ಮಧ್ಯಮವರ್ಗದಲ್ಲಿ ಬೆಳೆದ ನಮ್ಮಂಥ ಎಷ್ಟೋ ಹೆಣ್ಣುಮಕ್ಕಳಿಗೆ ಮನೆಯಲ್ಲಿ ಉಸುರುವ ಮಾತುಗಳು ‘ಚೆನ್ನಾಗಿ ಓದು, ಉದ್ಧಾರ ಆಗ್ತೀಯಾ, ಇಲ್ದಿದ್ರೆ ಮನೇಲೆ ಇರ್ಬೇಕಾಗತ್ತೆ’. ಇದು ಅನೇಕರ ಮನೆಯಲ್ಲಿ ಬೆಳ್ಳಂಬೆಳ್ಳಗೆ ತಾಯಂದಿರ ಬಾಯಿಂದ ಕೇಳುವ ಸುಪ್ರಭಾತ.ಇಲ್ಲಿ ಓದು ಅಂದರೆ ನಮ್ಮ ಶಾಲೆ, ಕಾಲೇಜಿಗೆ ಹೋಗುವ ಕನ್ವೆನ್ಷನಲ್ ಶಿಕ್ಷಣವೇ. ಈ ‘ಹೊರಗಿನ’ ಓದು ಸುಮಾರು ವಿಷಯಗಳನ್ನು ಕಲಿಸಿಕೊಡುತ್ತದೆ.

ಮೊದಲನೆಯದು ಮನೆಯನ್ನು ಬಿಟ್ಟು ಮತ್ತೊಂದು ಪ್ರಪಂಚ ಇದೆ ಎನ್ನುವ ವಾಸ್ತವ. ಹಿಂದಿನ ಕಾಲದಿಂದಲೂ ಮನೆಯನ್ನು ನಡೆಸುವ ಜವಾಬ್ದಾರಿ, ಮಗುವಿನ ಜವಾಬ್ದಾರಿ, ಧರ್ಮದಿಂದಲೋ ಕರ್ಮದಿಂದಲೋ ಹೆಣ್ಣುಮಕ್ಕಳಿಗೆ ಬಂದಿರುವುದು ನೈಜ ಸಂಗತಿ. ಅದೊಂದೆ ಅವಳದ್ದು ಎಂದು ನಂಬದಿರುವುದಕ್ಕೆ ಹೊರಗಿನ ಶಿಕ್ಷಣ ಬಹು ಮುಖ್ಯವಾದದ್ದು. ಅಲ್ಲೂ ಒಂದು ಪ್ರಪಂಚವಿದೆ; ಅವಳ ಪ್ರತಿಭೆಯನ್ನು ಮನೆ, ಅಡುಗೆಮನೆಯಲ್ಲಷ್ಟೆ ತೋರಿಸಬೇಕಿಲ್ಲ ಎಂಬ ಒಳಶಕ್ತಿ ಅರಿವಾಗುವುದು ಹೊರಗಿನ ಶಿಕ್ಷಣಕ್ಕೆ ಒಡ್ಡಿಕೊಂಡಾಗ, ಅದರಲ್ಲಿಯ ಪರೀಕ್ಷೆಗಳನ್ನು ಎದುರಿಸಿದಾಗ.

ಇನ್ನು ಹೊರಗಿನ ಶಿಕ್ಷಣ ನಮ್ಮನ್ನು ಅರ್ಥಿಕ ಸಬಲತೆಯ ದಾರಿಗೆ ಎಡೆ ಮಾಡಿಕೊಡುತ್ತದೆ. ಚೆನ್ನಾಗಿ ಓದಿದರೆ ಮಾತ್ರ ಒಳ್ಳೆಯ ಕೆಲಸ ಸಿಗುತ್ತದೆ ಎಂಬುದುಮಧ್ಯಮವರ್ಗದಲ್ಲಿ ನಂಬಿಕೆ.

