ಚಳಿಗೆ ಜಾಕೆಟ್, ಪುಲ್ಓವರ್, ಓವರ್ಕೋಟ್ ಧರಿಸಿ ಓಡಾಡುತ್ತಿದ್ದವರು ಈಗ ಅದನ್ನೆಲ್ಲಾ ವಾರ್ಡ್ರೋಬ್ ಮೂಲೆಗೆ ಸೇರಿಸುವ ಕಾಲ ಬಂದಿದೆ. ಕಾರಣ ಬೇಸಿಗೆಯ ಧಗೆ ತಟ್ಟುತ್ತಿದೆ; ಧಾರಾಕಾರ ಬೆವರು ಹರಿದು ರೇಜಿಗೆ ಹುಟ್ಟಿಸುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ತೆಳ್ಳನೆಯ ಹತ್ತಿಯ ಬಟ್ಟೆಯ ದಿರಿಸುಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಅದರಲ್ಲೂ ಗಾಢ ರಂಗಿನ, ದೇಹದ ಅಂದವನ್ನು ಹೆಚ್ಚಿಸುವಂತಹ ಸಿಲೊಯಟ್ನಂತಹ ಉಡುಪುಗಳು ಈ ವರ್ಷದ ಟ್ರೆಂಡ್ ಆಗಿದೆ. 2021ರ ಕೆಲವು ಬೇಸಿಗೆ ಫ್ಯಾಷನ್ನ ಟ್ರೆಂಡ್ಗಳು ಹೀಗಿವೆ.

ಪ್ರಿಂಟೆಡ್ ಕಾಟನ್ ಪ್ಯಾಂಟ್

ಹೂವಿನ ಚಿತ್ತಾರವಿರುವ ವಿವಿಧ ಬಣ್ಣದ ಕಾಟನ್ ಪ್ಯಾಂಟ್ಗಳು ಬೇಸಿಗೆಯಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತವೆ. ಅಗಲವಾದ ಪಲಾಜೊ ಪ್ಯಾಂಟ್ನಂತಿರುವ ಅಥವಾ ಪೆನ್ಸಿಲ್ ಹತ್ತಿ ಪ್ಯಾಂಟ್ಗಳು ಟ್ರೆಂಡಿ ಲುಕ್ ನೀಡುತ್ತವೆ. ಇದರ ಮೇಲೆ ತೋಳಿಲ್ಲದ ಟಾಪ್ ಧರಿಸಿದರೆ ವಿಭಿನ್ನವಾಗಿ ಕಾಣಬಹುದು. ಬೇರೆ ಬೇರೆ ಬಣ್ಣದ ಪ್ಯಾಂಟ್ಗಳಿಗೆ ತಕ್ಕಂತೆ ವಿರುದ್ಧ ಬಣ್ಣದ ಟಾಪ್ ಧರಿಸುವ ಮೂಲಕ ಅಂದವನ್ನೂ ಹೆಚ್ಚಿಸಿಕೊಳ್ಳಬಹುದು.

ಟೈ ಮತ್ತು ಡೈ ಶರ್ಟ್ಗಳು

ಟೈ ಮತ್ತು ಡೈ ವಿನ್ಯಾಸದ ಶರ್ಟ್ಗಳು ಈ ವರ್ಷದ ಬೇಸಿಗೆಯ ಟ್ರೆಂಡ್. ಸಡಿಲವಾಗಿರುವ ಶರ್ಟ್ಗಳನ್ನು ಜೀನ್ಸ್ನೊಂದಿಗೆ ಧರಿಸಬಹುದು. ಧರಿಸಲು ಸುಲಭವಾಗಿದ್ದು, ಆರಾಮದಾಯಕ ಎನ್ನಿಸುವ ಈ ಶರ್ಟ್ಗಳು ದಪ್ಪ ಇರುವವರಿಗೆ ಹೆಚ್ಚು ಹೊಂದುತ್ತದೆ. ಪೆನ್ಸಿಲ್ ಪ್ಯಾಂಟ್ನೊಂದಿಗೆ ಕೂಡ ಟೈ ಮತ್ತು ಡೈ ಶರ್ಟ್ ಧರಿಸಬಹುದು. ಈ ಶರ್ಟ್ನೊಂದಿಗೆ ಬೆಳ್ಳಿಯ ಆಭರಣಗಳನ್ನು ಧರಿಸಿ ಟ್ರೆಂಡ್ ಸೃಷ್ಟಿಸಬಹುದು.

