ಸೋಲ್: ದಕ್ಷಿಣ ಕೊರಿಯಾ ದಲ್ಲಿ ಸತತ ಎರಡನೇ ದಿನ ಒಮೈಕ್ರಾನ್ ಸೋಂಕು ಪ್ರಕರಣ ಗಳು ತೀವ್ರಗತಿಯಲ್ಲಿ ಏರಿದೆ. ಗುರುವಾರ 6.21 ಲಕ್ಷ ಪ್ರಕರಣ ದೃಢಪಟ್ಟಿದ್ದು, ಆರೋಗ್ಯ ವ್ಯವಸ್ಥೆ ಏರು ಪೇರಾಗುವ ಆತಂಕ ಎದುರಾಗಿದೆ.

ಕಳೆದ 24 ಗಂಟೆಗಳಲ್ಲಿ 429 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಾಗುವರು, ಸೋಂಕು ಪೀಡಿತರ ಸಂಖ್ಯೆ ಏರುಮುಖವಾಗಿದೆ. ಹೀಗಾಗಿ, ಬರುವ ವಾರಗಳಲ್ಲಿ ಸಾವಿನ ಸಂಖ್ಯೆ ಏರಬಹುದು ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.

ಬುಧವಾರ ಸುಮಾರು 4 ಲಕ್ಷ ಪ್ರಕರಣ ದೃಢಪಟ್ಟಿದ್ದವು. 24 ಗಂಟೆ ಗಳಲ್ಲಿ ಸುಮಾರು 2.21 ಲಕ್ಷ ಪ್ರಕರಣ ಹೆಚ್ಚಾಗಿದ್ದು, ಪ್ರಕರಣಗಳ ಸಂಖ್ಯೆ 82 ಲಕ್ಷಕ್ಕೆ ಏರಿದೆ. ಫೆಬ್ರುವರಿ ಬಳಿಕ 74 ಲಕ್ಷ ಜನರು ಸೋಂಕು ಪೀಡಿತರಾಗಿದ್ದಾರೆ.

‘ಸರ್ಕಾರದ ನಿರೀಕ್ಷೆ ಮೀರಿ ಪ್ರಕರಣ ಗಳು ಗಣನೀಯವಾಗಿ ಏರಿವೆ. ‘ಜನರಿಗೆ ಲಸಿಕೆ ನೀಡಿದ್ದು, ಶೇ 68ರಷ್ಟು ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಆ ನಂತರವು ಸೋಂಕುಗತಿ ಅಂದಾಜಿಸಲು ಆರೋಗ್ಯಇಲಾಖೆ ಅಧಿಕಾರಿಗಳು ವಿಫಲರಾದರು.ಕಳೆದ ಚುನಾವಣೆ ಸಂದರ್ಭದಲ್ಲಿ ನಡೆದ ಪ್ರಚಾರ ಕಾರ್ಯಕ್ರಮಗಳು ಸೋಂಕು ಏರಿಕೆಗೆ ಕಾರಣವಾಗಿದೆ’ ಎಂಬ ಅಭಿಪ್ರಾಯಗಳಿವೆ.

ಹಾಂಗ್‌ಕಾಂಗ್: ಹಾಂಗ್‌ಕಾಂಗ್‌ನಲ್ಲಿ ಮತ್ತೆ 21,650 ಪ್ರಕರಣಗಳು ದೃಢಪಟ್ಟಿವೆ. ಬುಧವಾರ 29,272 ಮಂದಿಗೆ ಸೋಂಕು ತಗುಲಿತ್ತು. 24 ಗಂಟೆಗಳಲ್ಲಿ 202 ಮಂದಿ ಮೃತಪಟ್ಟಿ ದ್ದಾರೆ ಎಂದುಅಧಿಕಾರಿಗಳು ತಿಳಿಸಿದ್ದಾರೆ.

ಜರ್ಮನಿ: 2.94 ಲಕ್ಷ ಮಂದಿಗೆ ಸೋಂಕು
ಬರ್ಲಿನ್: ಜರ್ಮನಿಯಲ್ಲಿ 24 ಗಂಟೆಗಳಲ್ಲಿ 2,94,931 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. 278 ಜನರು ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 1.26,420ಕ್ಕೆ ಏರಿದೆ.

ಈ ಮಧ್ಯೆ,ವಯಸ್ಕರಿಗೆ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆದಿದೆ. 50ವರ್ಷ ಮೀರಿದವರಿಗಷ್ಟೇ ಕಡ್ಡಾಯ ಮಾಡಿ ಎಂಬ ವಾದವು ಇದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ವಿಳಂಬ ಮಾಡುತ್ತಿದೆ ಎಂಬ ಟೀಕೆಗಳು ಇವೆ.

ಈ ಮಧ್ಯೆ, ಸೋಂಕು ತಡೆಗೆ ರಾಷ್ಟ್ರವ್ಯಾಪಿ ನಿಯಮಗಳನ್ನು ಜಾರಿಗೊಳಿಸುವ ಬದಲಿಗೆ 16 ರಾಜ್ಯಗಳ ಸರ್ಕಾರಗಳು ಸ್ಥಳೀಯ ಪರಿಸ್ಥಿತಿಯನ್ನು ಆಧರಿಸಿ ನಿರ್ಬಂಧ ಕ್ರಮಗಳನ್ನು ನಿರ್ಧರಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.