ದೇಶ, ಕಾಲ, ನಾಗರಿಕತೆಗಳನ್ನು ಮೀರಿ ನಿಲ್ಲುವ ಶಕ್ತಿ ಪ್ರೇಮಕ್ಕಿದೆ ಎಂಬುದು ಚರಿತ್ರೆಯಲ್ಲಿ ವ್ಯಾಪಕವಾಗಿಯೇ ದಾಖಲಾಗಿದೆ. ಲೈಲಾ-ಮಜ್ನು, ರೋಮಿಯೋ-ಜೂಲಿಯೆಟ್ರ ಪ್ರೇಮಕತೆಗಳ ಉಲ್ಲೇಖಗಳು ಪುರಾತನ ದಸ್ತಾವೇಜುಗಳಲ್ಲಿ ಹೇರಳವಾಗಿಯೇ ದೊರೆಯುತ್ತವೆ. ಆದರೆ, ಸಾಮಾನ್ಯ ಮನುಷ್ಯರಿಬ್ಬರ ನಡುವಿನ ಖಂಡಾಂತರದ ಪ್ರೇಮಕತೆಯೊಂದನ್ನು 'Humans of Bombay' ವೆಬ್ತಾಣವು ದಾಖಲಿಸುವ ಪ್ರಯತ್ನ ಮಾಡಿದೆ.

ಈ ಪ್ರೇಮಕತೆ ಆರಂಭವಾಗುವುದೇ 50 ವರ್ಷಗಳ ಹಿಂದೆ ಅಂದರೆ 1970ರಲ್ಲಿ. ರಾಜಸ್ಥಾನದ ಒಂಟೆ ಮಾವುತ ಮತ್ತು ಆಸ್ಟ್ರೇಲಿಯಾದ ಯುವತಿಯ ನಡುವಿನ ಪ್ರೇಮಕತೆಯಿದು. ಇದಕ್ಕೆ ವೇದಿಕೆ ಒದಗಿಸಿದ್ದು ಥಾರ್ ಮರುಭೂಮಿ. ಅಂತಹ ಮರುಭೂಮಿಯಲ್ಲಿಯೂ ಪ್ರೇಮದ ಓಯಸಿಸ್ ಬುಗ್ಗೆಯಾಗಿ ಹರಿದಿತ್ತು ಎಂಬುದಕ್ಕೆ ಸಾಕ್ಷಿಯಾಗಿರುವುದು 82 ವರ್ಷದ ವ್ಯಕ್ತಿ. ಅವರೀಗ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಕುಲಧಾರ ಎಂಬ ಸಣ್ಣ ಪಟ್ಟಣದಲ್ಲಿ ದ್ವಾರಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 50 ವರ್ಷಗಳ ಹಿಂದೆ ನಡೆದ ತಮ್ಮ ಬದುಕಿನ ಮೊದಲ ಪ್ರೇಮವಿಸ್ಮಯದ ಬಗ್ಗೆ ಅವರ ಬಾಯಿಂದಲೇ ಕೇಳಿ...

'ಮರೀನಾಳನ್ನು ಮೊದಲ ಬಾರಿಗೆ ಭೇಟಿಯಾದಾಗ ನಾನು 30 ವರ್ಷದವನಾಗಿದ್ದೆ. ಅವಳು ಮರುಭೂಮಿ ಸಫಾರಿಗೆಂದು ಆಸ್ಟ್ರೇಲಿಯಾದಿಂದ ಜೈಸಲ್ಮೇರ್ಗೆ ಬಂದಿದ್ದಳು. ಅವಳದು ಐದು ದಿನಗಳ ಪ್ರವಾಸವಾಗಿತ್ತು. ಅದು 1970ರ ದಶಕ. ನಾನು ಅವಳಿಗೆ ಒಂಟೆ ಸವಾರಿ ಮಾಡಲು ಹೇಳಿಕೊಡುತ್ತಿದ್ದೆ. ಮೊದಲ ನೋಟದಲ್ಲೇ ಪ್ರೇಮವಾಗುತ್ತದೆಂದು ನಾನು ಅವಳನ್ನು ನೋಡಿದ ಕ್ಷಣವೇ ಅರಿತುಕೊಂಡೆ. ಅವಳ ನೋಟ ನನ್ನನ್ನು ವಿಚಿತ್ರ ಮಾಂತ್ರಿಕತೆಗೆ ನೂಕಿತ್ತು.