ಹಾಟ್ ಪ್ಯಾಂಟ್ ಅಥವಾ ಹೈ ವೇಸ್ಟ್ ಪ್ಯಾಂಟ್

ಈಗ ಮನೆಯಿಂದ ಹೊರಗಡೆ ಹೋಗುವುದಕ್ಕಿಂತ ಹೆಚ್ಚು ಮನೆಯಲ್ಲೇ ಇರುವ ಕಾರಣ ಹಾಟ್ ಪ್ಯಾಂಟ್ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ. ಶಾರ್ಟ್ನಂತೆ ಇರುವ ಹಾಟ್ ಪ್ಯಾಂಟ್ ಈಜುಡುಗೆಯಂತೆಯೂ ಕಾಣಿಸುತ್ತದೆ. ಇದರ ಮೇಲೆ ಕ್ರಾಪ್ ಟಾಪ್ ಅಥವಾ ಶಾರ್ಟ್ ಟೀ ಶರ್ಟ್ಗಳನ್ನು ಧರಿಸಿದರೆ ಟ್ರೆಂಡಿ ಲುಕ್ ಸಿಗುತ್ತದೆ.

ಹೂವಿನ ವಿನ್ಯಾಸದ ಉಡುಪುಗಳು

ಹೂವಿನ ವಿನ್ಯಾಸ ಇರುವ ಟಾಪ್ಗಳು, ಟೀ ಶರ್ಟ್ಗಳು, ನಿಲುವಂಗಿಗಳು ಈ ಬೇಸಿಗೆಯ ಫ್ಯಾಷನ್. ಗಾಢ ಬಣ್ಣದ ಹೂವಿನ ವಿನ್ಯಾಸದೊಂದಿಗಿರುವ ಟಾಪ್ಗಳು ಹೆಣ್ಣುಮಕ್ಕಳನ್ನು ಹೆಚ್ಚು ಸೆಳೆಯುತ್ತಿವೆ. ಅದರಲ್ಲೂ ಮಿನಿ ಟಾಪ್ಗಳು ಈಗಿನ ಟ್ರೆಂಡ್. ಹೂವಿನ ವಿನ್ಯಾಸದ ದಿರಿಸುಗಳು ಎಲ್ಲಾ ಬಣ್ಣದವರಿಗೂ ಹೊಂದುತ್ತದೆ. ಸ್ಲೀವ್ಲೆಸ್, ಮಟನ್ ಸ್ಲೀವ್ಸ್ ಇರುವ ಡ್ರೆಸ್ಗಳು ಬಿಸಿಲಿನ ಧಗೆಗೆ ಧರಿಸಲು ಆರಾಮದಾಯಕ.

ಅಬ್ಸ್ಟ್ರ್ಯಾಕ್ಟ್ ಪ್ರಿಂಟ್ ಇರುವ ಉಡುಗೆಗಳು

ಅಬ್ಸ್ಟ್ರ್ಯಾಕ್ಟ್ ವಿನ್ಯಾಸಗಳಿರುವ ಉಡುಪುಗಳು ಇತ್ತೀಚೆಗೆ ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಒಂದೇ ವಿನ್ಯಾಸದ ಪ್ಯಾಂಟ್ ಹಾಗೂ ಟಾಪ್ ಧರಿಸಿದರೆ ನಿಮ್ಮ ಅಂದ ಹೆಚ್ಚುವುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ಬೇರೆ ಬೇರೆ ವಿನ್ಯಾಸ ಹಾಗೂ ಬಣ್ಣಗಳ ಉಡುಗೆಗಳು ಲಭ್ಯವಿದ್ದು ನಮಗೆ ಹೊಂದುವಂತಹ ಉಡುಗೆ ಧರಿಸಿದರೆ ಬೇಸಿಗೆಗೂ ಉತ್ತಮ, ಟ್ರೆಂಡಿಯಾಗಿಯೂ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.