ADVERTISEMENT

ಚಿಲ್ಲರೆ ವಹಿವಾಟು ಉದ್ಯಮ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2016, 19:30 IST
Last Updated 8 ಮಾರ್ಚ್ 2016, 19:30 IST
ಚಿಲ್ಲರೆ ವಹಿವಾಟು ಉದ್ಯಮ
ಚಿಲ್ಲರೆ ವಹಿವಾಟು ಉದ್ಯಮ   

ಹೊಸದಾಗಿ ಉದ್ಯಮಕ್ಕೆ ಪ್ರವೇಶಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ದೇಶದ ಚಿಲ್ಲರೆ ವಹಿವಾಟು ಉದ್ಯಮವು ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿದೆ.

* ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಶೇ 10ರಷ್ಟು ಪಾಲು ಹೊಂದಿದೆ. ಉದ್ಯೋಗ ಪ್ರಮಾಣ ಶೇ 8ರಷ್ಟಿದೆ.

* ಚಿಲ್ಲರೆ ವಹಿವಾಟಿಗೆ ಭಾರತವು ವಿಶ್ವದಲ್ಲಿಯೇ 5ನೇ ಅತಿದೊಡ್ಡ ತಾಣವಾಗಿದೆ.

ವಿಸ್ತರಣೆಗೆ ಇರುವ ಅವಕಾಶ
* 2015ರಲ್ಲಿ ಸಂಘಟಿತ ವಲಯ-2%.
* ಅಸಂಘಟಿತ ವಲಯ-92%.
* 2020ರಲ್ಲಿ ಸಂಘಟಿತ ವಲಯ-24%.
* ಅಸಂಘಟಿತ ವಲಯ-76%.

ಯೋಜನಾ ಬೆಂಬಲ
* 51% ಬಹುಬ್ರ್ಯಾಂಡ್‌ ಚಿಲ್ಲರೆ ವಲಯದಲ್ಲಿ ಎಫ್‌ಡಿಐ ಮಿತಿ.
* 100% ಸಿಂಗಲ್‌ ಬ್ರ್ಯಾಂಡ್‌ ಚಿಲ್ಲರೆ ವಲಯದಲ್ಲಿ ಎಫ್‌ಡಿಐ ಮಿತಿ.

ಮಾರುಕಟ್ಟೆ ಗಾತ್ರ
ಹಲವು ಸವಾಲುಗಳ ಹೊರತಾಗಿಯೂ ಭಾರತದ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದ ವಹಿವಾಟು ಮುಂದಿನ ಐದು ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಎಂದು ವರದಿಯೊಂದು ಅಂದಾಜಿಸಿದೆ. ಜನರ ಆದಾಯ ಸಾಮರ್ಥ್ಯ ಹೆಚ್ಚಳ, ಚಿಕ್ಕ ಕುಟುಂಬ ಹಾಗೂ ನಗರೀಕರಣ ಈ ಬೆಳವಣಿಗೆಗೆ ಕಾರಣ ಎಂದು  ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)  ಹಾಗೂ ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ (ಬಿಸಿಜಿ) ಜಂಟಿ ವರದಿ ವಿಶ್ಲೇಷಿಸಿದೆ.

2000 ದ ಏಪ್ರಿಲ್‌ನಿಂದ  2015 ರ  ಸೆಪ್ಟೆಂಬರ್‌ರವರೆಗೆ ₹2.33 ಲಕ್ಷ ಕೋಟಿ ಎಫ್‌ಡಿಐ
* ಅಮೆಜಾನ್‌ ಡಾಟ್‌ ಕಾಂನಿಂದ ವಹಿವಾಟು ವೃದ್ಧಿಗೆ 2014ರಿಂದ ಈವರೆಗೆ ₹4.76 ಲಕ್ಷ ಕೋಟಿ ಹೂಡಿಕೆ.
* ವಾಲ್‌ಮಾರ್ಟ್‌ ಇಂಡಿಯಾದಿಂದ  ಮುಂದಿನ ಐದು ವರ್ಷದಲ್ಲಿ 500 ಕ್ಯಾಷ್‌ ಆ್ಯಂಡ್‌ ಕ್ಯಾರಿ ಮಳಿಗೆ.
* ಅಮೆರಿಕದ ಫ್ಯಾಷನ್ ರಿಟೇಲ್‌ ಕಂಪೆನಿ ಏರೋಪೋಸ್ಟಲ್‌ನಿಂದ  ನಾಲ್ಕು ವರ್ಷಗಳಲ್ಲಿ ₹ 500 ಕೋಟಿ ವರಮಾನ ಸಂಗ್ರಹ ನಿರೀಕ್ಷೆ.
* ಅಬುಧಾಬಿ ಮೂಲದ ಲುಲು ಗ್ರೂಪ್‌ನಿಂದ ಹೈದರಾಬಾದ್‌ ಮತ್ತು ತೆಲಂಗಾಣದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ₹2,500 ಕೋಟಿ ಹೂಡಿಕೆ.

ವಹಿವಾಟುದಾರರ ತಂತ್ರಗಳು
* ವಿನಾಯ್ತಿ ಕೊಡುಗೆಗಳು
* ಬೆಲೆ ತಗ್ಗಿಸುವುದು
* ಮೌಲ್ಯಾಧಾರಿತ ಸೇವೆಗಳು
* ಪಾಲುದಾರಿಕೆಯ ಹೆಚ್ಚಳ
* ಬಲಿಷ್ಠ ಪೂರೈಕೆ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.