ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಗಲ್‌ನ AI ಜೆಮಿನಿ ಆ್ಯಪ್‌ ಭಾರತದ 8 ಭಾಷೆಗಳಲ್ಲಿ ಇನ್ನು ಲಭ್ಯ

Published : 18 ಜೂನ್ 2024, 10:35 IST
Last Updated : 18 ಜೂನ್ 2024, 10:35 IST
ಫಾಲೋ ಮಾಡಿ
Comments

ನವದೆಹಲಿ: ಗೂಗಲ್‌ನ ಕೃತಕ ಬುದ್ದಿಮತ್ತೆ ಸಹಾಯಕ (ಎಐ ಅಸಿಸ್ಟೆಂಟ್‌) ಜೆಮಿನಿ ಆ್ಯಪ್‌ ರೂಪದಲ್ಲಿ ಇನ್ನು ಮುಂದೆ ಭಾರತದಲ್ಲಿ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಲಭ್ಯವಿದೆ ಎಂದು ಗೂಗಲ್‌ ಹೇಳಿದೆ. 

ಇಂಗ್ಲಿಷ್‌, ಹಿಂದಿ ಮತ್ತು ಎಂಟು ಭಾರತೀಯ ಭಾಷೆಗಳಲ್ಲಿ ಜೆಮಿನಿ ಎಐ ಅನ್ನು ಬಳಸಬಹುದಾಗಿದೆ. 

ಆದರೆ ಐಫೋನ್‌ ಬಳಕೆದಾರರಿಗೆ ಇನ್ನು ಕೆಲವು ವಾರಗಳ ನಂತರ ಗೂಗಲ್‌ ಮೂಲಕ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜೆಮಿನಿಯ ಉಪಾಧ್ಯಕ್ಷ, ಎಂಜಿನಿಯರ್‌ ಅಮರ್‌ ಸುಬ್ರಮಣ್ಯ ತಿಳಿಸಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ‘ಗೂಗಲ್‌ನ ಎಐ ಅಸಿಸ್ಟೆಂಟ್‌ ಜೆಮಿನಿ ಭಾರತದಲ್ಲಿ ದೊರೆಯುತ್ತಿದೆ. ವಿದ್ಯಾರ್ಥಿಗಳಿಂದ ಕೋಡ್‌ ಡೆವಲಪರ್ಸ್‌ವರೆಗೆ, ಕುತೂಹಲಕಾರಿ ಅಂಶಗಳನ್ನು ತಿಳಿದುಕೊಳ್ಳುವವರಿಗಾಗಿ, ಜನರ ದೈನಂದಿನ ಜೀವನದಲ್ಲಿ ತಮ್ಮ ಉತ್ಪಾದಕತೆ, ಕಲಿಕೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಜೆಮಿನಿ ಸಹಾಯ ಮಾಡಲಿದೆ’ ಎಂದಿದ್ದಾರೆ.

ಭಾರತದಲ್ಲಿ ಜೆಮಿನಿ 1.5 ಪ್ರೊ ಆವೃತ್ತಿ ದೊರೆಯಲಿದೆ. ಜೆಮಿನಿ ಅಡ್ವಾನ್ಸ್‌ಡ್‌ ವಿಸ್ತೃತ ಸಾಮರ್ಥ್ಯವು ತ್ವರಿತ ಉತ್ತರ ಪಡೆಯಲು, ದೊಡ್ಡ ಪ್ರಮಾಣದ ದಾಖಲೆ ಮತ್ತು ಇಮೇಲ್‌ಗಳನ್ನು ಅಪ್‌ಲೋಡ್ ಮಾಡಲು ನೆರವಾಗಲಿದೆ. ಬಳಕೆದಾರರ ದತ್ತಾಂಶದ ಗೋಪ್ಯತೆ ಕಾಪಾಡುವುದು ಜೆಮಿನಿಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಜೆಮಿನಿ ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು. ಮೋದಿ ಯಾರು ಎಂಬ ಪ್ರಶ್ನೆಗೆ ಪ್ರಭುತ್ವವಾದಿ ಎಂದು ಉತ್ತರಿಸಿತ್ತು. ಜತೆಗೆ ಶ್ವೇತ ವರ್ಣಿಯರ ವಿರೋದ್ದವೂ ಮಾಹಿತಿ ನೀಡಿ ವಿವಾದಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT