ಎರಡೂವರೆ ದಶಕದ ಹಿಂದಿನ ದಿನಗಳವು. ಬೆಳಗಾವಿಯ ಕೆ.ಎಸ್.ಎಸ್. ತರಬೇತಿ ಕಾಲೇಜಿನಲ್ಲಿ ಅಧ್ಯಯನ ಮಾಡುವಾಗ ಅಥಣಿಯ ಕೊಡಗಾನೂರಿನ ಧರಿಯಪ್ಪನ ಗೆಳತನವಾಯಿತು. ತುಂಬಾ ತುಂಟನಾಗಿದ್ದರಿಂದ, ಗಣಿತದ ಗುರುಗಳಾಗಿದ್ದ ಹಾಸನದ ಚನ್ನೇಗೌಡ್ರು ಆತನಿಂದ ದೂರ ಸರಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದವು.

ಆದರೆ ಅದೇನೋ ಅನುಬಂಧ, ತುಂಬಾ ಸಲುಗೆಯ ಸ್ನೇಹಿತರು ನಾವು. ‘ಯಾಕಲೇ’, ‘ಏನಲೇ’ ಎಂಬ ಮಾತುಗಳನ್ನು ಬಳಸುವಷ್ಟು. ವಡಗಾಂವದ ಬಿ.ಸಿ.ಎಂ ಹಾಸ್ಟೇಲಿನಲ್ಲಿ ವಾಸ, ದಿನವೂ ನಗರದ ಪಾಟೀಲ ಗಲ್ಲಿಯಲ್ಲಿದ್ದ ಕಾಲೇಜಿಗೆ ಅವನದೇ ಸೈಕಲ್ ಮೇಲೆ ನಮ್ಮ ಪಯಣ, ಆತನೇ ಸೈಕಲ್ ಸವಾರ.

ಒಮ್ಮೊಮ್ಮೆ ಟಿಳಕವಾಡಿಯ ಪ್ರಾಥಮಿಕ ಶಾಲೆಗೂ ಪಾಠ ನೀಡಲು ಹೋಗಬೇಕಾಗುತ್ತಿತ್ತು. ಆಗಾಗ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬಂದು ವಿಪರೀತ ಜಗಳ ತಾರಕಕ್ಕೇರಿ ಪ್ರತ್ಯಾರೊಪ ಮಾಡುವಾಗ, ನೋಡುವವರಿಗೆ ಇಬ್ಬರ ಸ್ನೇಹ ಕೊನೆಯಾಯಿತು ಎನ್ನುಷ್ಟರಲ್ಲಿ ತಪ್ಪುಗಳನ್ನು ಒಪ್ಪಿಕೊಂಡು ಕ್ಯಾಂಟೀನ್ ಚಹಾ ಕುಡಿಯುವುದರೊಂದಿಗೆ ಮತ್ತದೆ ಸ್ನೇಹದ ಹೊಸ ಲೆಕ್ಕ.

ಕೆಲವೊಮ್ಮೆ ಜಗಳದಿಂದ ಮಾತು ಬಿಡುವುದು ಸಹಜವಾಗಿತ್ತು. ಆದರೂ ಸ್ನೇಹಕ್ಕೆ ಧಕ್ಕೆ ಬರುತ್ತಿರಲಿಲ್ಲ, ಅಂಥ ಸಂದರ್ಭದಲ್ಲಿ ಆತ ನನಗಿಂತ ಮೊದಲೇ ಕಾಲೇಜಿಗೆ ಸಿದ್ಧನಾಗಿ ಅಂಗಳಕ್ಕೆ ಬಂದು ಸೈಕಲ್ ಗಂಟೆ ಬಾರಿಸುತ್ತಿದ್ದ. ನಾನು ಸೈಕಲ್ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಅವನದೆ ಸೈಕಲ್ ತುಳಿತ ಮೌನದಲ್ಲೇ ಪಯಣ.

