ಸಾಧನಾ ಈಗ ತಾನೆ ಸಿಎ ಮುಗಿಸಿ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳ ಆಫೀಸಿನಲ್ಲಿ ಸಂಪೂರ್ಣ ಗಂಡಸರದ್ದೇ ಕಾರುಬಾರು. ಹೊಸ ಗೆಳೆಯರನ್ನು ಮಾಡಿಕೊಳ್ಳಲು ವಯಸ್ಸಿನ ಅಂತರ, ಮಾತಾನಾಡಲು ಸಿಗದಿರುವ ವಿಷಯಗಳು ಮತ್ತು ಅವಳಿಗೆ ಇರುವ ಅಳುಕು ತಡೆಹಿಡಿಯುತ್ತಿದೆ. ಅವಳ ಗೆಳತಿಯರೆಲ್ಲ ಬೇರೆ ಊರಿನಲ್ಲಿ ಅವರದ್ದೇ ಲೋಕದಲ್ಲಿ ಇದ್ದಾರೆ. ಜೊತೆಗೆ ಬೆಳೆದು ಬಂದವರಿಗೆ ಭಿನ್ನ ಅಭಿರುಚಿ ಇದ್ದಾಗ ಮಾತುಕತೆ ಮುಂದೆ ಹೋಗುವುದು ಬಹಳ ಕಷ್ಟ. ಹೀಗಿದ್ದಾಗ ಸಾಧನಾ ಹೊಸ ಗೆಳತಿಯರನ್ನು ಹುಡುಕುವುದಕ್ಕೆ ಶುರು ಮಾಡಿದ್ದಳು. ಅದೇ ‘ಮದುವೆಯಾಯ್ತು, ಮಕ್ಕಳಾಯ್ತು, ನಿನ್ನ ಸರದಿ ಯಾವಾಗ’ ಅನ್ನುವ ಮಾತುಕತೆಗಳು ಅವಳಿಗೆ ಕ್ಷುಲ್ಲಕ ಎನಿಸುವುದಕ್ಕೆ ಶುರು ಮಾಡಿತ್ತು. ಹೀಗೆ ಅವಳು ತನ್ನ ಮನಸ್ಸಿಗೆ ಹೊಂದುವಂತಹ ಗೆಳತಿಯರನ್ನು ಹುಡುಕಲು ಶುರುಮಾಡಿದ್ದಳು. ಇದೇ ತರಹ ನಿಮಗೂ ಅನಿಸಿದರೆ ಸಾಧನಾಳ ಪ್ರಯತ್ನಗಳನ್ನು ಮುಂದೆ ಓದಿ...

ಒಬ್ಬ ಮನುಷ್ಯ ಗೆಳೆಯರಿಲ್ಲದೇ ಬದುಕಲು ಸಾಧ್ಯವೇ? ಆದರೆ ಸಮಾನಮನಸ್ಕ ಗೆಳೆಯರಿಲ್ಲದೇ ಬದುಕಲು ಸಾಧ್ಯವೇ ಇಲ್ಲ. ಇನ್ನು ಹೆಣ್ಣುಮಕ್ಕಳಿಗೆ ಒಳ ಮನಸ್ಸಿನ ಭಾವನೆ ಹೇಳಿಕೊಳ್ಳಲು ಮತ್ತೊಂದು ಅಷ್ಟೇ ಹಿತವಾದ ಮನಸ್ಸಿನ ಅಗತ್ಯವಿದೆ. ಆದರೆ ನಮ್ಮ ಸಮಾಜದಲ್ಲಿ ಹೆಣ್ಣಿನ ಚೌಕಟ್ಟು ಇಷ್ಟೆ – ಅನ್ನುವ ಪರಿಕಲ್ಪನೆ ಇದೆ. ಅವಳೆಷ್ಟೇ ಉನ್ನತ ಹುದ್ದೆಗೇರಿದರೂ, ಅವಳೇನೇ ಆದರೂ ಅವಳ ಗಡಿಯನ್ನು ಮದುವೆ, ಮಕ್ಕಳು ಮತ್ತು ಅಡುಗೆಗೆ ಸೀಮಿತಗೊಳಿಸಲಿಕ್ಕೆ ಪ್ರಯತ್ನ ಪಡುತ್ತಾರೆ. ಮನೆಯ ಒಂದು ಸಣ್ಣ ಕಾರ್ಯಕ್ರಮಕ್ಕೆ ಹೋಗಿ ನೋಡಿ, ಅಲ್ಲಿ ಗಂಡಸರ ಗುಂಪಲ್ಲಿ ‘ಸರ್ಕಾರ ಯಾಕೆ ಬದಲಾಗೋದಿಲ್ಲ’, ‘ಆ ಮಿನಿಸ್ಟರ್ ಯಾಕೆ ಕೆಲಸ ಮಾಡುತ್ತಿಲ್ಲ’, ‘ವಿರಾಟ್ ಕೊಹ್ಲಿ ಹೇಗೆ ಬ್ಯಾಟ್ ಮಾಡಿದರೆ 100 ರನ್ ಗಳಿಸಬಹುದು’ – ಎಂಬ ವಿಷಯಗಳೇ ಚರ್ಚೆ ಆಗುತ್ತಿರುತ್ತವೆ. ಹೌದು, ಇವರ ಚರ್ಚೆಯಿಂದ ಯಾರ ಉದ್ಧಾರವೂ ಆಗುವುದಿಲ್ಲ, ಆದರೂ ವಿಷಯಗಳ ವಿಸ್ತಾರ ಅವರ ಅರಿವನ್ನು ಹೊರಹಾಕುತ್ತದೆ. ಇದೇ ಒಂದಷ್ಟು ಹೆಣ್ಣುಮಕ್ಕಳು ಕುಳಿತರೆ; ಅದೂ ಹಳೆಯ ಕಾಲದವರು ಅಲ್ಲಿನ ಚರ್ಚೆ ಅಡುಗೆಮನೆ, ಅಡುಗೆ, ಕೆಲಸದವಳು, ಮನೆಯಲ್ಲಿ ಯಾರೂ ಸಹಾಯ ಮಾಡೊಲ್ಲ ಅಥವಾ ಅವರ ಮನೆಯಲ್ಲಿ ಆ ಹುಡುಗಿ ಎಲ್ಲವನ್ನೂ ಮಾಡುತ್ತೆ, ನಮ್ಮ ಮನೆಯಲ್ಲಿ ಏನೂ ಮಾಡೊಲ್ಲ, ಅಲ್ಲೊಂದು ಆಷಾಢದ ಸೇಲ್ ಇದೆ; ಇವೇ – ಇವೇ ಹಳಸಲು ಮಾತುಗಳು. ಅಡುಗೆಮನೆಯಲ್ಲಿ ಕುಳಿತು ಜಗತ್ತಿನ ಬಹು ವಿಶಾಲವಾದ ಮಾತುಗಳನ್ನು ಯಾಕೆ ಮಾತಾಡಲು ಸಾಧ್ಯವಿಲ್ಲ ಎಂಬುದು ಒಂದು ಯಕ್ಷಪ್ರಶ್ನೆಯಾಗಿದೆ. ಇದೇ ಚರ್ಚೆ ದೊಡ್ಡವರಾದ ಕಾರಣ ಸ್ನೇಹಿತೆಯರ ಗುಂಪಲ್ಲಿ ಶುರುವಾಗುತ್ತದೆ. ಇಲ್ಲಿಗೆ ಹೆಣ್ಣಿನ ಗಡಿಯನ್ನು ತಾನೇ ನಿಶ್ಚಯಿಸಿಕೊಂಡ ಹಾಗಿರುತ್ತದೆ. ವಿಸ್ತರಣೆ ಆಗುವುದು ಸುಲಭ ಅಲ್ಲವೇ ಅಲ್ಲ. ಇನ್ನು ಈ ಥರದ ವಿಷಯಗಳಲ್ಲಿ ಆಸಕ್ತಿ ಇಲ್ಲದವರಿಗೆ ಈ ಜಾಡಿನಲ್ಲಿ ಬದುಕುವುದು ಕಷ್ಟ.

