ಬೆಂಗಳೂರು: ಜಗತ್ತಿನಾದ್ಯಂತ ಗೂಗಲ್‌ನ ಬಹುತೇಕ ಸೇವೆಗಳಲ್ಲಿ ಅಡಚಣೆ ಎದುರಾಗಿತ್ತು. ಜಿಮೇಲ್, ಯುಟ್ಯೂಬ್, ಮ್ಯಾಪ್ಸ್ ಹಾಗೂ ಡ್ರೈವ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು.

ಸೋಮವಾರ ಸಂಜೆ 5ರಿಂದ ಗೂಗಲ್‌ನ ಸೇವೆಗಳಲ್ಲಿ ವ್ಯತ್ಯವಾಗಿ, ಬಹುತೇಕ ಬಳಕೆದಾರರಿಗೆ ಜಿಮೇಲ್ ಮತ್ತು ಯುಟ್ಯೂಬ್ ತೆರೆಯಲು ಸಾಧ್ಯವಾಗಿರಲಿಲ್ಲ. ಯುಟ್ಯೂಬ್ ತೆರೆಯಲು ಪ್ರಯತ್ನಿಸಿದರೆ, 'ಏನೋ ಸಮಸ್ಯೆಯಾಗಿದೆ' (Something went wrong) ಎಂಬ ಸಂದೇಶ ತೋರುತ್ತಿದೆ. ಜಿಮೇಲ್ ತಾತ್ಕಾಲಿಕವಾಗಿ ವ್ಯತ್ಯಯವೆಂದು (Temporary Error) ತೋರುತ್ತಿತ್ತು.

ಭಾರತ, ಜಪಾನ್, ಯುರೋಪ್ ಹಾಗೂ ಅಮೆರಿಕದ ಕೆಲವು ಭಾಗಗಳಲ್ಲಿ ಗೂಗಲ್ ಸೇವೆಗಳಿಗೆ ಅಡಚಣೆಯಾಗಿತ್ತು.

ಸೇವೆಗಳಲ್ಲಿ ವ್ಯತ್ಯವಾಗಿದ್ದರೂ ಗೂಗಲ್ ಕ್ರೋಮ್‌ನ ಇನ್‌ಕಾಗ್ನಿಟೊ ಮೋಡ್‌ನಲ್ಲಿ ( INCOGNITO) ಯುಟ್ಯೂಬ್ ಬಳಸಬಹುದಾಗಿದೆ ಎಂದು ಹಲವು ಬಳಕೆದಾರರು ಟ್ವೀಟ್ ಮಾಡಿದ್ದರು.

ಸಂಜೆ 6:15ರ ಬಳಿಕ ಜಿಮೇಲ್ ಮತ್ತು ಯುಟ್ಯೂಬ್ ಬಳಕೆಗೆ ತೆರೆದಿಕೊಂಡಿವೆ. ಆದರೆ, ಯುಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆಗೆ ಸಾಧ್ಯವಾಗಿದ್ದು, ಅಪ್‌ಲೋಡ್ ಮಾಡುವುದು ತಡವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.