ಶಾಂಘೈ/ ಬೀಜಿಂಗ್: ವರ್ಷದ ಬಳಿಕ ಚೀನಾದಲ್ಲಿ ಕೋವಿಡ್‌ನಿಂದಾಗಿ ಸಾವು ಸಂಭವಿಸಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ.

ಈಶಾನ್ಯ ಪ್ರಾಂತ್ಯ ಜಿಲಿನ್‌ನಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.ಈ ಹಿಂದೆ 2021ರ ಜನವರಿ 25ರಂದು ಕೋವಿಡ್‌ನಿಂದಾಗಿ ಮೃತಪಟ್ಟ ಪ್ರಕರಣ ವರದಿಯಾಗಿತ್ತು. ಆ ಬಳಿಕ ಚೀನಾದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ವರದಿಯಾಗಿರಲಿಲ್ಲ.

ಮೃತರಲ್ಲಿ ಒಬ್ಬರು ಲಸಿಕೆ ಪಡೆದಿರಲಿಲ್ಲ ಹಾಗೂ ಇಬ್ಬರಲ್ಲೂ ಕೋವಿಡ್‌ಗೆ ಸಂಬಂಧಿಸಿದಂತೆ ಸೌಮ್ಯ ಲಕ್ಷಣಗಳಿದ್ದವು ಎಂದುಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಜಿಯಾವೊ ಯಾಹುಯಿ ತಿಳಿಸಿದ್ದಾರೆ. ಮೃತರಲ್ಲಿ ಒಬ್ಬರು 87 ವರ್ಷದವರು, ಇನ್ನೊಬ್ಬರು 65 ವರ್ಷದವರಾಗಿದ್ದಾರೆ.

ಕೋವಿಡ್ ಪ್ರಕರಣಗಳು ಹೆಚ್ಚಳ: ಪಿಡುಗಿನ ಸೂಚನೆ– ಡಬ್ಲ್ಯುಎಚ್ಒ ಎಚ್ಚರಿಕೆ

ಈ ಎರಡು ಸಾವುಗಳಿಂದಾಗಿ ಚೀನಾದಲ್ಲಿ ಇಲ್ಲಿಯವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 4,638ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಚೀನಾದಲ್ಲಿ 2,228 ಜನರಲ್ಲಿ ಸೋಂಕು ಪತ್ತೆಯಾಗಿದ್ದು. ಗುರುವಾರ 2,416 ಜನರಲ್ಲಿ ಸೋಂಕು ದೃಢಪಟ್ಟಿತ್ತು.

ಜಿಲಿನ್‌ನಲ್ಲಿ ಕಳೆದ ಒಂದು ವಾರದಿಂದ ಸಾವಿರಾರು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಚಿಕಿತ್ಸೆಗಾಗಿ ಎಂಟು ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ.

ಹಾಂಗ್‌ಕಾಂಗ್‌ನಲ್ಲಿ ಶನಿವಾರ ಹೊಸದಾಗಿ 16,597 ಜನರಲ್ಲಿ ಕೋವಿಡ್– 19 ಪತ್ತೆಯಾಗಿದೆ. ಇಲ್ಲಿ ಶುಕ್ರವಾರ 20,000 ಜನರಲ್ಲಿ ಸೋಂಕು ದೃಢಪಟ್ಟಿತ್ತು.

ದಕ್ಷಿಣ ಕೊರಿಯಾ: 6.21 ಲಕ್ಷ ಹೊಸ ಪ್ರಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.