ಬೀಜಿಂಗ್: ತೈವಾನ್‌ಗೆ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿ ನೀಡಿರುವುದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ, ತೈವಾನ್ ಮೇಲೆ ವ್ಯಾಪಾರ ನಿರ್ಬಂಧಗಳನ್ನು ಹೇರಲು ಆರಂಭಿಸಿದೆ.

ತೈವಾನ್‌ನ ಹಲವು ಆಹಾರೋತ್ಪನ್ನ ಕಂಪನಿಗಳಿಂದ ಮಂಗಳವಾರವೇ ಚೀನಾ ಆಮದನ್ನು ನಿಲ್ಲಿಸಿದೆ. ಚೀನಾ ಆಮದು ಸ್ಥಗಿತಗೊಳಿಸಿರುವುದನ್ನು ತೈವಾನ್‌ನ ಕೃಷಿ ಮಂಡಳಿ ಕೂಡ ಖಚಿತಪಡಿಸಿದೆ.

ಚೀನಾ ಲೆಕ್ಕಿಸದೇ ತೈವಾನ್ ತಲುಪಿದ ಪೆಲೋಸಿ

ಚೀನಾ ಕಪ್ಪುಪಟ್ಟಿಗೆ ಸೇರಿಸಿರುವ ಕಂಪನಿಗಳ ಮಾಹಿತಿಯನ್ನು ಬಹಿರಂಗಪಡಿಸಿರುವ ತೈವಾನ್ ಕೃಷಿ ಮಂಡಳಿ, ಚಹಾ ಎಲೆಗಳು, ತರಕಾರಿ, ಮೀನು ಆಮದನ್ನು ನೆರೆ ದೇಶ ಸ್ಥಗಿತಗೊಳಿಸಿರುವುದಾಗಿ ಮಾಹಿತಿ ನೀಡಿದೆ ಎಂದು ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾದ ಭಾರಿ ವಿರೋಧದ ನಡುವೆಯೂ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅಮೆರಿಕದ ವಿಶೇಷ ವಿಮಾನದಲ್ಲಿ ಮಂಗಳವಾರ ತೈವಾನ್ ರಾಜಧಾನಿ ತೈಪೆ ತಲುಪಿದ್ದರು. ಇದರ ಬೆನ್ನಲ್ಲೇ, ಚೀನಾದ ಫೈಟರ್ ಜೆಟ್‌ಗಳು ತೈವಾನ್ ಜಲಸಂಧಿಯನ್ನು ದಾಟಿರುವ ಬಗ್ಗೆ ಮಂಗಳವಾರ ರಾತ್ರಿ ವರದಿಯಾಗಿತ್ತು.

ಪೆಲೊಸಿ ತೈವಾನ್ ಭೇಟಿ: ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗೆ ಮುಂದಾದ ಚೀನಾ

ಇದರ ಬೆನ್ನಲ್ಲೇ, ತೈವಾನ್ ಸೇನೆ ಕೂಡ ತನ್ನ ಯುದ್ಧ ವಿಮಾನಗಳನ್ನು ಪ್ರತಿ ದಾಳಿಗೆ ಸನ್ನದ್ಧವಾಗಿರಿಸಿದೆ ಎಂದು ಮೂಲಗಳು ಹೇಳಿದ್ದವು.

‘ಯಾವುದೇ ಶತ್ರುವಿನಿಂದ ಅಪಾಯ ಕಂಡುಬಂದರೆ, ಅದಕ್ಕೆ ತಕ್ಕ ಉತ್ತರ ನೀಡಲು ಸೇನೆ ಸಂಪೂರ್ಣ ಸನ್ನದ್ಧವಾಗಿದೆ’ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.