ಈ ಥರದ ಕಾಲದಲ್ಲಿ ಸಾಧನಾರಂಥ ಬಹಳಷ್ಟು ಹೆಣ್ಣುಮಕ್ಕಳು ತಮ್ಮ ಹಾಗೆ ಕೆರಿಯರ್, ಸಮಾಜಕ್ಕೆ ಮಾಡಬೇಕಾದ ಉಪಯೋಗಗಳು, ಅಲ್ಲೆಲ್ಲೋ ಶಿಕ್ಷಣದ ಬಗ್ಗೆ ಕೊಂಚ ಬದಲಾವಣೆ, ಸೆರೆನಾ ವಿಲಿಯಮ್ಸ್ ಆಡಿದ ರೀತಿ – ಇವೆಲ್ಲವನ್ನೂ ಚರ್ಚೆ ಮಾಡುವಂತಹ ಸಮಾನಮನಸ್ಕರ ಗುಂಪನ್ನು ಹುಡುಕುತ್ತಿರುತ್ತಾರೆ. ಹೆಣ್ಣಿಗೆ ಹೆಣ್ಣೇ ನಿಂತಾಗ ಮಾತ್ರ ಅವಳು ಬೆಳೆಯೋದಕ್ಕೆ ಸಾಧ್ಯವಾಗುವುದು. ಈ ಸತ್ಯವನ್ನು ಅರಿಯಲು ಪ್ರಯತ್ನಿಸಬೇಕು.

ಒಂದು ಗೆಳತಿಯರ ಗುಂಪಿನಲ್ಲಿ ಒಬ್ಬಳಿಗೆ ಮದುವೆ ಗೊತ್ತಾಯಿತು ಎಂದುಕೊಳ್ಳಿ. ಕಲ್ಯಾಣಮಂಟಪದಲ್ಲಿ ಮದುಮಗಳ ಗೆಳತಿಯರಿಬ್ಬರ ಅಮ್ಮಂದಿರು ಮಾತನಾಡಿಕೊಂಡಿದ್ದು ಏನೆಂದರೆ ‘ಇವರಿಬ್ಬರಿಗೂ ಬೇಗನೆ ಮದುವೆ ಮಾಡಬೇಕು’ ಎಂದು. ಇದೊಂದು ರೀತಿಯಲ್ಲಿ ಸಮೂಹಸನ್ನಿಯಿದ್ದ ಹಾಗೆ. ಪ್ರಾಯಶಃ ಅವಳು ಐಎಎಸ್ ಮಾಡಿದ್ದರೆ ನನ್ನ ಮಗಳನ್ನೂ ಐಎಎಸ್ ಮಾಡುತ್ತೇನೆ ಎಂಬ ಮಾತು ಬರುತ್ತಿತ್ತೇನೋ! ಹಾಗೆಂದು ಮದುವೆ ಮಾಡಿಕೊಳ್ಳೋದು ತಪ್ಪಾ? ಅಥವಾ ಅಡುಗೆ ಮಾಡೋಡು ತಪ್ಪಾ? ಖಂಡಿತ ಅಲ್ಲ. ಆದರೆ ಅದೊಂದೇ ಒಬ್ಬರ ವಿಶೇಷಣಗಳಾಗೋದು ಅದನ್ನೇ ಅವರ ಗುಣಲಕ್ಷಣಗಳಾಗಿಸುವುದು ನನ್ನ ಪ್ರಕಾರ ಅದೊಂದು ಥರದ ಹಿಂಸೆ.