ಸ್ಟಷ್ಟವಾಗಿ ಹೇಳಬೇಕೆಂದರೆ, ನಮ್ಮಿಬ್ಬರಿಗೂ ಮೊದಲ ನೋಟದಲ್ಲೇ ಪ್ರೇಮವಾಗಿತ್ತು. ಪ್ರವಾಸದುದ್ದಕ್ಕೂ, ನಮ್ಮಿಬ್ಬರ ಕಣ್ಣುಗಳು ಪರಸ್ಪರ ಬೆರೆಯುತ್ತಲೇ ಹೋದವು. ಅವಳು ತನ್ನ ಐದು ದಿನಗಳ ಪ್ರವಾಸ ಮುಗಿಸಿ, ಆಸ್ಟ್ರೇಲಿಯಾಕ್ಕೆ ತೆರಳುವ ಸಮಯ ಬಂದೇ ಬಿಟ್ಟಿತು. ತೆರಳುವುದಕ್ಕೂ ಮೊದಲು ಮೂರು ಮಾಂತ್ರಿಕ ಪದಗಳನ್ನು ನನಗೆ ಹೇಳಿದಳು. 'I Love You' ಎಂದಿದ್ದಳು.

ಆಗ ನನ್ನಾಳದಲ್ಲಿ ಕಂಪನಗಳ ಕಲರವ. ಈ ಮಾತುಗಳನ್ನು ಯಾರೂ ಮೊದಲು ನನಗೆ ಹೇಳಿರಲಿಲ್ಲ. ಆ ದಿನವನ್ನು ನಾನು ಬದುಕಿನ ಕೊನೆಯ ಉಸಿರಿರುವರೆಗೂ ಮರೆಯಲು ಸಾಧ್ಯವಿಲ್ಲ. ಅವಳಿಗೆ ಪ್ರತಿಕ್ರಿಯೆಯಾಗಿ ನಾನೂ ಒಂದು ಮಾತನ್ನೂ ಹೇಳಲು ಸಾಧ್ಯವಾಗಲಿಲ್ಲ. ಕಾರಣ, ನಾನು ಅಷ್ಟೊಂದು ನಾಚಿಕೆಪಟ್ಟಿದ್ದೆ. ಆದರೆ, ನನಗೆ ಗೊತ್ತಿತ್ತು, ಅವಳು ನನ್ನ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದಾಳೆಂದು. ಮೌನಕ್ಕಿರುವ ತಾಕತ್ತು ಮಾತಿಗೆಲ್ಲಿಂದ ಬರಬೇಕು?

ಆಸ್ಟ್ರೇಲಿಯಾಕ್ಕೆ ವಾಪಸ್ಸು ಹೋದ ನಂತರ, ಮರೀನಾ ಪ್ರತಿ ವಾರ ನನಗೆ ಪತ್ರ ಬರೆಯತೊಡಗಿದಳು. ಕೆಲವು ವಾರಗಳ ನಂತರ, ಅವಳು ನನ್ನನ್ನು ಆಸ್ಟ್ರೇಲಿಯಾಕ್ಕೆ ಬರಲು ಹೇಳಿದಳು. ಆಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನಕ್ಷತ್ರಗಳ ಮೇಲೆ ಮೈಚಾಚಿ ಮಲಗಿದಂತಹ ಅನುಭವವದು. ಚಂದ್ರನ ಮೇಲೆ ಸವಾರಿ ಮಾಡಿದ ಹೆಮ್ಮೆ ನನಗೆ.

