ಬೀಜಿಂಗ್: ಷಿನ್‌ಜಿಯಾಂಗ್ ಮತ್ತು ಟಿಬೆಟ್ ಪ್ರಾಂತ್ಯಗಳ ವಾಯುಪ್ರದೇಶದಲ್ಲಿ ಅತೀ ಎತ್ತರದಲ್ಲಿ ಅಮೆರಿಕದ ಬಲೂನ್‌ಗಳು ಹಾರಿಹೋಗಿವೆ. ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತಂದಿರುವ ಅಮೆರಿಕದ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚೀನಾ ಬುಧವಾರ ತಿಳಿಸಿದೆ.

‘ಚೀನಾದ ಅನುಮತಿ ಪಡೆಯದೇ, ಷಿನ್‌ಜಿಯಾಂಗ್, ಟಿಬೆಟ್ ಮತ್ತು ಇತರ ಪ್ರಾಂತ್ಯಗಳು ಸೇರಿ ದೇಶದ ವಾಯು ಪ್ರದೇಶದ ಮೇಲೆ 2022ರ ಮೇ ತಿಂಗಳಿನಿಂದ ಇದುವರೆಗೆ ಕನಿಷ್ಠ 10 ಬಾರಿ ಅಮೆರಿಕದ ಬಲೂನ್‌ಗಳು ಅಕ್ರಮ ಹಾರಾಟ ನಡೆಸಿವೆ’ ಎಂದು ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ ಬುಧವಾರ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ. ಚೀನಾದ ಸಾರ್ವಭೌಮತ್ವ ಮತ್ತು ಸುರಕ್ಷತೆಗೆ ಧಕ್ಕೆ ಮಾಡಿದ ಅಮೆರಿಕದ ಕಂಪನಿಗಳ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ವಾಂಗ್ ಹೇಳಿದರು.

ಚೀನಾದ ಬೇಹುಗಾರಿಕೆ ಬಲೂನ್ ಅಮೆರಿಕದ ವಾಯುಪ್ರದೇಶದಲ್ಲಿ ಕಾಣಿಸಿಕೊಂಡ ನಂತರ, ಬೀಜಿಂಗ್‌ಗೆ ಕೈಗೊಳ್ಳಬೇಕಿದ್ದ ಪೂರ್ವ ಯೋಜಿತ ಪ್ರವಾಸವನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಮುಂದೂಡಿದ್ದರು. ಈ ವಾರ ಮ್ಯೂನಿಚ್‌ನಲ್ಲಿ ಚೀನಾದ ಉನ್ನತ ರಾಜತಾಂತ್ರಿಕ ವಾಂಗ್ ಯಿ ಅವರನ್ನು ಭೇಟಿಯಾಗಲು ಬ್ಲಿಂಕನ್ ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.