ಹಾಂಗ್ಕಾಂಗ್:ಹಾಂಗ್ಕಾಂಗ್ನಲ್ಲಿ ಶುಕ್ರವಾರ ಹೊಸದಾಗಿ 20,079 ಕೋವಿಡ್ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 10 ಲಕ್ಷದ ಗಡಿ ದಾಟಿದೆ.

ಸೋಂಕು ಪೀಡಿತರಲ್ಲಿ ಶೇ 97ರಷ್ಟು ಮಂದಿ ಫೆಬ್ರುವರಿ 9ರ ನಂತರ ಕಾಣಿಸಿ ಕೊಂಡಿರುವ ಅಲೆಯಲ್ಲಿ ಸೋಂಕು ಪೀಡಿತರಾಗಿದ್ದಾರೆ.

ಈವರೆಗೆ 5,200 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಎದುರಾಗಿದೆ. ಶವಸಂಸ್ಕಾರ ಕೇಂದ್ರ ಗಳ ಮೇಲೆ ಒತ್ತಡ ಹೆಚ್ಚಿದ್ದು, ಶವಗಳನ್ನು ಶೀಥಲೀಕರಣ ಘಟಕದಲ್ಲಿ ಇಡಬೇಕಾಗಿದೆ.ಮೃತರಲ್ಲಿ ಹೆಚ್ಚಿನವರು ವಯಸ್ಕರು ಎಂದು ತಿಳಿಸಿದ್ದಾರೆ.

ಲಂಡನ್ನಲ್ಲಿ ನಿರ್ಬಂಧ ತೆರವು:ಕೋವಿಡ್ ಕಾರಣದಿಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಧಿಸಲಾಗಿದ್ದ ನಿರ್ಬಂಧ ಕ್ರಮಗಳನ್ನು ಬ್ರಿಟನ್ ಸರ್ಕಾರ ಶುಕ್ರವಾರದಿಂದ ಅನ್ವಯವಾಗುವಂತೆ ಹಿಂಪಡೆದಿದೆ.

ಈ ಕುರಿತ ಹೇಳಿಕೆಯಲ್ಲಿ, ‘ಪರಿಸ್ಥಿತಿ ಗಮನಿಸಲಿದ್ದು, ಭವಿಷ್ಯದಲ್ಲಿ ಸೋಂಕು ದೇಶದಲ್ಲಿ ಕಾಣಿಸಿಕೊಳ್ಳದಂತೆ ಜಾಗ್ರತೆ ವಹಿಸಲಾಗುವುದು. ಅಗತ್ಯಬಿದ್ದಲ್ಲಿ ನಿರ್ಬಂಧ ಜಾರಿಗೊಳಿಸಲಾಗುವುದು’ ಎಂದು ತಿಳಿಸಿದೆ.

ಈವರೆಗೆ ಲಸಿಕೆ ಪಡೆದ ಪ್ರಯಾಣಿಕರಿಗೆ ಪಿಸಿಆರ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತಿತ್ತು. ಲಸಿಕೆ ಪಡೆಯದವರು ನಿರ್ಗಮನಕ್ಕೆ ಮುನ್ನ ಮತ್ತು ಆಗಮನದ ಎರಡು ದಿನದ ಬಳಿಕ ಪರೀಕ್ಷೆಗೆ ಒಳಗಾಗಬೇಕಿತ್ತು.

ವ್ಯಾಂಕೂವರ್ ವರದಿ: ದೇಶಕ್ಕೆ ಭೇಟಿ ನೀಡುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹಾಜರುಪಡಿಸಬೇಕು ಎಂಬ ನಿರ್ಬಂಧವನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೆನಡಾ ಕೈಬಿಡಲಿದೆ.ಆರೋಗ್ಯ ಸಚಿವವರು ಈ ಮಾಹಿತಿ ನೀಡಿದ್ದಾರೆ.

ದೇಶ ಪ್ರವೇಶಿಸಲು ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ. ಲಸಿಕೆ ಪಡೆದಿರುವವರನ್ನೂ ರ್ಯಾಂಡಮ್ ಮಾದರಿಯಲ್ಲಿ ಪರೀಕ್ಷೆಗೆ ಒಳ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಸಮೋವಾ ಲಾಕ್ಡೌನ್
ವೆಲ್ಲಿಂಗ್ಟನ್ (ಎ.ಪಿ): ದ್ವೀಪರಾಷ್ಟ್ರ ಸಮೋವಾದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದರ ಹಿಂದೆಯೇ ಸರ್ಕಾರ ಲಾಕ್ಡೌನ್ ಘೋಷಿಸಿದೆ.

ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಮಹಿಳೆಯು ಕಳೆದ ಒಂದು ವಾರದಲ್ಲಿ ಚರ್ಚ್,ಗ್ರಂಥಾಲಯ, ಆಸ್ಪತ್ರೆಗೆ ಭೇಟಿ ನೀಡಿದ್ದರು. ಸೋಂಕು ವ್ಯಾಪಿಸದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ಶುಕ್ರವಾರ ನಾಗರಿಕರು ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.