ಮನೆವಾರ್ತೆಗಳೇ ಜೀವನದಲ್ಲಿ ಮುಖ್ಯವಾಗುವುದನ್ನು ಬಿಟ್ಟು ಹೆಣ್ಣು ಬೆಳೆಯಬೇಕಾಗಿದೆ. ಲಿಪಿ ಆಗಾಗ ಬೈಕಿನಲ್ಲಿ ಹಿಮಾಲಯಕ್ಕೆ ಹೋಗಿ ಬರುತ್ತಿದ್ದಳು. ಅದರ ಬಗ್ಗೆ ವಿಸ್ತಾರವಾಗಿ ತನ್ನ ಬ್ಲಾಗಿನಲ್ಲಿ ಬರೆದಳು. ಅವಳ ಗೆಳತಿಯರ ಗುಂಪಿನಲ್ಲಿ ಮನೆಬಿಟ್ಟು ಹೊರಗಡೆ ಹೋಗದ ಸುಷ್ಮಾ ಸಾವನದುರ್ಗಬೆಟ್ಟವನ್ನು ಹತ್ತಿ ಫೋಟೋ ಕಳಿಸಿದಳು. ಇದೊಂಥರ ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬ ಮನುಷ್ಯನಿಗೂ ತಾನು ಬೇರೆಯವರ ಹಾಗೆ ಸಾಧನೆ ಮಾಡಬೇಕೆಂಬ ಆಸೆ, ಅಸಕ್ತಿ ಇದ್ದೇ ಇರುತ್ತದೆ. ಇವೆಲ್ಲವೂ ನಮ್ಮ ಜೀವನಕ್ಕೆ ಅತ್ಯವಶ್ಯಕ.

ಮಧ್ಯವಯಸ್ಸಿನ ಹೆಣ್ಣುಮಕ್ಕಳು, ಅದೂ ನಮ್ಮ ಅಮ್ಮಂದಿರು ಅತ್ತೆಯಂದಿರು ಅದೆಷ್ಟು ಬಾರಿ ಮಕ್ಕಳಿಗೆ, ಗಂಡನಿಗೆ ಹೇಳಿದ್ದಿಲ್ಲ, ‘ನಿಮ್ಮ ಪಾಡಿಗೆ ನೀವು ಹೋಗ್ತೀರಾ, ನಾನಿಲ್ಲಿ ಮನೆ ಕಾಯಬೇಕು’ ಎಂದು. 20ರ ಹರೆಯದಲ್ಲಿ ಮದುವೆಯಾದಾಗ ಮಧ್ಯವಯಸ್ಸಿನಲ್ಲಿ ಈ ಥರ ಅವರನ್ನು ಕಾಡೋ ಸಮಸ್ಯೆಗಳು ಇವು. ಚಿಕ್ಕ ವಯಸ್ಸಿನಲ್ಲಿ ಮದುವೆಯ ಕಾರಣ ಗಂಡ, ಮಕ್ಕಳೇ ಸರ್ವಸ್ವ ಎಂದು ಅವರ ಜೀವನವನ್ನು ತೇಯ್ದು, ಅವರ ಸ್ನೇಹಿತರನ್ನು ಕೆಲವೊಮ್ಮೆ ಅವರ ತವರು ಮನೆಯವರನ್ನೇ ದೂರ ಮಾಡಿಕೊಂಡಿರುವ ಹೆಣ್ಣುಮಕ್ಕಳೂ ಇರುತ್ತಾರೆ. ಅವರ ಜೀವನ, ಅವರ ಆಸಕ್ತಿಯನ್ನು ಬದಿಗಿಟ್ಟು ಇರುತ್ತಾರೆ. ಮಕ್ಕಳು ದೊಡ್ಡವರಾದಾಗ ಅವರದೇ ವ್ಯಕ್ತಿತ್ವ, ಗೆಳೆಯರ ಗುಂಪನ್ನು ಕಟ್ಟಿಕೊಂಡಿರುತ್ತಾರೆ. ಗಂಡ ತನ್ನ ಆಫೀಸು ಹಾಗೂ ವಾಕಿಂಗ್ ಜಾಗದಲ್ಲಿ ಗೆಳೆಯರನ್ನು ಸಂಪಾದಿಸಿರುತ್ತಾನೆ. ಒಂದಷ್ಟು ವರ್ಷಗಳ ನಂತರ ತಮ್ಮವರ ಪ್ರಪಂಚ ತನಗಿಲ್ಲ ಎಂದು ಹೆಣ್ಣುಮಕ್ಕಳಿಗೆ ವಿಪರೀತ ಏಕಾಂಗಿತನ ಕಾಡುತ್ತದೆ. ಒಮ್ಮೊಮ್ಮೆ ಮಾನಸಿಕವಾಗಿ ಕುಗ್ಗಿಹೋಗೋದು ಇದೆ. ಇದೇ ಸಮಯದಲ್ಲಿ ಅವರಿಗಾಗುವ ಮೆನೋಪಾಸ್ ಸಹ ಅವರನ್ನು ಮತ್ತಷ್ಟು ಕುಗ್ಗಿಸುತ್ತದೆ. ಅವರ ಕೆಲಸದಲ್ಲಿರುವ ಏಕಾನತೆ, ಅದರಲ್ಲಿ ಬರದಿರುವ ಆದಾಯ ಅವರನ್ನು ಮತ್ತಷ್ಟು ಬೇಜಾರಿಗೆ ತಳ್ಳುತ್ತದೆ. ಆಗಲೇ ಬೇಕಾಗಿರೋದು ಈ ಗೆಳತಿಯರ ಗುಂಪು.

