ಬೆಂಗಳೂರು: ವೊಡಾಫೋನ್ ಐಡಿಯಾ ಲಿಮಿಟೆಡ್, ಬೆಂಗಳೂರಿನಲ್ಲಿನ ತನ್ನ 3,200 ಮೊಬೈಲ್ ಸೈಟ್ಗಳನ್ನು 3ಜಿ ತರಂಗಾಂತರದಿಂದ 4ಜಿ ತರಂಗಾಂತರಕ್ಕೆ ಯಶಸ್ವಿಯಾಗಿ ಮೇಲ್ದರ್ಜೆಗೆ ಏರಿಸಿದ್ದು, ನಗರದಲ್ಲಿ ಕಂಪನಿಯ ಗಿಗಾನೆಟ್ 4ಜಿ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಳಗೊಂಡಿದೆ.

2019ರ ಕೊನೆಯಲ್ಲಿ 900 ಮೆಗಾಹರ್ಟ್ಸ್ ತರಂಗಾಂತರಗಳ 5 ಮೆಗಾಹರ್ಟ್ಸ್ಗಳನ್ನು ಹೆಚ್ಚುವರಿಯಾಗಿ ಅಳವಡಿಸಿದ್ದರಿಂದ ಈ ಬದಲಾವಣೆ ಸಾಧ್ಯವಾಗಿದೆ. ಬೆಂಗಳೂರಿನಲ್ಲಿನ ವೊಡಾಫೋನ್ ಐಡಿಯಾ (Vi) ಗ್ರಾಹಕರು ಮನೆ, ಕಚೇರಿ ಒಳಗೆ ಉತ್ತಮ ಮೊಬೈಲ್ ಸಂಪರ್ಕದ ಜತೆಗೆ ಗರಿಷ್ಠ ವೇಗದ ದತ್ತಾಂಶ ಡೌನ್ಲೋಡ್ ಸೌಲಭ್ಯವನ್ನೂ ಪಡೆದುಕೊಳ್ಳಲಿದ್ದಾರೆ. ಗ್ರಾಹಕರಿಗೆ ವ್ಯಾಪಕ ಕವರೇಜ್, ಉತ್ತಮ ಗುಣಮಟ್ಟದ ಸಂಪರ್ಕ ಮತ್ತು ಕರೆಗಳ ನಿರ್ವಹಣಾ ಸಾಮರ್ಥ್ಯ ಹೆಚ್ಚಳ ಲಭಿಸಲಿವೆ.

ಬ್ರಾಡ್ಬ್ಯಾಂಡ್ ಪರೀಕ್ಷೆ ಮತ್ತು ಅಂತರ್ಜಾಲ ಆಧರಿಸಿದ ಸಂಪರ್ಕ ಜಾಲದ ದೋಷ ಪತ್ತೆಹಚ್ಚುವ ಅಪ್ಲಿಕೇಷನ್ಗಳ ಜಾಗತಿಕ ಪ್ರಮುಖ ಕಂಪನಿಯಾಗಿರುವ ಉಕ್ಲಾ, ವೊಡಾಫೋನ್ ಐಡಿಯಾದ ಗಿಗಾನೆಟ್, ಭಾರತದಲ್ಲಿನ ಅತ್ಯಂತ ಸುಸ್ಥಿರ ಮತ್ತು ವೇಗದ 4ಜಿ ನೆಟ್ವರ್ಕ್ ಎನ್ನುವ ಪ್ರಮಾಣಪತ್ರ ನೀಡಿದೆ.

'ಗ್ರಾಹಕರ ಡೇಟಾ ಬೇಡಿಕೆ ಈಡೇರಿಸುವುದರ ಜತೆಗೆ ಸುಧಾರಿತ 4ಜಿ ಡೇಟಾ ಅನುಭವ ಹೆಚ್ಚಿಸುವುದಕ್ಕೆ ಮೊಬೈಲ್ ಸಂಪರ್ಕ ಜಾಲದ ಬಲವರ್ಧನೆ ಮಾಡುವುದು ಅನಿವಾರ್ಯವಾಗಿತ್ತು. ಸದ್ಯ ಇರುವ 4ಜಿ ಮೂಲಸೌಕರ್ಯಗಳಿಗೆ ಪೂರಕವಾಗಿ 2100 ಮೆಗಾಹರ್ಟ್ಸ್ ಇನ್ನೊಂದು ಸಂಪರ್ಕ ಸೌಲಭ್ಯದ ಅಳವಡಿಕೆಯು, ಬೆಂಗಳೂರಿನಲ್ಲಿನ ವೊಡಾಫೋನ್ ಐಡಿಯಾದ ಗ್ರಾಹಕರಿಗೆ ಮನೆ ಮತ್ತು ಕಚೇರಿ ಒಳಗಿನ ಮೊಬೈಲ್ ಸಂಪರ್ಕ ಗುಣಮಟ್ಟ ಹೆಚ್ಚಿಸಿರುವುದರ ಜತೆಗೆ, ದತ್ತಾಂಶ ವೇಗವೂ ಏರಿಕೆಯಾಗಿದೆ' ಎಂದು ವೊಡಾಫೋನ್ ಐಡಿಯಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ಲಸ್ಟರ್ ಮುಖ್ಯಸ್ಥ ಅರವಿಂದ ನೆವಾತಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.