ಟೋಕಿಯೊ: ‘ಮಾಜಿ ಪ್ರಧಾನಿ ಶಿಂಜೊ ಅಬೆ ಅವರು ಗುಂಡೇಟಿನಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಆದರೆ, ಅವರು ಬದುಕುಳಿಯುವ ವಿಶ್ವಾಸವಿದೆ’ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಹೇಳಿದ್ದಾರೆ.

ಪಶ್ಚಿಮ ಜಪಾನ್ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಅಬೆ ಅವರನ್ನು ಕಾಶಿಹರಾ ನಗರದ ನಾರಾ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಏರ್ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ.

ಚುನಾವಣಾ ಪ್ರಚಾರದಲ್ಲಿದ್ದ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಮತ್ತು ಸಚಿವರು ಅಬೆ ಅವರ ಮೇಲಿನ ದಾಳಿ ವಿಷಯ ತಿಳಿಯುತ್ತಲೇ ಟೋಕಿಯೊಗೆ ದೌಡಾಯಿಸಿದರು.

ಪ್ರಧಾನಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಶಿದಾ, ‘ಅಬೆ ಅವರಿಗೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅಬೆ ಅವರು ಬದುಕುಳಿಯಬೇಕು ಎಂದು ನಾನು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ’ ಎಂದರು.

ಅಬೆ ಅವರ ಮೇಲಿನ ದಾಳಿ ಭೀಕರ ಮತ್ತು ಅನಾಗರಿಕ ಎಂದು ಕಿಶಿದಾ ಕರೆದಿದ್ದಾರೆ. ಪ್ರಜಾಪ್ರಭುತ್ವದ ಅಡಿಪಾಯವಾದ ಚುನಾವಣೆ ಪ್ರಚಾರದ ಸಂದರ್ಭದಲ್ಲೇ ನಡೆದ ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ

ದೀರ್ಘ ಅವಧಿಗೆ ಜಪಾನ್ನ ಪ್ರಧಾನಿಯಾಗಿದ್ದ ಶಿಂಜೊ ಅಬೆಗೆ ಗುಂಡೇಟು: ಸಾವಿನ ಅನುಮಾನ

ಅನಾರೋಗ್ಯದ ಕಾರಣ ಜಪಾನ್ ಪ್ರಧಾನಿ ಶಿಂಜೊ ಅಬೆ ರಾಜೀನಾಮೆ

Explainer | ಜಪಾನ್ ಪ್ರಧಾನಿ ಶಿಂಜೊ ಅಬೆ ಆಡಳಿತ ಹೇಗಿತ್ತು? ಮುಂದೇನಾಗಲಿದೆ?

ಸಂಪಾದಕೀಯ: ಜಪಾನ್ ನಾಯಕತ್ವ ಬದಲು: ನೀತಿಯಲ್ಲಿ ಆಗದಿರಲಿ ಪಲ್ಲಟ

ರಾಜಕೀಯ ಪಕ್ಷಗಳಿಗೆ ದೇಣಿಗೆ ಹಗರಣ: ಕ್ಷಮೆ ಯಾಚಿಸಿದ ಜಪಾನ್ ಮಾಜಿ ಪ್ರಧಾನಿ ಅಬೆ

ಜಪಾನ್ನ ಮಾಜಿ ಪ್ರಧಾನಿ ಶಿಂಜೊ ಅಬೆಗೆ ನೇತಾಜಿ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.