ಸ್ಯಾನ್ ಫ್ರಾನ್ಸಿಸ್ಕೊ: ಸರ್ಚ್ ಎಂಜಿನ್ ದೈತ್ಯ ಗೂಗಲ್, ಮಗದೊಮ್ಮೆ ತೊಂದರೆಯನ್ನು ಎದುರಿಸಿದೆ. ಗೂಗಲ್ನ ಕ್ಲೌಡ್ ಹೋಸ್ಟಿಂಗ್ ಜಿ-ಮೇಲ್ ಸೇವೆಯಲ್ಲಿ ಮಂಗಳವಾರ ಅಡಚಣೆಯಾಗಿದೆ. ಸೋಮವಾರವೂ ಗೂಗಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಈ ಬಗ್ಗೆ ಬಳಕೆದಾರರು ಗೂಗಲ್ಗೆ ದೂರು ಸಲ್ಲಿಸಿದ್ದಾರೆ. ಮಂಗಳವಾರ ಮಧ್ಯರಾತ್ರಿ ಗೂಗಲ್ ಜಿ-ಮೇಲ್ ಸೇವೆಗೆ ಅಡಚಣೆಯಾಗಿದ್ದು, ಸುಮಾರು ಎರಡೂವರೆ ತಾಸುಗಳ ಬಳಿಕ ಪುನಃಸ್ಥಾಪಿಸಲಾಗಿದೆ.

ಬಳಕೆದಾರರಿಗೆ ಎದುರಾಗಿರುವ ಅನಾನುಕೂಲತೆಗಾಗಿ ಕ್ಷಮಿಯಾಚಿಸುತ್ತೇವೆ. ನಿಮ್ಮ ತಾಳ್ಮೆ ಹಾಗೂ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದು ಗೂಗಲ್ ಸ್ಟೇಟಸ್ ಡ್ಯಾಶ್ಬೋರ್ಡ್ ನೋಟಿಸ್ನಲ್ಲಿ ತಿಳಿಸಿದೆ.

ಸಿಸ್ಟಂ ವಿಶ್ವಾಸಾರ್ಹತೆಯು ಗೂಗಲ್ನಲ್ಲಿ ಮೊದಲ ಆದ್ಯತೆಯಾಗಿದೆ. ಹಾಗೆಯೇ ನಮ್ಮ ಸಿಸ್ಟಂಗಳನ್ನು ಉತ್ತಮಗೊಳಿಸಲು ನಿರಂತರ ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಗೂಗಲ್ ಸೇವೆಗಳಲ್ಲಿ ವ್ಯತ್ಯಯ: ಮರಳಿದ ಜಿಮೇಲ್, ಯುಟ್ಯೂಬ್

ಹಾಗಿದ್ದರೂ ಎಷ್ಟು ಬಳಕೆದಾರರಿಗೆ ತೊಂದರೆ ಎದುರಾಗಿದೆ ಎಂಬುದರ ಬಗ್ಗೆ ವಿವರವನ್ನು ಗೂಗಲ್ ಬಹಿರಂಗಪಡಿಸಿಲ್ಲ. ಹಾಗೆಯೇ ಅಡಚಣೆಯ ಹಿಂದಿನ ನಿಖರ ಕಾರಣವನ್ನು ತಿಳಿಸಿಲ್ಲ.

ಸೋಮವಾರದಂದು ಗೂಗಲ್ ಸೇವೆಗಳಲ್ಲಿ ಭಾರಿ ಅಡಚಣೆಯಾಗಿತ್ತು. ಗೂಗಲ್ ಸರ್ಚ್ ಎಂಜಿನ್, ಜಿ-ಮೇಲ್, ಯೂಟ್ಯೂಬ್ ಸೇರಿದಂತೆ ಪ್ರಮುಖ ಸೇವೆಗಳಲ್ಲಿ ಬಳಕೆದಾರರಿಗೆ ತೊಂದರೆ ಎದುರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.