ತಾವು ಒಬ್ಬರ ಮಗಳು, ಹೆಂಡತಿ, ಸೊಸೆ, ಅಮ್ಮ, ಅತ್ತೆ ಎಂಬುದಷ್ಟೆ ಹೆಣ್ಣುಮಕ್ಕಳ ಐಡೆಂಟಿಟಿ ಅಲ್ಲ. ಅವಳನ್ನು ಅವಳಾಗಿಯೇ ಗುರುತಿಸುವುದು ಅವರ ಗೆಳತಿಯರ ಗುಂಪು. ಅವಳ ಆಸಕ್ತಿಗಳು, ಅವಳ ಮನಸ್ಸಿನ ತುಮುಲಗಳು ಹಂಚಿಕೆಯಾಗುವುದು ಅಲ್ಲಿಯೇ. ನಾವು ಲಿಂಗತರತಮವನ್ನು ಬಿಟ್ಟು ಬಹುದೂರ ಬಂದಿದ್ದೇವೆ. ಆ ಗುಂಪಲ್ಲೂ ಗೆಳೆಯರಿರಬಹುದು, ಗೆಳತಿಯರಿರಬಹುದು ಒಟ್ಟು ಹೆಣ್ಣುಮಕ್ಕಳಿಗೊಂದು ಸಮಾನಮನಸ್ಕ ಜೊತೆಗಾರರು ಹಾಗೂ ಜೊತೆಗಾತಿಯರುಇರಬೇಕು. ಕೆಲವರಿಗೆ ಅವೆಲ್ಲವೂ ಮನೆಯಲ್ಲಿ ಸಿಗುತ್ತದೆ, ಆಕಸ್ಮಾತ್ ಸಿಗದ್ದಿದ್ದಲ್ಲಿ ಅದನ್ನು ಹೊರಗಡೆ ಹುಡುಕಿದರೆ ಅದು ನಮ್ಮ ಜೀವನವನ್ನು ಬಹಳ ಸಂತಸಮಯವನ್ನಾಗಿರಿಸುತ್ತದೆ.