ಶಿಕ್ಷಣದಿಂದ ವಂಚಿತರಾದವರು ಅವರ ಬೇರೆ ಸ್ಕಿಲ್ಗಳಲ್ಲಿ ಅಧಿಕ ಬುದ್ಧಿಮತ್ತೆ ತೋರಿಸಿದರೆ ಮಾತ್ರ ಕೆಲಸ ಖಾಯಂ. ನಮ್ಮ ಓದಿನ ಮಾರ್ಕ್ಸ್ ಕಾರ್ಡನ್ನು ನೋಡಿಯೇ ನಮ್ಮನ್ನು ಅಳಿಯುವ ಕಾಲವೂ ಬಂದಿದೆ. ಶಿಕ್ಷಣದಿಂದ ತನ್ನಂತೆಯೇ ಇರುವ ಒಂದಷ್ಟು ಜನರನ್ನು ಕಾಣುವ, ಮಾತಾಡಿಸುವ ಅವಕಾಶವಿರುತ್ತದೆ.

ಅಷ್ಟೇ ಅಲ್ಲ, ಶಿಕ್ಷಣದಿಂದ ನಾವು ದೇಶಗಳನ್ನು ಸುತ್ತಬಹುದು. ‘ದೇಶ ಸುತ್ತು, ಕೋಶ ಓದು’ ಎಂದು ದೊಡ್ಡವರೇ ಹೇಳಿಲ್ಲವೇ? ಈಗಂತೂ ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಆರು ತಿಂಗಳಿಗೊಮ್ಮೆ ಬೇರೆ ಬೇರೆ ದೇಶದಲ್ಲಿ ಓದುವ ಅವಕಾಶವಿರುತ್ತದೆ. ಪುಸ್ತಕದ ಜೊತೆಜೊತೆಗೆ ಬೇರೆ ಬೇರೆ ದೇಶಗಳ ಭಾಷೆ, ಸಂಸ್ಕೃತಿ, ಚರಿತ್ರೆಗಳನ್ನು ತಿಳಿದುಕೊಳ್ಳುವ ಅವಕಾಶವಿರುತ್ತದೆ.

ನಮ್ಮಲ್ಲಿರುವ ಸಣ್ಣತನಗಳನ್ನು ಶಿಕ್ಷಣದಿಂದ ತೊಡೆದುಕೊಳ್ಳಬಹುದು. ಹೊಸ ವಿಷಯಗಳನ್ನು ಅರಿತುಕೊಳ್ಳಬಹುದು. ನಮ್ಮಲ್ಲಿರುವ ವಿಷಯವನ್ನು ಇತರರಿಗೂ, ಅವರಲ್ಲಿರ ವಿವರಗಳನ್ನೂ ಪರಸ್ಪರ ಹಂಚಿಕೊಳ್ಳಲೂ ಶಿಕ್ಷಣ ಸೇತುವೆಯಾಗುತ್ತದೆ. ವೈಜ್ಞಾನಿಕತೆಯನ್ನು ಬೆಳೆಯಲು ಶಿಕ್ಷಣ ವ್ಯವಸ್ಥೆಗೆ ನಾವು ಸೇರಲೇಬೇಕು. ಉದಾಹರಣೆಗೆ, ಮುಟ್ಟಿನ ವಿಷಯವನ್ನು ಶಾಲೆಯಲ್ಲಿ ಬಿಡುಬೀಸಾಗಿ ಚರ್ಚೆಮಾಡಬಹುದು; ಆದರೆ ಮನೆಯಲ್ಲಿ ಅದನ್ನು ಬಚ್ಚಲುಮನೆಗಷ್ಟೆ ಸೀಮಿತ ಮಾಡುತ್ತಾರೆ. ಮುಟ್ಟಾಗುವುದು ನೈಸರ್ಗಿಕವಾದ್ದದ್ದು; ಅದಕ್ಕೆ ಯಾವ್ಯಾವುದೋ ರೂಪಗಳನ್ನು ಕೊಡುವುದು ನಿಲ್ಲಲು ಈ ‘ಆಚೆಗಿನ’ ಶಿಕ್ಷಣ ಅಗತ್ಯವಾಗಿತ್ತು. ನಮ್ಮ ಜೋಳು ಜೋಳಾದ ವಿತಂಡವಾದಗಳಿಗೆ ಬ್ರೇಕ್ ಹಾಕುವುದಕ್ಕೆ ನಾವು ಕಲಿತ ವಿಜ್ಞಾನದಿಂದಲೇ ಸಾಧ್ಯವಾಗುವುದು.ನಮ್ಮ ಸುತ್ತ ಗೋಡೆಗಳನ್ನು ಕಟ್ಟಿಕೊಂಡರೆ ಅದನ್ನು ಕೆಡವಬಲ್ಲದ್ದೇ ಶಿಕ್ಷಣವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.