ನನ್ನ ಕುಟುಂಬದವರಿಗೆ ನಾನು ಏನನ್ನೂ ತಿಳಿಸಲಿಲ್ಲ. 30,000 ರೂಪಾಯಿ ಸಾಲ ತೆಗೆದುಕೊಂಡು, ಮೆಲ್ಬೋರ್ನ್ಗೆ ಟಿಕೆಟ್ ಖರೀದಿಸಿದೆ. ವೀಸಾ ವ್ಯವಸ್ಥೆ ಮಾಡಿಕೊಂಡು, ಅವಳೊಂದಿಗೆ ಇರಲು ಆಸ್ಟ್ರೇಲಿಯಾಕ್ಕೆ ಹಾರಿದೆ. ಅಲ್ಲಿ ಅವಳೊಂದಿಗೆ ಮೂರು ತಿಂಗಳು ಉಳಿದೆ. ಆ ದಿನಗಳು ತುಂಬಾ ಮಾಂತ್ರಿಕತೆಯಿಂದ ಕೂಡಿದ್ದವು. ಅವಳು ನನಗೆ ಇಂಗ್ಲಿಷ್ ಕಲಿಸಿದಳು. ನಾನು ಅವಳಿಗೆ ರಾಜಸ್ಥಾನಿ ನೃತ್ಯ ಮಾಡಲು ಹೇಳಿಕೊಟ್ಟೆ.

‘ನಾವಿಬ್ಬರು ಮದುವೆಯಾಗಿ ಆಸ್ಟ್ರೇಲಿಯಾದಲ್ಲಿಯೇ ನೆಲೆಸೋಣ!’ ಎಂದು ಅವಳು ಹೇಳಿದಳು.

ನಾನು ನನ್ನ ತಾಯಿನಾಡನ್ನು ತ್ಯಜಿಸಲು ಸಿದ್ಧವಾಗಲಿಲ್ಲ. ಅವಳಿಗೆ ಭಾರತಕ್ಕೆ ಬರಲು ಇಷ್ಟವಿರಲಿಲ್ಲ. 'ಇದು ದೀರ್ಘಾವಧಿಯವರೆಗೆ ಮುಂದುವರೆಯಲು ಸಾಧ್ಯವಿಲ್ಲ. ನಾವು ದೂರವಾಗುವುದೂ ಸುಲಭವಲ್ಲ. ಆದರೆ, ನಮ್ಮ ಮುಂದಿರುವ ಆಯ್ಕೆಯೆಂದರೆ ನಾವೀಗ ದೂರವಾಗಲೇ ಬೇಕು' ಎಂದು ಅವಳಿಗೆ ಹೇಳಿದೆ.

ನಾನು ಅವಳನ್ನು ತೊರೆದು ಬಂದೆ. ಅವಳು ಅಲ್ಲಿಯೇ ಉಳಿದುಹೋದಳು. ನಾವಿಬ್ಬರೂ ದೂರವಾಗುವ ದಿನದಂದು ಅವಳು ತುಂಬಾ ಅತ್ತಳು. ಅದು ಈಗಲೂ ನೆನಪಿದೆ ನನಗೆ.

ಭಾರತಕ್ಕೆ ಮರಳಿದ ನಂತರ ನನ್ನ ಜೀವನ ಮುಂದುವರಿಯಿತು. ಅದಾದ ಕೆಲವು ವರ್ಷಗಳ ನಂತರ, ನಾನು ಮದುವೆಯಾದೆ. ನನ್ನ ಕುಟುಂಬದ ನಿರ್ವಹಣೆಗೋಸ್ಕರ ಕುಲಧಾರದಲ್ಲಿ ದ್ವಾರಪಾಲಕನಾಗಿ ನಾನು ಕೆಲಸ ಆರಂಭಿಸಿದೆ. ಆದರೆ, ಹಲವು ಸಾರಿ ನಾನು ಮರೀನಾ ಬಗ್ಗೆ ಯೋಚಿಸುತ್ತಿದ್ದೆ- ‘ಅವಳು ಮದುವೆಯಾಗಿರಬಹುದೇ?’, ‘ನಾನು ಅವಳನ್ನು ಮತ್ತೆ ನೋಡಬಹುದೇ?’ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಆದರೆ, ಅವಳಿಗೆ ಪತ್ರ ಬರೆಯುವ ಧೈರ್ಯವನ್ನು ನಾನು ಎಂದಿಗೂ ಮಾಡಲಿಲ್ಲ.

