ವಿಶ್ವಸಂಸ್ಥೆ: ಉಕ್ರೇನ್ನ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬುಧವಾರ ನಿರ್ಣಯ ಅಂಗೀಕರಿಸಲಾಗಿದೆ.

ಒಟ್ಟು 193 ದೇಶಗಳ ಪೈಕಿ 141 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ರಷ್ಯಾ, ಬೆಲರೂಸ್ಎರಿಟ್ರಿಯಾ, ಉತ್ತರ ಕೊರಿಯಾ, ಸಿರಿಯಾ... ಈ ಐದು ದೇಶಗಳು ನಿರ್ಣಯದ ವಿರುದ್ಧ ಮತ ಹಾಕಿವೆ.

ಏಷ್ಯಾ ರಾಷ್ಟ್ರಗಳಾದ ಭಾರತ, ಚೀನಾ, ಪಾಕಿಸ್ತಾನ ಸಭೆಯಿಂದ ದೂರ ಉಳಿದು ನಿರ್ಲಿಪ್ತತೆ ಪ್ರದರ್ಶಿಸಿವೆ.

ರಷ್ಯಾ ಈ ಕೂಡಲೇ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಬೇಕು, ಸಮಸ್ಯೆಯ ಶಾಂತಿಯುತ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು, ನಾಗರಿಕರನ್ನು ರಕ್ಷಿಸಬೇಕು ಎಂಬ ಅಂಶಗಳು ನಾಲ್ಕು ಪುಟಗಳ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

‘ಅವರು (ರಷ್ಯಾ) ಉಕ್ರೇನ್ನ ಅಸ್ತಿತ್ವದ ಹಕ್ಕನ್ನೇ ಕಸಿದುಕೊಳ್ಳಲು ಬಂದಿದ್ದಾರೆ’ ಎಂದು ಉಕ್ರೇನ್ನ ರಾಯಭಾರಿ ಸರ್ಗಿ ಕಿಸ್ಲಿಟ್ಯಾ ಮತದಾನದ ಮೊದಲು ಸಭೆಯಲ್ಲಿ ಹೇಳಿದರು.

‘ರಷ್ಯಾದ ಗುರಿ ಕೇವಲ ಆಕ್ರಮಣ ಮಾತ್ರವಲ್ಲ, ನರಮೇಧವೂ ಕೂಡ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.