ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ವಿಭಿನ್ನ ಉಡುಗೊರೆಗಳನ್ನು ನೀಡಿ ಗಮನ ಸೆಳೆದಿದ್ದಾರೆ.

ಕಮಲಾ ಹ್ಯಾರಿಸ್ ಅವರ ಅಜ್ಜ ಪಿ.ವಿ.ಗೋಪಾಲನ್ ಅವರು ಭಾರತದಲ್ಲಿ ಸರ್ಕಾರಿ ಅಧಿಕಾರಿಯಾಗಿ ಉನ್ನತ ಹುದ್ದೆಯಲ್ಲಿ ಇದ್ದವರು. ಅವರಿಗೆ ಸೇರಿದ್ದ ಕೆಲವು ಹಳೆಯ ಅಧಿಸೂಚನೆಗಳ ಪ್ರತಿಗಳು, ಮರದಿಂದ ತಯಾರಿಸಿದ್ದ ಕರಕುಶಲ ಫ್ರೇಮ್, ‘ಗುಲಾಬಿ ಮೀನಾಕರಿ (ವಾರಾಣಸಿಯ ವಿಶಿಷ್ಟ ಕಲಾಕೃತಿ)’ ಚೆಸ್ ಸೆಟ್ ಇವುಗಳನ್ನು ಮೋದಿ ಅವರು ಉಡುಗೊರೆಯಾಗಿ ಕಮಲಾಗೆ ನೀಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಓದಿ:ಭಯೋತ್ಪಾದನೆಗೆ ಪಾಕ್ ಕುಮ್ಮಕ್ಕು: ಪ್ರಧಾನಿ ಮೋದಿ- ಕಮಲಾ ಹ್ಯಾರಿಸ್ ಚರ್ಚೆ

ಕಮಲಾ ಜತೆ ದ್ವಿಪಕ್ಷೀಯ ಮಾತುಕತೆಗೂ ಮುನ್ನ ಶ್ವೇತಭವನದಲ್ಲಿ ನಡೆಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮೋದಿ, ‘ಅಧ್ಯಕ್ಷ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರ ನಾಯಕತ್ವದಲ್ಲಿ ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರ ತಲುಪಲಿದೆ’ ಎಂದು ಹೇಳಿದ್ದರು.

ಕಮಲಾ ಜತೆಗಿನ ದ್ವಿಪಕ್ಷೀಯ ಮಾತುಕತೆ ಯಶಸ್ವಿಯಾಗಿದೆ ಎಂದೂ ಸರ್ಕಾರಿ ಮೂಲಗಳು ಹೇಳಿವೆ.

ಓದಿ:ಅನೇಕರಿಗೆ ಕಮಲಾ ಹ್ಯಾರಿಸ್ ಸ್ಫೂರ್ತಿದಾಯಕ: ನರೇಂದ್ರ ಮೋದಿ ಶ್ಲಾಘನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.