ಚೀನಾದ ಆರ್ಥಿಕ ಬೆಳವಣಿಗೆ, ಭೌಗೋಳಿಕ ರಾಜಕೀಯ ಹಸ್ತಕ್ಷೇಪ ವಿರುದ್ಧ ಎಲ್ಲ ರಾಷ್ಟ್ರಗಳು ಒಟ್ಟುಗೂಡಬೇಕು ಅಥವಾ ಬೀಜಿಂಗ್ ಅನ್ನು ಏಕಾಂಗಿಯನ್ನಾಗಿಸುವ ಮೂಲಕ ಪಾಠ ಕಲಿಸಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಕರೆ ನೀಡಿದ್ದಾರೆ.

ಮಾನವ ಹಕ್ಕುಗಳ ವಿಚಾರವಾಗಿ ಚೀನಾಗೆ ಸವಾಲೊಡ್ಡಲು ಪಾಶ್ಚಾತ್ಯ ರಾಷ್ಟ್ರಗಳು ಹೆದರಬಾರದು. ಚೀನಾದ ಪ್ರಾಬಲ್ಯ ಹೆಚ್ಚಿದಂತೆ ಇತರ ರಾಷ್ಟ್ರಗಳು ಸಮುದ್ರಯಾನಕ್ಕೆ ಹೊಸ ಭೌಗೋಳಿಕ ಮಾರ್ಗಗಳನ್ನು ಕಂಡುಕೊಳ್ಳುವಂತಾಗಿದೆ ಎಂದು ರುಡ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಬೀಜಿಂಗ್ ನಡೆಯ ಬಗ್ಗೆ ಅಸಮಾಧಾನವಿರುವ ವಿಶ್ವದ ಎಲ್ಲ ರಾಷ್ಟ್ರಗಳ ಸರ್ಕಾರಗಳು ಒಟ್ಟಾಗಬೇಕಿದೆ. ಚೀನಾ ಜೊತೆಗಿನ ಸಮಸ್ಯೆಯನ್ನು ಉಭಯ ರಾಷ್ಟ್ರಗಳಿಗೆ ಸೀಮಿತಗೊಳಿಸಿಕೊಂಡರೆ ನಿಮ್ಮ ವಿರುದ್ಧ ಚೀನಾ ಮತ್ತಷ್ಟು ಪ್ರಾಬಲ್ಯ ಸಾಧಿಸುತ್ತದೆ ಎಂದು ಬಿಬಿಸಿಯ 'ಟಾಕಿಂಗ್ ಬ್ಯುಸಿನೆಸ್ ಏಷ್ಯಾ' ಸಂವಾದದಲ್ಲಿ ಕೆವಿನ್ ರುಡ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ನಾಯಿಗಳಲ್ಲಿ ಕಾಣಿಸುವ ಕೊರೊನಾ ವೈರಸ್ ಮಾನವನಲ್ಲಿ ಪತ್ತೆ, ಆತಂಕ ಬೇಡ: ವಿಜ್ಞಾನಿಗಳು

ಚೀನಾ ಮತ್ತು ಆಸ್ಟ್ರೇಲಿಯಾ ನಡುವಣ ಸಂಬಂಧ ತೀರ ಹದಗೆಟ್ಟಿರುವ ಬೆನ್ನಲ್ಲೇ ಕೆವಿನ್ ರುಡ್ ಚೀನಾ ವಿರುದ್ಧ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಉಭಯ ರಾಷ್ಟ್ರಗಳ ವ್ಯಾವಹಾರಿಕ ಮತ್ತು ರಾಜತಾಂತ್ರಿಕ ವಿಚಾರವಾಗಿ ಭಿಕ್ಕಟ್ಟು ತಲೆದೋರಿದೆ. ಚೀನಾಗೆ ನೀಡಲಾಗಿದ್ದ ಬೃಹತ್ ಮೂಲಸೌಕರ್ಯ, ರಸ್ತೆ ಮತ್ತಿತರ ಪ್ರಮುಖ ಯೋಜನೆಗಳನ್ನು ಆಸ್ಟ್ರೇಲಿಯಾ ಹಿಂತೆಗೆದುಕೊಂಡಿದೆ. ಚೀನಾದ ದೂರಸಂಪರ್ಕ ವ್ಯವಸ್ಥೆ ಹುವೈನ 5ಜಿ ನೆಟ್‌ವರ್ಕ್‌ಅನ್ನು ನಿಷೇಧಿಸಿದೆ. ವೈನ್, ಗೋಮಾಂಸ, ಕಡಲೇಡಿ ಮತ್ತು ಬಾರ್ಲಿಯನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುವುದನ್ನು ಚೀನಾ ನಿಲ್ಲಿಸಿದೆ.

ಕೊರೊನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಆಸ್ಟ್ರೇಲಿಯಾ ಕರೆ ನೀಡಿದ್ದು ಉಭಯ ರಾಷ್ಟ್ರಗಳ ನಡುವಣ ಭಿಕ್ಕಟ್ಟು ತಾರಕಕ್ಕೆ ಏರಿರುವುದಕ್ಕೆ ಸಾಕ್ಷಿ ಎಂದು ವಿಶ್ಲೇಷಿಸಲಾಗಿದೆ.

ವುಹಾನ್ ಲ್ಯಾಬ್ನಿಂದ ಕೊರೊನಾ ವೈರಸ್ ಬಂತೇ?: ಬೈಡೆನ್ ಮರುತನಿಖೆಗೆ ಚೀನಾ ಕಿಡಿಕಿಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.