ಸಮಯ ಕಳೆದಂತೆ ನೆನಪುಗಳು ಮರೆಯಾಗುತ್ತಿದ್ದವು. ನಾನು ಕುಟುಂಬದ ಜವಾಬ್ದಾರಿಗಳಲ್ಲಿ ಕಳೆದುಹೋದೆ. ಈಗ್ಗೆ ಎರಡು ವರ್ಷಗಳ ಹಿಂದೆ, ನನ್ನ ಪತ್ನಿ ತೀರಿಹೋದಳು. ನನ್ನ ಪುತ್ರರೆಲ್ಲರೂ ಮದುವೆಯಾಗಿ ನನ್ನನ್ನು ತ್ಯಜಿಸಿಹೋದರು.

ನನಗೀಗ 82 ವರ್ಷ. ಭಾರತದ ಪುರಾತನ ಪಟ್ಟಣವೊಂದರಲ್ಲಿ ದ್ವಾರಪಾಲಕ. ಈ ಬದುಕು ಇನ್ನು ಮುಂದೆ ನನ್ನನ್ನು ಆಶ್ಚರ್ಯಗೊಳಿಸುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ, ಕಾಲದ ನಿರ್ಧಾರ ಹಾಗಿರಲಿಲ್ಲ.

ಒಂದು ತಿಂಗಳ ಹಿಂದೆ, ಮರೀನಾ ನನಗೆ ಪತ್ರ ಬರೆದಿದ್ದಾಳೆ. 'ನನ್ನ ಪ್ರೀತಿಯ ಗೆಳೆಯನೇ ಹೇಗಿದ್ದೀ? ಎಂದು ಕೇಳಿದ್ದಾಳೆ. ಈ ಮಾತನ್ನು ಕೇಳಿದ ನನ್ನ ಆತ್ಮ ಮತ್ತೊಮ್ಮೆ ಉದ್ದೀಪನಗೊಂಡಿದೆ. ಅರ್ಧ ಶತಮಾನದ ನಂತರ ನಾವಿಬ್ಬರೂ ಮತ್ತೆ ಸಿಕ್ಕಿದ್ದೇವೆ. ಅವಳೀಗ ಪ್ರತಿ ದಿನ ನನಗೆ ಕರೆ ಮಾಡುತ್ತಾಳೆ. ಮಾತನಾಡುತ್ತೇವೆ. ಮಾಸಿ ಹೋದ ಬದುಕಿನ ಬಣ್ಣಗಳ ಬಗ್ಗೆ, ಸಾಗಿ ಬಂದ ದಾರಿಗಳ ಬಗ್ಗೆ...

ವಿಚಿತ್ರವೆಂದರೆ, ಮರಿನಾ ಇಂದಿಗೂ ಮದುವೆ ಆಗಿಲ್ಲವಂತೆ. ಶೀಘ್ರದಲ್ಲೇ ಭಾರತಕ್ಕೆ ಬರುತ್ತಿದ್ದೇನೆಂದು ಅವಳು ನನಗೆ ಹೇಳಿದ್ದಾಳೆ. ನಾನೀಗ ಮತ್ತೆ 21ರ ಹರೆಯದವನಾಗಿದ್ದೇನೆ. ನಮ್ಮಿಬ್ಬರ ಭವಿತವ್ಯ ಏನಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಆದರೆ, ನನ್ನ ಮೊದಲ ಪ್ರೇಮ ನನ್ನ ಜೀವನದಲ್ಲಿ ಮತ್ತೆ ಮರಳಿದೆ. ಇದಕ್ಕಿಂತ ಹೆಚ್ಚು ವಿವರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.