ಲಾಗೋಸ್: ದೇಶದಲ್ಲಿ ಟ್ವಿಟರ್ ಮೇಲೆ ಅನಿರ್ದಿಷ್ಟಾವಧಿ ನಿಷೇಧ ಹೇರುತ್ತಿರುವುದಾಗಿ ಆಫ್ರಿಕಾ ಖಂಡದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾ ಸರ್ಕಾರ ಹೇಳಿದೆ.

ಅಧ್ಯಕ್ಷ ಮುಹಮ್ಮದ್ ಬುಹಾರಿ ಅವರು ಪ್ರತ್ಯೇಕತಾವಾದಿ ಚಳವಳಿಯ ಬಗ್ಗೆ ಮಾಡಿದ ವಿವಾದಾತ್ಮಕ ಟ್ವೀಟ್ ಅನ್ನು ಕಂಪನಿಯು ಅಳಿಸಿ ಹಾಕಿದ ಒಂದು ದಿನದ ನಂತರ, ಶುಕ್ರವಾರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಆದರೆ ಕೆಲವು ಬಳಕೆದಾರರಿಗೆ ಶುಕ್ರವಾರ ರಾತ್ರಿಯೂ ಟ್ವಿಟರ್ ಬಳಕೆ ಸಾಧ್ಯವಾಗಿತ್ತು. ಇನ್ನು ಕೆಲವರು ವಿಪಿಎನ್ ಸಹಾಯದಿಂದ ಟ್ವಿಟರ್ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.

ಓದಿ:ಭಾರತ ಮಾದರಿಯ ಕೊರೊನಾ ವೈರಸ್ ವಿರುದ್ಧ ಫೈಜರ್ ಪರಿಣಾಮಕಾರಿಯಲ್ಲ: ವರದಿ

ನಿರ್ಧಾರವನ್ನು ಘೋಷಿಸಲು ಟ್ವಿಟರ್ ಅನ್ನೇ ಬಳಸಿದ್ದಕ್ಕೆ ಅನೇಕ ಮಂದಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

‘ಟ್ವಿಟರ್ ಅನ್ನು ನಿಷೇಧಿಸಲು ನೀವು ಅದನ್ನೇ ಬಳಸುತ್ತೀರಾ? ನಿಮಗೆ ಹುಚ್ಚಲ್ಲವೇ?’ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ನೈಜೀರಿಯಾದ ಸಾಂಸ್ಥಿಕ ಅಸ್ತಿತ್ವವನ್ನು ದುರ್ಬಲಗೊಳಿಸಬಲ್ಲ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಕಾರಣಕ್ಕಾಗಿ ಸರ್ಕಾರವು ನಿಷೇಧ ಹೇರುವಂತಹ ಕ್ರಮ ಕೈಗೊಂಡಿದೆ’ ಎಂದು ಸಚಿವ ಲಾಯಿ ಮೊಹಮ್ಮದ್ ತಿಳಿಸಿದ್ದಾರೆ.

ಅಧ್ಯಕ್ಷರ ಟ್ವೀಟ್ ಅಳಿಸಿಹಾಕಿರುವ ಕ್ರಮವನ್ನು ಅವರು ಟೀಕಿಸಿದ್ದಾರೆ.

‘ನೈಜೀರಿಯಾದಲ್ಲಿ ಟ್ವಿಟರ್ನ ನಡೆ ಸಂಶಯಾಸ್ಪದವಾಗಿದೆ. ಸರ್ಕಾರದ ವಿರುದ್ಧದ ಪ್ರಚೋದನಾತ್ಮಕ ಟ್ವೀಟ್ಗಳನ್ನು ಟ್ವಿಟರ್ ಈ ಹಿಂದೆ ಕಡೆಗಣಿಸಿತ್ತು’ ಎಂದೂ ಅವರು ಹೇಳಿದ್ದಾರೆ.

ಓದಿ:ಆಹಾರ ಧಾನ್ಯ ಹೊಂದಿಸಿ ತರಲು ಸೈನಿಕರಿಗೆ ರಜೆ ಕೊಟ್ಟ ಉತ್ತರ ಕೊರಿಯಾ ಸೇನೆ

ದೇಶದ ಪ್ರತ್ಯೇಕತಾವಾದಿ ಉಗ್ರರಿಗೆ ಬೆದರಿಕೆಯೊಡ್ಡಿ ಅಧ್ಯಕ್ಷ ಬುಹಾರಿ ಅವರು ಟ್ವೀಟ್ ಮಾಡಿದ್ದರು. ಅದನ್ನು ‘ನಿಂದನಾತ್ಮಕ’ ಎಂದಿದ್ದ ಟ್ವಿಟರ್, ಅಳಿಸಿಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.