ಗೂಗಲ್‌ನ ವಿಡಿಯೊ ಕಾನ್ಫರೆನ್ಸ್ ವೇದಿಕೆ 'ಮೀಟ್' (Meet)ಈಗ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಜಿಮೇಲ್ ಬಳಸುತ್ತಿರುವವರಿಗೆ ಸಿಗಲಿದೆ. ಕಳೆದ ವಾರದಿಂದಲೇ ಐಫೋನ್ ಬಳಕೆದಾರರಿಗೆ ಗೂಗಲ್ ಮೀಟ್ ಲಭ್ಯವಾಗಿದೆ.

ಜಿಮೇಲ್ ಜೊತೆಗೆ ಮೀಟ್ ಸಂಯೋಜಿಸುವುದಾಗಿ ಕಳೆದ ತಿಂಗಳು ಗೂಗಲ್ ಪ್ರಕಟಿಸಿತ್ತು. ವಿಡಿಯೊ ಕಾನ್ಫರೆನ್ಸಿಂಗ್ ವೇದಿಕೆಯನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಗೂಗಲ್ ಪ್ರಯತ್ನಿಸುತ್ತಿದೆ. ಜಿ ಸ್ಯೂಟ್ ಬಳಕೆದಾರರಿಗೆ (ಶುಲ್ಕ ಪಾವತಿಸಿ ಬಳಸುವ ಜಿಮೇಲ್) ಮಾತ್ರವೇ ಗೂಗಲ್ ಮೀಟ್ ಬಳಕೆಗೆ ಅವಕಾಶವಿತ್ತು. ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಮನೆಯಿಂದಲೇ ಕಾರ್ಯನಿರ್ವಹಣೆ, ಆನ್‌ಲೈನ್ ತರಗತಿಗಳು, ವಿಡಿಯೊ ಮೀಟಿಂಗ್ ಹೆಚ್ಚಿದ ಪರಿಣಾಮ ಗೂಗಲ್ ತನ್ನ ಎಲ್ಲ ಜಿಮೇಲ್ ಬಳಕೆದಾರರಿಗೆ ಮೀಟ್ ಬಳಸುವ ಅವಕಾಶ ನೀಡಿದೆ.

ಮೀಟ್ ಸಂಯೋಜನೆಯಾಗಿರುವುದು ಮೊದಲಿಗೆ ಜಿ ಸ್ಯೂಟ್ ಗ್ರಾಹಕರ ಆ್ಯಂಡ್ರಾಯ್ಡ್ ಸಾಧನಗಳಲ್ಲಿರುವ ಜಿಮೇಲ್ ಅಪ್ಲಿಕೇಷನ್‌ನಲ್ಲಿ ಕಾಣಸಿಗಲಿದೆ. ಜಿಮೇಲ್‌ನಲ್ಲಿ 'ಮೇಲ್' ಮತ್ತು 'ಮೀಟ್' ಎರಡು ಆಯ್ಕೆಗಳು ಗೋಚರಿಸಲಿವೆ. ಮೀಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ, ಹೊಸ ಪುಟ ತೆರೆದುಕೊಳ್ಳುತ್ತದೆ; ಅಲ್ಲಿ ಹೊಸ ಮೀಟಿಂಗ್ ಶುರು ಮಾಡುವುದು ಅಥವಾ ನಡೆಯುತ್ತಿರುವ ಮೀಟಿಂಗ್‌ಗೆ ಸೇರಿಕೊಳ್ಳುವುದು ಸಾಧ್ಯವಾಗುತ್ತದೆ.

ಮೀಟ್ ಆಯ್ಕೆ ನಿಮ್ಮ ಜಿಮೇಲ್‌ಗೂ ಸಂಯೋಜನೆಯಾದರೆ ಟ್ಯಾಬ್ ಗೋಚರಿಸುತ್ತದೆ. ಪ್ರಸ್ತುತ ಗೂಗಲ್ ಮೀಟ್ ಆ್ಯಪ್ ಮೂಲಕ ಒಮ್ಮೆಗೆ 250 ಜನ ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಭಾಗಿಯಾಗಬಹುದು.

ಕೋವಿಡ್ ಹೆಚ್ಚಳದೊಂದಿಗೆ ಜಗತ್ತಿನಾದ್ಯಂತ ಜನಪ್ರಿಯವಾದ ಅಪ್ಲಿಕೇಷನ್ ಜೂಮ್. ಅದಕ್ಕೆ ಪ್ರತಿಸ್ಪರ್ಧಿಯಾಗಿ ಗೂಗಲ್ ವಿಡಿಯೊ ಕಾನ್ಫರೆನ್ಸ್ ವೇದಿಕೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಪ್ರಯತ್ನದಲ್ಲಿದೆ. ಗೂಗಲ್‌ನ ಮತ್ತೊಂದು ಆ್ಯಪ್ ಡುಯೊದಲ್ಲಿ ಈಗ 32 ಜನರು ಭಾಗಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.