ಸ್ಯಾಮ್‌ಸಂಗ್ ಕಂಪನಿಯ ಪಾಲುದಾರ ಕ್ವಾಲ್ಕಂ, ಅಗತ್ಯ ಸಂಖ್ಯೆಯಲ್ಲಿ ಚಿಪ್‌ಗಳನ್ನು ಪೂರೈಕೆ ಮಾಡದ ಕಾರಣ ಈ ವರ್ಷ ನೂತನ ಸರಣಿಯ ಗ್ಯಾಲಕ್ಸಿ ನೋಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದು ಅನುಮಾನ ಎನ್ನಲಾಗಿದೆ.

ಷೇರುಹೂಡಿಕೆದಾರರ ವಾರ್ಷಿಕ ಸಭೆಯಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಸಿಇಒ ಕೊ ಡಾಂಗ್ ಜಿನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಬೇಡಿಕೆಗೆ ತಕ್ಕಷ್ಟು ಸೆಮಿಕಂಡಕ್ಟರ್ ಪೂರೈಕೆಯಿಲ್ಲ ಎಂದಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಇದರಿಂದಾಗಿ ಈ ವರ್ಷ ಎರಡು ಫ್ಲ್ಯಾಗ್‌ಶಿಪ್ ಫೋನ್ ಬಿಡುಗಡೆ ಮಾಡುವುದು ಸ್ಯಾಮ್‌ಸಂಗ್ ಕಷ್ಟವಾಗಲಿದ್ದು, ನೋಟ್ 21 ಸರಣಿ ಮಾರುಕಟ್ಟೆಗೆ ಪ್ರವೇಶಿಸುವುದು ಸಾಧ್ಯವಾಗಲಿಕ್ಕಿಲ್ಲ ಎನ್ನಲಾಗಿದೆ.

ಹೀಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಹೊಸ ಸರಣಿಯನ್ನು 2022ಕ್ಕೆ ಬಿಡುಗಡೆ ಮಾಡಲು ಮುಂದಾಗಿದೆ. ಇದರಿಂದಾಗಿ ಹೊಸ ನೋಟ್ ಸರಣಿ ಖರೀದಿಸಲು ಬಯಸುವವರು ಇನ್ನೊಂದು ವರ್ಷ ಕಾಯಬೇಕಿದೆ.

ಸ್ಯಾಮ್‌ಸಂಗ್ ಇತ್ತೀಚೆಗೆ ಗ್ಯಾಲಕ್ಸಿ ಎಸ್21 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಮಾತ್ರವಲ್ಲದೆ, ಸೋನಿ ಮತ್ತು ಮೈಕ್ರೋಸಾಫ್ಟ್ ಕೂಡ ಚಿಪ್ ಪೂರೈಕೆಯಲ್ಲಿ ಕೊರತೆ ಸಮಸ್ಯೆ ಎದುರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.