ಕಳೆದ ವಾರ ಹೈದರಾಬಾದ್ ಟೋಲ್ ಸಂಗ್ರಹ ಕೇಂದ್ರದ ಬಳಿ ಪಶುವೈದ್ಯೆಯ ಮೇಲೆ ಕಾಮುಕರು ಮುಗಿಬಿದ್ದು ಹತ್ಯೆ ಮಾಡಿರುವ ಆಘಾತಕಾರಿ ಘಟನೆಯು ದೇಶದಾದ್ಯಂತ ಸದ್ದು ಮಾಡಿತು. ರಾಜಧಾನಿ ದೆಹಲಿಯಲ್ಲಿ 2012 ಡಿಸೆಂಬರ್ 16ರಂದು ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲೆದ್ದ ಆವೇಶದ ಕಿಚ್ಚು ಮತ್ತೆ ಹತ್ತಿಕೊಂಡಿದೆ. ‘ನಮ್ಮಲ್ಲಿ ಮಹಿಳೆಗೆ ರಕ್ಷಣೆ ಇಲ್ಲ’ ಎಂಬ ಮಾತಿಗೆ ಪುನರಪಿ ಬಲ ಬಂದಿದೆ. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇರುವಂತಹ ಸರಳ ವಿಧಾನವೊಂದನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.

ಅಂಗೈಯಲ್ಲಿ ಅರಮನೆಯಂತೆ ಇರುವ ಮೊಬೈಲ್ ಫೋನ್ಗಳಲ್ಲಿ ಈ ಸ್ವಯಂ ರಕ್ಷಣೆಯ ವೈಶಿಷ್ಟ್ಯವಿದೆ. ದಾಳಿಗೀಡಾದ ಸಂದರ್ಭದಲ್ಲಿ ಪೆಪ್ಪರ್ ಸ್ಪ್ರೇಯಂತಹ ರಕ್ಷಣಾತ್ಮಕ ವಿಧಾನದ ಜತೆ, ಮೊಬೈಲ್ ಫೋನ್ನಲ್ಲಿರುವ ಆ ವೈಶಿಷ್ಟ್ಯವನ್ನು ಸುಲಭವಾಗಿ ಬಳಸಬಹುದು.

ಇದನ್ನೂ ಓದಿ:ಮೊಬೈಲ್ ಬಳಕೆದಾರರಿಗೆ ‘ಫೇಸ್ ಸ್ಕ್ಯಾನ್’ ಕಡ್ಡಾಯ

ಮಹಿಳೆಯರ ರಕ್ಷಣೆಗಾಗಿ, ‘2017ರ ನಂತರ ತಯಾರಾದ ಎಲ್ಲ ಸ್ಮಾರ್ಟ್ ಫೋನ್, ಫೀಚರ್ ಫೋನ್ಗಳಲ್ಲಿ ಪ್ಯಾನಿಕ್ ಬಟನ್ ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸಬೇಕು’ ಎಂದು 2016ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದಕ್ಕಾಗಿಯೇ ‘112’ ಹೆಸರಿನಲ್ಲಿ ಆ್ಯಪ್ ಹೊರತರಲಾಯಿತು. ಜತೆಗೆ, ಆ್ಯಪ್ ಅಥವಾ ಬಟನ್ ಹುಡುಕುವುದು ಕಷ್ಟವಾದ ಸಂದರ್ಭದಲ್ಲಿ, ಫೋನ್ ಮಾಡಬಹುದಾದ ಸ್ಥಿತಿಯಲ್ಲಿದ್ದರೆ, 112 ಸಂಖ್ಯೆಯ ಮಹಿಳಾ ಸಹಾಯವಾಣಿಗೆ ಕರೆ ಮಾಡಬಹುದು.

ಈಗ ಕೆಲವು ಫೋನ್ಗಳಲ್ಲಿ ಪ್ರತ್ಯೇಕ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ವಿನ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸುವ ಕಂಪನಿಗಳು ಪವರ್ ಬಟನ್ನಲ್ಲೇ ಈ ವೈಶಿಷ್ಟ್ಯವನ್ನು ಅಳವಡಿಸಿವೆ. ಆದರೆ ನಮ್ಮ ಕೈಯಲ್ಲೇ ಇರುವ ಈ ರಕ್ಷಣಾ ವ್ಯವಸ್ಥೆಯ ಬಗ್ಗೆ ಇನ್ನೂ ಜನಜಾಗೃತಿ ಆದಂತಿಲ್ಲ. ಇದು ಮಹಿಳೆಯರಿಗಷ್ಟೇ ಅಲ್ಲದೆ, ಸಂಕಷ್ಟದಲ್ಲಿ ಸಿಲುಕಿರುವ ಯಾರಿಗೆ ಬೇಕಾದರೂ (ಮಕ್ಕಳೂ ಸೇರಿ) ಸಹಾಯವಾಗುತ್ತದೆ.

ಪ್ಯಾನಿಕ್ ಬಟನ್ ಹೇಗೆ ಕೆಲಸ ಮಾಡುತ್ತದೆ?

