಎಂಬ ಹೆಸರಿನಲ್ಲಿ ಈ ಫಿಟ್ನೆಸ್ ಅಭಿಯಾನವನ್ನು ಒಂದು ತಿಂಗಳ ಕಾಲ ನಡೆಸಿತ್ತು. ದೇಶಾದ್ಯಂತ ಆ್ಯಪಲ್ ವಾಚ್ ಬಳಕೆದಾರರು ಮುಕ್ತವಾಗಿ ಇದರಲ್ಲಿ ಪಾಲ್ಗೊಂಡಿದ್ದರು.

ಏನಿದು ಸವಾಲು?
ಆ್ಯಪಲ್ ಸಾಧನಗಳ ಬಳಕೆದಾರರಿಗೆ ಆ್ಯಪಲ್ ಹೆಲ್ತ್ ಎಂಬ ಆ್ಯಪ್‌ನ ಪರಿಚಯವಿದೆ. ಆ್ಯಪಲ್ ವಾಚ್‌ಗೆ ಅದನ್ನು ಸಂಪರ್ಕಿಸುವ ಮೂಲಕ, ದೈಹಿಕ ಚಟುವಟಿಕೆಗಳ ಮೂಲಕ ಸಕ್ರಿಯವಾಗಿದ್ದರೆ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಇದು ಉತ್ತೇಜನ ನೀಡುತ್ತಾ ಇರುತ್ತದೆ. ತುಂಬಾ ಹೊತ್ತು ಕುಳಿತಿದ್ದರೆ ಅಥವಾ ನಿಷ್ಕ್ರಿಯವಾಗಿದ್ದರೆ, ಎದ್ದು ನಿಂತು ಸಕ್ರಿಯವಾಗಲು ಅದು ಸೂಚನೆ ನೀಡುತ್ತದೆ. ಅದೇ ರೀತಿ ಎಷ್ಟು ದೂರ ನಡೆದಿರಿ, ಎಷ್ಟು ಹೊತ್ತು ವ್ಯಾಯಾಮ ಮಾಡಿದಿರಿ ಎಂಬುದನ್ನು ಆ್ಯಪಲ್ ಸಾಧನದಲ್ಲಿರುವ ಸೆನ್ಸರ್‌ಗಳು ಹಾಗೂ ಆ್ಯಪ್‌ಗಳು ಲೆಕ್ಕಾಚಾರ ಹಾಕುತ್ತವೆ. ಇದರ ಆಧಾರದಲ್ಲಿ ದೇಹದಲ್ಲಿ ಎಷ್ಟು ಕ್ಯಾಲೊರಿ ಬರ್ನ್ ಆಯಿತು ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ.

ಚಲನೆ, ಎದ್ದು ನಿಲ್ಲುವಿಕೆ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ವೃತ್ತಗಳನ್ನು ಪೂರ್ಣಗೊಳಿಸಿದರೆ ಅಂಕಗಳನ್ನು ನೀಡಲಾಗುತ್ತದೆ. ಈ ಅಂಕಗಳ ಆಧಾರದಲ್ಲಿ, ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿರುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಬಳಕೆದಾರರಿಗೆ ಆ್ಯಪಲ್ ವಾಚ್ ಮೂಲಕ ಬ್ಯಾಡ್ಜ್‌ಗಳನ್ನು ನೀಡಲಾಗುತ್ತದೆ ಮತ್ತು ಇನ್ನಷ್ಟು ಚಟುವಟಿಕೆಯಿಂದಿರಲು ಪ್ರೇರೇಪಿಸಲಾಗುತ್ತದೆ.

ಈ ಸವಾಲು ಕಾರ್ಯಕ್ರಮದಲ್ಲಿ ಬಳಕೆದಾರರು ವ್ಯಕ್ತಿಗತವಾಗಿ ಪರಸ್ಪರ ಸ್ಫರ್ಧೆಯಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ, ಪ್ರಮುಖ ನಗರಗಳು ಕೂಡ ಒಟ್ಟಾರೆಯಾಗಿ ಸ್ಫರ್ಧಾತ್ಮಕವಾದ ಫಲಿತಾಂಶಗಳನ್ನು ತಂದೊಡ್ಡಿವೆ.

ದೇಶದಾದ್ಯಂತ ಸುಮಾರು 16400ಕ್ಕೂ ಹೆಚ್ಚು ಆ್ಯಪಲ್ ವಾಚ್ ಬಳಕೆದಾರರು ಈ ಅಭಿಯಾನದಲ್ಲಿ ಭಾಗವಹಿಸಿದ್ದು, ಒಂದು ತಿಂಗಳ ಅವಧಿಯಲ್ಲಿ ಒಟ್ಟಾರೆಯಾಗಿ ಸುಮಾರು 12 ಕೋಟಿ ದೈಹಿಕ ಕ್ಯಾಲೊರಿ ಬರ್ನ್ ಮಾಡಿದ್ದಾರೆ.

ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ಪುಣೆ ಮತ್ತು ಚಂಡೀಗಢ ಮುಂತಾದ ನಗರಗಳಲ್ಲಿ ಗರಿಷ್ಠ ಅಂಕಿಗಳನ್ನು ಪಡೆಯುವ ಉತ್ಸಾಹದಲ್ಲಿ ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆಯಿಂದಿದ್ದು, ಹೆಚ್ಚು ಹೆಚ್ಚು ಕ್ಯಾಲೊರಿ ಬರ್ನ್ ಮಾಡುವ ಮೂಲಕ ತಮ್ಮ ದೈಹಿಕ ಸ್ವಾಸ್ಥ್ಯ ವರ್ಧಿಸಲು ಶ್ರಮಿಸಿದ್ದಾರೆ.

ಒಟ್ಟಾರೆಯಾಗಿ ಈ ಸವಾಲಿನಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ದೆಹಲಿ ಹಾಗೂ ಮುಂಬೈಗಳು ನಂತರದ ಸ್ಥಾನ ಗಳಿಸಿವೆ.

ಆ್ಯಪಲ್ ಸವಾಲಿನ ಫಲಿತಾಂಶ ಇಲ್ಲಿದೆ:

ಭಾಗವಹಿಸಿದವರು: 16400ಕ್ಕೂ ಹೆಚ್ಚು ಮಂದಿ
ಒಟ್ಟಾರೆ ಬರ್ನ್ ಆಗಿರುವ ಕ್ಯಾಲೊರಿ ಪ್ರಮಾಣ: 11.80 ಕೋಟಿ.
ಒಟ್ಟು ವ್ಯಾಯಾಮ: 82 ಲಕ್ಷ ನಿಮಿಷ

ನಗರಗಳ ಶ್ರೇಯಾಂಕ
1. ಭಾರತದ ಇತರ ನಗರಗಳು
2. ಬೆಂಗಳೂರು
3. ದೆಹಲಿ NCR
4. ಮುಂಬೈ
5. ಹೈದರಾಬಾದ್
6. ಚೆನ್ನೈ
7. ಪುಣೆ
8. ಅಹಮದಾಬಾದ್
9. ಚಂಡೀಗಢ
10. ಕೋಲ್ಕತಾ
11. ಜೈಪುರ
12. ಲಖನೌ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.