ಕಾಲೇಜು ಅವಧಿ ಮುಗಿದ ಮೇಲೂ ಮತ್ತದೇ ಸೈಕಲ್ ಗಂಟೆ ಸದ್ದು, ಸ್ವಲ್ಪ ತಡವಾದರೆ ಜೋರಾದ ಗಂಟೆ ಸಪ್ಪಳ, ನನ್ನ ಗಣಿತದ ಅವಧಿ ತಡವಾಗಿ ಬಿಟ್ಟರೂ ಕಾದು ನಿಂತು, ಕರೆದುಕೊಂಡು ಹೋಗುತ್ತಿದ್ದ. ಅದೇ ಮೌನ ಸೈಕಲ್ ಪಯಣದಲಿ, ಒಂದಿಷ್ಟು ದಿನವಾದ ಮೇಲೆ ರಾಜಿ. ಈ ನಮ್ಮ ವಿಚಿತ್ರ ಸ್ನೇಹದ ಕದನಗಳಿಗೆ ಯಾವೊಬ್ಬ ಸಹಪಾಠಿಯೂ ಸಂಧಾನದ ರಾಯಭಾರಿಯಾಗುತ್ತಿರಲಿಲ್ಲಾ, ನೋಡಿ ನಗುತ್ತಿದ್ದರಷ್ಟೇ,

2ನೇ ವರ್ಷದ ತರಬೇತಿಯಲ್ಲಿ ಆತ ತುಸು ಗಂಭೀರನಾದ. ಸಾಕಷ್ಟು ಅಧ್ಯಯನಶೀಲನಾದ. ಓದಿಗಾಗಿ ಬೇರೆ ಕಡೆ ಬಾಡಿಗೆ ರೂಂ ಮಾಡಿದ. ಜೊತೆಗೆ ಬರುವಂತೆ ಒತ್ತಾಯಿಸಿದ. ನಾನು ನಿರಾಕರಿಸಿದೆ. ಅಟ್ಟದ ಮನೆಯ ಆ ರೂಮಿನ ಕಟ್ಟಿಗೆ ಹಲಗೆಯ ನಾಲ್ಕೂ ಗೊಡೆಗಳಿಗೆ ಖಡುವಿನಿಂದ ಎಲ್ಲಾ ವಿಷಯಗಳ ಒಂದಂಕದ ಉತ್ತರಗಳನ್ನು ಬರೆದಿದ್ದ.

ಹೊಸ ಟೇಪ್ರೆಕಾರ್ಡರ್ ಖರೀದಿಸಿ ಕ್ಯಾಸೆಟ್ಟಿನಲ್ಲಿ ತನ್ನ ಧ್ವನಿಯಲ್ಲಿಯೇ ದೊಡ್ಡ ಪ್ರಶ್ನೆಗಳ ಉತ್ತರಗಳನ್ನು ತುಂಬಿಸಿ ವಿಶ್ರಾಂತಿ ಸಮಯದಲ್ಲಿ ಕೇಳುತ್ತಿದ್ದ. ಇಡೀ ಕಾಲೇಜಿಗೆ ಪ್ರಥಮನಾಗಬೇಕೆಂಬ ಪ್ರಬಲ ಇಚ್ಛೆ ವ್ಯಕ್ತಪಡಿಸಿದ್ದ. ಗೆಳೆಯ ವಿಶಿಷ್ಟ ಪ್ರಯತ್ನಕ್ಕೆ ಸಂತೋಷಪಟ್ಟಿದ್ದೆ.

ಪರೀಕ್ಷೆ ಮುಗಿದು ಮನೆಗೆ ತೆರಳುವಾಗ ರೈಲ್ವೆ ಸ್ಟೇಷನ್ನಲ್ಲಿ ಆತನನ್ನು ಬೀಳ್ಕೊಡುವಾಗ ಕಣ್ಣು ತುಂಬಿ ಬಂತು. ವಿಪರ್ಯಾಸ ನೋಡಿ ಪರೀಕ್ಷೆ ಪರಿಣಾಮ ತಿಳಿದಾಗ ನಾನು ಒರ್ವ ವಿದ್ಯಾರ್ಥಿನಿಯೊಂದಿಗೆ ಇಡೀ ಕಾಲೇಜಿನ ಪ್ರಥಮ ಸ್ಥಾನ ಹಂಚಿಕೊಂಡಿದ್ದೆ. ಈ ಮುನಿಸು ಗೆಳತನದ ನೆನಪು ಬದುಕಿನಲ್ಲಿ ಇನ್ನೂ ಹಚ್ಚ ಹಸಿರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.