ನ್ಯೂಯಾರ್ಕ್: ಕೆಲವರು ಯಾವುದೋ ಕೆಟ್ಟ ಸಂದರ್ಭದಲ್ಲಿ ಸಿಲುಕಿಕೊಂಡು ಸಾವಿನ ದವಡೆಯಿಂದ ಪಾರಾಗಿ ಬಂದೆ ಎನ್ನುತ್ತಾರೆ. ಇಲ್ಲೊಬ್ಬ ಅಕ್ಷರಶಃ ಸಾವಿನ ದವಡೆಯಿಂದ ಪಾರಾಗಿ ಬಂದು ಸುದ್ದಿಯಾಗಿದ್ದಾನೆ.

ಹೌದು, ಅಮೆರಿಕದ ಮೆಸ್ಸಾಚುಯೆಟ್ಸ್ನ ಈಶಾನ್ಯ ಭಾಗದ ಕಡಲಲ್ಲಿ 55 ವರ್ಷದ ವ್ಯಕ್ತಿ ಮೈಕಲ್ ಪಾಕಾರ್ಡ್ ಎನ್ನುವ ಮೀನುಗಾರ ಹಾಗೂ ಸೀ ಡೈವರ್ (ಸಮುದ್ರದ ಮುಳುಗು ತಜ್ಞ) ತಿಮಿಂಗಿಲ ಬಾಯಿಯೊಳಗೆ ಹೋಗಿ ವಾಪಸ್ ಬದುಕಿ ಬಂದಿರುವ ಘಟನೆ ಇದು.

ಶುಕ್ರವಾರ ಎಂದಿನಂತೆ ಪಾಕಾರ್ಡ್ ಕಡಲಡೈವಿಂಗ್ ಮಾಡುವಾಗ 40 ಅಡಿ ಆಳ ಸಮುದ್ರದಲ್ಲಿ ಇಳಿದಿದ್ದಾನೆ. ಈ ವೇಳೆ ದೈತ್ಯ ತಿಮಿಂಗಿಲೊಂದು ಬಂದು ಪಾಕಾರ್ಡ್ನನ್ನು ಗಬಕ್ಕನೇ ಬಾಯಿಗೆ ಹಾಕಿಕೊಂಡಿದೆ. ಇದರಿಂದ ಸತ್ತೇ ಹೋದೆ ಎಂದುಕೊಂಡಿದ್ದ ಪಾಕಾರ್ಡ್ಗೆ 40 ಸೆಕೆಂಡ್ ನಂತರ ಆಶ್ಚರ್ಯ ಕಾದಿತ್ತು.

ಏಕೆಂದರೆ, ಪಾಕಾರ್ಡ್ನನ್ನು ನುಂಗಿದ್ದ ತಿಮಿಂಗಿಲಕೆಲವೇ ಕ್ಷಣಗಳಲ್ಲಿ ಆತನನ್ನು ಹೊರಗೆ ಉಗುಳಿದೆ. ಇದರಿಂದ ಪಾಕಾರ್ಡ್ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಈ ವಿಷಯವನ್ನು ಸ್ವತಃ ಪಾಕಾರ್ಡ್ ಅವರೇ ಫೇಸ್ಬುಕ್, ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮೈಗೆ ತರುಚಿದ ಗಾಯಗಳಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

‘ನಾನು ಡೈವಿಂಗ್ ಮಾಡುವಾಗ ಹಂಪ್ಬ್ಯಾಕ್ ತಿಮಿಂಗಿಲನನ್ನನ್ನು ನೇರವಾಗಿ ತನ್ನ ಬಾಯಿಯೊಳಗೆ ಸೆಳೆದುಕೊಂಡು ಬಾಯಿ ಮುಚ್ಚಿತು. ಆಗ ಸಂಪೂರ್ಣ ಕತ್ತಲು ಆವರಿಸಿತು. ಏನು ಮಾಡಬೇಕು ಎಂದು ತೋಚದೆ ನನ್ನಿಬ್ಬರು ಮಕ್ಕಳನ್ನು ನೆನಪು ಮಾಡಿಕೊಂಡೆ. ನನ್ನ ಒದ್ದಾಟ ಜೋರಾಯಿತು. ಸುಮಾರು 30 ರಿಂದ 40 ಸೆಕೆಂಡ್ನಲ್ಲಿ ತಿಮಿಂಗಿಲನನ್ನನ್ನು ಹೊರಗೆ ಉಗುಳಿತು. ನಾನೊಬ್ಬ ಅದೃಷ್ಠವಂತ, ಪಾರಾಗಿ ಬಂದೆ’ ಎಂದು ಪಾಕಾರ್ಡ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ವೈರಲ್ ವಿಡಿಯೋ: ತನ್ನ ಮರಿಗಳಿಗೆ ಆಟವಾಡಲು ಗೊಂಬೆ ತಂದು ಕೊಟ್ಟ ತಾಯಿ ನಾಯಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.