ಇದನ್ನು ತಿಳಿಯುವುದಕ್ಕಿಂತ ಮೊದಲು, ನಾವು ಸಂಕಷ್ಟದಲ್ಲಿ ಸಿಲುಕಿರುವುದರ ಬಗ್ಗೆ ತುರ್ತು ಸಂದೇಶ ರವಾನಿಸಲು ಮತ್ತು ಕರೆ ಮಾಡಿ ತಿಳಿಸುವಂತಾಗಲು ಕೆಲವು ಸ್ನೇಹಿತರು, ಕುಟುಂಬ ಸದಸ್ಯರನ್ನು ಗುರುತಿಸಬೇಕು. ಅವರ ಮೊಬೈಲ್ ಸಂಖ್ಯೆಗಳನ್ನು ನಮ್ಮ ಫೋನ್ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕಾಗುತ್ತದೆ. ಪ್ಯಾನಿಕ್ ಬಟನ್ ಒತ್ತಿದಾಗ ಸ್ಥಳೀಯ ಮಹಿಳಾ ಸಹಾಯವಾಣಿಗೆ, ಸ್ಥಳೀಯ ಪೊಲೀಸರಿಗೆ ಹಾಗೂ ನಾವು ಸೇವ್ ಮಾಡಿಟ್ಟುಕೊಂಡ ನಮ್ಮ ಆತ್ಮೀಯರ ಸಂಖ್ಯೆಗೂ ನಾವೆಲ್ಲಿದ್ದೇವೆ ಎಂಬುದನ್ನು ತಿಳಿಸುವ ಸ್ಥಳದ (ಜಿಪಿಎಸ್ ಲೊಕೇಶನ್) ಮಾಹಿತಿಯ ಸಹಿತವಾಗಿ ಕರೆ ಹಾಗೂ ಸಂದೇಶ ಹೋಗುತ್ತದೆ.

ಬಳಸುವುದು ಹೇಗೆ?

ಸ್ಮಾರ್ಟ್ ಫೋನ್ಗಳಲ್ಲಾದರೆ, ಆನ್/ಆಫ್ ಮಾಡುವ ಪವರ್ ಬಟನ್ ಅನ್ನೇ ಕ್ಷಿಪ್ರವಾಗಿ ಮೂರು ಬಾರಿ ಒತ್ತಿದರಾಯಿತು. ಜತೆಗೆ, ಸೆಟ್ಟಿಂಗ್ಸ್ನ ‘ಸೆಕ್ಯುರಿಟಿ’ ವಿಭಾಗದಲ್ಲಿ ‘ಎಮರ್ಜೆನ್ಸಿ’ ಎಂಬ ಪದವಿರುವ ವಿಭಾಗದಲ್ಲಿಯೂ ಇದನ್ನು ಹೊಂದಿಸಿಕೊಳ್ಳಬಹುದು. ಅದೇ ರೀತಿ, ಕೀಪ್ಯಾಡ್ ಇರುವ ಅರೆ-ಸ್ಮಾರ್ಟ್ ಫೋನ್ಗಳಲ್ಲಾದರೆ (ಫೀಚರ್ ಫೋನ್), 5 ಅಥವಾ 9 ಬಟನ್ ಅನ್ನು ದೀರ್ಘ ಕಾಲ ಒತ್ತಿದರಾಯಿತು. ಅದು ತುರ್ತು ಕರೆ ಮತ್ತು ತುರ್ತು ಸಂದೇಶವನ್ನು ಟ್ರಿಗರ್ ಮಾಡಿ, ಮೊದಲೇ ಸೇವ್ ಮಾಡಿಟ್ಟುಕೊಂಡ ಸಂಪರ್ಕ ಸಂಖ್ಯೆಗಳಿಗೆ ನಾವು ಇರುವ ಸ್ಥಳ (ಲೊಕೇಶನ್) ಮಾಹಿತಿಯ ಸಹಿತ ಸಂದೇಶ ರವಾನಿಸುತ್ತದೆ. ಸಹಾಯವಾಣಿಯವರು ತಕ್ಷಣ ಕ್ರಮ ಕೈಗೊಂಡು ಮರಳಿ ಕಾಲ್ ಮಾಡುತ್ತಾರೆ ಹಾಗೂ ಸಮೀಪದ ಪೊಲೀಸ್ ಸ್ಟೇಷನ್ಗೆ, ನಾವಿರುವ ಸ್ಥಳದ ಸಮೀಪದಲ್ಲಿ ಸಕ್ರಿಯರಾಗಿರುವ ಸ್ವಯಂಸೇವಕರಿಗೆ ಸಂದೇಶ ರವಾನಿಸುತ್ತಾರೆ.

‘112’ ಎಂಬುದು ವಿಶೇಷವಾಗಿ ಬೆಂಗಳೂರು ಹೊರತುಪಡಿಸಿದ ಸ್ಥಳಗಳಿಗಾಗಿ ರೂಪಿಸಲಾದ ಸಹಾಯವಾಣಿ. ಬೆಂಗಳೂರಿಗರು 100 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಅನಗತ್ಯ ಕರೆ ಮಾಡದೆ ಪ್ರಜ್ಞಾವಂತಿಕೆಯಿಂದ ಈ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕಿದೆ.

