ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶುಕ್ರವಾರ ಉದ್ರಿಕ್ತ ಜನರ ದಾಳಿಗೆ ಸಿಕ್ಕಿ ಮೃತಪಟ್ಟ ಶ್ರೀಲಂಕಾದ ಪ್ರಜೆಪ್ರಿಯಾಂತ ಕುಮಾರ್ ದಿಯಾವಾದಾನಾಗೆ ಅವರ ಮೃತದೇಹವನ್ನು ಸೋಮವಾರ ಕೊಲಂಬೊಗೆ ಕಳುಹಿಸಿಕೊಡಲಾಗಿದೆ.

ಮತ್ತೊಂದೆಡೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಇನ್ನೂ ಏಳು ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರ ಒಟ್ಟು ಸಂಖ್ಯೆ 131ಕ್ಕೆ ಏರಿದಂತಾಗಿದೆ. ಇವರಲ್ಲಿ 26 ಮಂದಿ ಪ್ರಮುಖ ಆರೋಪಿಗಳು ಸೇರಿದ್ದಾರೆ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸರು ತಿಳಿಸಿದ್ದಾರೆ.

ಧರ್ಮ ನಿಂದನೆ ಆರೋಪದ ಮೇರೆಗೆ ದಿಯಾವಾದಾನಾಗೆ ಅವರನ್ನು ಥಳಿಸಿ ಕೊಂದು, ಮೃತದೇಹಕ್ಕೆ ಬೆಂಕಿ ಹಚ್ಚಿದ್ದ ಉದ್ರಿಕ್ತ ಗುಂಪು, ಅವರು ಕೆಲಸ ಮಾಡುತ್ತಿದ್ದ ಕ್ರೀಡಾ ದಿರಿಸು ತಯಾರಿಸುವ ಉದ್ಯಮದ ಮಾಲೀಕರನ್ನೂ ಕೊಲ್ಲಲು ಮುಂದಾಗಿತ್ತು. ಕಾರ್ಖಾನೆಗೆ ಬೆಂಕಿ ಹಚ್ಚಲು ಸಹ ಯತ್ನಿಸಿತ್ತು. ಆದರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಈ ಯತ್ನ ಫಲಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.