ಸಾಧನಾ ಸಮಾನಮನಸ್ಕರ ಗುಂಪನ್ನು ಹುಡುಕುವ ಯತ್ನದಲ್ಲಿ ವಿಶಿಷ್ಟ ಕೆಲಸಗಳನ್ನು ಮಾಡುವ ವ್ಯಕ್ತಿಗಳನ್ನು ಪರಿಚಯಿಸಿಕೊಂಡಿದ್ದಾಳೆ. ಸ್ನೇಹಿತೆ ಲಿಪಿಯ ಕಾರಣದಿಂದ ಸುಷ್ಮಾ ಚಾರಣ ಮಾಡುತ್ತಿದ್ದಾಳೆ. ಈಗ ಸುಷ್ಮಾಳಿಗೆ ತನ್ನ ಆಸಕ್ತಿ ಏನು ಎಂದು ತಿಳಿದಿದೆ. ಬೆಳಗ್ಗೆ ಬೇಗ ಎದ್ದು ತಾನೂ ವಾಕಿಂಗ್ ಹೋಗಿ ದೇಹವನ್ನು ಸಪೂರವಾಗಿಟ್ಟುಕೊಂಡು ಮತ್ತಷ್ಟು ಚಾರಣ ಮಾಡಬೇಕೆಂಬ ಆಸೆಯಿದೆ. ಸಾಧನಾಳ ಗುಂಪಲ್ಲಿ ಒಬ್ಬಳು ಕಥೆಗಾರ್ತಿ, ಒಬ್ಬಳು ಹಾಡುಗಾರ್ತಿ, ಮತ್ತೊಬ್ಬಳು ಫೈನಾನ್ಶಿಯಲ್ ಅಸೋಸಿಯೇಟ್ ಸಿಕ್ಕಿದ್ದಾರೆ. ಅವರೆಲ್ಲ ಈಗ ಒಂದು ಶಾರ್ಟ್ ಫಿಲಂ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಾನಮನಸ್ಕರ ಗುಂಪು ಸಾಧನಾಳಂತ ಎಷ್ಟೋ ಹೆಣ್ಣುಮಕ್ಕಳ ಮುಚ್ಚಿಟ್ಟ ಪ್ರತಿಭೆಗಳ ಅನಾವರಣದ ವೇದಿಕೆಯಾಗಿದೆ.

ಹೆಣ್ಣು ಅವಳ ಹಾಗೆ ಅವಳಿದ್ದಾಗಲೇ ಮಿಂಚುವುದು. ನಿಮ್ಮ ಮರೆತುಹೋದ ಗೆಳತಿಯರ ಗುಂಪನ್ನು ಮತ್ತೆ ನೆನಪಿಸಿಕೊಳ್ಳಿ. ಕರೆ ಮಾಡಿ ಮಾತಾಡಿ, ನಿಮ್ಮ ಜೀವನವನ್ನು ಸುಗಮಗೊಳಿಸಿಕೊಳ್ಳಿ. ಮನೆಯ ಆಚೆ ನಿಮ್ಮದೇ ಜಗತ್ತಿದೆ, ನಿಮ್ಮದೂ ಒಂದು ಪ್ರಪಂಚವಿದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮನೆ, ಕಚೇರಿ ಎಲ್ಲದರ ಹೊರಗೊಂದು ಬದುಕಿದೆ. ಅ ಬದುಕನ್ನು ಕಂಡುಕೊಳ್ಳಿ. ನಮ್ಮ ಸೀಮಿತ ಗಡಿಗಳಲ್ಲಿಯೇ ಬದುಕಿದರೆ ನಾವೆಂದು ಅರಳುವುದಿಲ್ಲ. ಕಾಲಕ್ಕೆ ತಕ್ಕಂತೆ ನಮ್ಮ ಜೀವನದ ರೀತಿ ಬದಲಿಸಿಕೊಳ್ಳುವ ಅಧಿಕಾರ ಸಂಪೂರ್ಣ ನಮ್ಮಲ್ಲಿದೆ. ಈ ಬ್ಯಾಲೆನ್ಸ್ ಖಂಡಿತ ಹೆಣ್ಣಿಗೆ ಸಾಧ್ಯ. ಅದಕ್ಕೆ ಅವಳನ್ನು ದೊಡ್ಡ ಕವಿಗಳು ‘ಸ್ತ್ರೀ ಎಂದರೆ ಅಷ್ಟೆ ಸಾಕೆ’ ಎಂದು ವರ್ಣಿಸಿದ್ದು.

ಅಂದ ಹಾಗೆ ನಿಮ್ಮ ಗೆಳತಿಗೆ ಕರೆ ಮಾಡಿ ಎಷ್ಟು ದಿನವಾಯ್ತು? ನಿಮ್ಮ ಗೆಳತಿಗೆ ಕರೆ ಮಾಡಿದ್ರಾ? ಮಾಡ್ತೀರಾ?...

-ಮೇಘನಾ ಸುಧೀಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.