ADVERTISEMENT

2024ರಲ್ಲಿ ಭಾರತದ ರಸ್ತೆಗಿಳಿಯಲಿವೆ ಡುಕಾಟಿಯ ಎಂಟು ಹೊಸ ಮಾದರಿ ಬೈಕ್‌ಗಳು

ಪಿಟಿಐ
Published 2 ಜನವರಿ 2024, 13:54 IST
Last Updated 2 ಜನವರಿ 2024, 13:54 IST
<div class="paragraphs"><p>ಡುಕಾಟಿ ಬೈಕ್‌ನೊಂದಿಗೆ ನಟ ರಣವೀರ್‌ ಸಿಂಗ್‌</p></div>

ಡುಕಾಟಿ ಬೈಕ್‌ನೊಂದಿಗೆ ನಟ ರಣವೀರ್‌ ಸಿಂಗ್‌

   

@Ducati_India ಎಕ್ಸ್ ಖಾತೆ ಚಿತ್ರ

ನವದೆಹಲಿ: ಇಟಲಿಯ ವಿಲಾಸಿ ಮೋಟಾರ್‌ಸೈಕಲ್ ತಯಾರಿಕ ಕಂಪನಿ ಡುಕಾಟಿ ಭಾರತದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಹೊಸದಾಗಿ ಎಂಟು ಬೈಕ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

ADVERTISEMENT

ಹೊಸ ಮಾದರಿಯಲ್ಲಿ ಮಲ್ಟಿಸ್ಟ್ರಾಡಾ ವಿ4 ಆರ್‌ಎಸ್‌, ಡೆಸರ್ಟ್‌ಎಕ್ಸ್ ರ‍್ಯಾಲಿ, ಪ್ಯಾನಿಗಲಿ ವಿ4 ರೇಸಿಂಗ್‌ ರೆಪ್ಲಿಕಾ 2023, ಡಿಯಾವೆಲ್‌ ಫಾರ್‌ ಬೆಂಟ್ಲೆ, ಮಾನ್‌ಸ್ಟರ್ 30 ಡಿಗ್ರಿ ಆ್ಯನ್ನಿವರ್ಸರಿಯೊ, ಪ್ಯಾನಿಗಲಿ ವಿ4 ಎಸ್‌ಪಿ2 30 ಡಿಗ್ರಿ ಆ್ಯನ್ನಿವರ್ಸರಿಯೊ 916, ಹೊಸ ಸ್ಟ್ರೀಟ್‌ಫೈಟರ್‌ ವಿ4ಎಸ್‌ 2023 ಈ ಮಾದರಿಗಳು ಭಾರತದಲ್ಲಿ ಲಭ್ಯವಾಗಲಿವೆ ಎಂದು ಕಂಪನಿ ಹೇಳಿದೆ.

2024ರ ಮೊದಲ ತ್ರೈಮಾಸಿಕದಲ್ಲಿ ಸ್ಟ್ರೀಟ್‌ಫೈಟರ್‌ ವಿ4 ಲ್ಯಾಂಬೊರ್ಗಿನಿ ಬಿಡುಗಡೆಯಾದರೆ, 2ನೇ ತ್ರೈಮಾಸಿಕದಲ್ಲಿ ಡೆಸರ್ಟ್‌ಎಕ್ಸ್‌ ರ‍್ಯಾಲಿ, ಹೈಪರ್‌ಮೋಟಾರ್ಡ್‌ 698 ಮೊನೊ, ನ್ಯೂ ಸ್ಟ್ರೀಟ್‌ಫೈಟರ್‌ ವಿ4 ರೇಂಜ್‌ ರಸ್ತೆಗಿಳಿಯಲಿವೆ.

ನಾಲ್ಕನೇ ತ್ರೈಮಾಸಿಕದಲ್ಲಿ ಮಲ್ಟಿಸ್ಟ್ರಾಡಾ ವಿ4 ಆರ್‌ಎಸ್‌ ಹಾಗೂ ಡಿಯಾವೆಲ್‌ ಫಾರ್‌ ಬೆಂಟ್ಲೆ ಬಿಡುಗಡೆಯಾಗಲಿದ್ದು, ಇವುಗಳ ಸಂಖ್ಯೆ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ.

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಫುಲ್ ಚಂದ್ರ ಅವರು ಮಾಹಿತಿ ನೀಡಿ, ‘2023ರ ಮೊದಲ ಮೂರು ತ್ರೈಮಾಸಿಕದಲ್ಲಿ ಜನಪ್ರಿಯ ಮಾದರಿಗಳನ್ನು ಪರಿಚಯಿಸದಿದ್ದರೂ, ಕಂಪನಿ ಇರುವ ಮಾದರಿಯಲ್ಲಿ ಉತ್ತಮ ವಹಿವಾಟು ನಡೆಸಿದೆ. ಇದರಲ್ಲಿ ಪ್ಯಾನಿಗಲಿ ವಿ4, ಮಲ್ಟಿಸ್ಟ್ರಾಡಾ ವಿ4 ಹಾಗೂ ಡಿಯಾವೆಲ್ ವಿ4ಗಳ ಮಾರಾಟ ಉತ್ತಮವಾಗಿದೆ’ ಎಂದಿದ್ದಾರೆ.

‘ನೂತನ ವರ್ಷದಲ್ಲಿ ಎಂಟು ಹೊಸ ಡುಕಾಟಿ ಬೈಕ್‌ಗಳನ್ನು ಹಾಗೂ ಎರಡು ಹೊಸ ಡೀಲರ್‌ಶಿಪ್‌ಗಳನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ಈ ವರ್ಷ ಸಾಕಷ್ಟು ಭರವಸೆಗಳನ್ನು ಹೊಂದಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.