ಆ್ಯಪ್ನಲ್ಲಿ ಹೀಗೆ ಮಾಡಿ..

‘112 ಆ್ಯಪ್’ ಅಳವಡಿಸಿಕೊಂಡ ಬಳಿಕ, ಅದನ್ನು ತೆರೆದು, ನಮ್ಮ ಹೆಸರು, ಜನ್ಮದಿನಾಂಕ, ಲಿಂಗ ಹಾಗೂ ಮೊಬೈಲ್ ಸಂಖ್ಯೆ ಸಹಿತ ಮಾಹಿತಿಯನ್ನು ನಮೂದಿಸಿ ನೋಂದಾಯಿಸಬೇಕು. ಆತ್ಮೀಯರ ಫೋನ್ ಸಂಖ್ಯೆಗಳನ್ನು ಒಂದೊಂದಾಗಿ ಸೇರಿಸಬಹುದು. ಕಷ್ಟದಲ್ಲಿರುವವರಿಗೆ ಸಹಾಯಕ್ಕಾಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ಇಷ್ಟ ಇರುವವರೂ ಅಲ್ಲಿ ನೋಂದಾಯಿಸಿಕೊಳ್ಳಬಹುದು. ಅಂದರೆ, ನಿರ್ದಿಷ್ಟ ಪ್ರದೇಶದಿಂದ ಯಾವುದಾದರೂ ತುರ್ತು ಸಹಾಯಕ್ಕಾಗಿ ಸಂದೇಶ ಬಂದರೆ, ನಮಗೂ ಮಾಹಿತಿ ದೊರೆಯುತ್ತದೆ ಮತ್ತು ನಾವು ಹೋಗಿ ಕಷ್ಟದಲ್ಲಿರುವವರ ನೆರವಿಗೆ ಧಾವಿಸಬಹುದಾಗಿದೆ. ಈ ಆ್ಯಪ್ನಲ್ಲಿ ಪೊಲೀಸ್, ಅಗ್ನಿಶಾಮಕ ದಳ, ವೈದ್ಯಕೀಯ ತುರ್ತು (ಆ್ಯಂಬುಲೆನ್ಸ್) ಸೇವೆ ಹಾಗೂ ಇತರ ಸಮಸ್ಯೆಗಳಿಗೆ ಕರೆ/ಸಂದೇಶಕ್ಕಾಗಿ ನಾಲ್ಕು ಬಟನ್ಗಳಿರುತ್ತವೆ. ಬೇಕಾದುದನ್ನು ಬೆರಳಿನಿಂದ ಸ್ಪರ್ಶಿಸಿದರಾಯಿತು. ತಪ್ಪಾಗಿ ಕರೆ ಹೋಗಿದೆಯೆಂದಾದರೆ, ತಕ್ಷಣವೇ ‘ನಾನು ಸುರಕ್ಷಿತ’ ಎಂಬ ಬಟನ್ ಗೋಚರಿಸುತ್ತದೆ. ಅದನ್ನು ಒತ್ತಿದರಾಯಿತು.

ಗಮನಿಸಿ

ನಿರ್ಭಯಾ ಎಂಬ ಹೆಸರಿನ ಸಂಪರ್ಕ ಸಂಖ್ಯೆಯೊಂದು (9833312222) ಸಾಮಾಜಿಕ ಜಾಲತಾಣಗಳಲ್ಲಿ ಮಹಿಳಾ ಸಹಾಯವಾಣಿ ಎಂಬ ಹೆಸರಿನಲ್ಲಿ ತಪ್ಪು ಸಂದೇಶ ರೂಪದಲ್ಲಿ ಹರಿದಾಡುತ್ತಿದೆ. ಇದು ಮಹಾರಾಷ್ಟ್ರ ರೈಲ್ವೆ ಪೊಲೀಸರು 2015ರಲ್ಲಿ ಹೊರತಂದಿದ್ದ ಮಹಿಳಾ ಸಹಾಯವಾಣಿ, ಈಗ ಕಾರ್ಯ ನಿರ್ವಹಿಸುತ್ತಿಲ್ಲ. ನಿಮಗೆ ಬಂದರೆ ಫಾರ್ವರ್ಡ್ ಮಾಡಲು ಹೋಗಬೇಡಿ.

ಎಮರ್ಜೆನ್ಸಿಸಂದರ್ಭದಲ್ಲಿ....

* 112 ಸಂಖ್ಯೆಗೆಡಯಲ್ ಮಾಡಿ

* 112 ಹೆಸರಿನಆ್ಯಪ್ ಬಳಸಿ

* 5 ಅಥವಾ 9 ನಂಬರ್ಕೀ ಒತ್ತಿಹಿಡಿದುಕೊಳ್ಳಿ

*ಕ್ಷಿಪ್ರವಾಗಿ 3 ಬಾರಿಪವರ್ ಬಟನ್ ಒತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.