ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ದಾಖಲೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಬ್ಯಾಡಗಿ (ಹಾವೇರಿ ಜಿಲ್ಲೆ): ಇಲ್ಲಿಯ ಮಾರುಕಟ್ಟೆಗೆ ಸೋಮವಾರ 1,52,839 ಚೀಲ ಒಣ ಮೆಣಸಿನಕಾಯಿ ಆವಕವಾಗಿದ್ದು, ಇದು ಇತಿಹಾಸ
ದಲ್ಲಿಯೇ ಅತಿ ಹೆಚ್ಚು ಎನ್ನಲಾಗಿದೆ.

ಕಳೆದ ಮಾರ್ಚ್‌ನಲ್ಲಿ 1.47 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿತ್ತು.  1.49 ಲಕ್ಷ ಚೀಲ ಹಾಗೂ 1.50 ಲಕ್ಷ ಚೀಲಗಳಂತೆ ಎರಡು ಬಾರಿ ದಾಖಲೆಯನ್ನು ಮುರಿದಿತ್ತು. ಇಂದು ಅದು 1.53 ಲಕ್ಷ ಚೀಲಕ್ಕೆ ಹೆಚ್ಚುವ ಮೂಲಕ ಮೂರನೇ ಬಾರಿ ದಾಖಲೆ ಅಳಿಸಿ ಹಾಕಿದೆ.

ಇಂದು 6ನೇ ಬಾರಿಗೆ ಒಂದೇ ದಿನದಲ್ಲಿ ಲಕ್ಷಕ್ಕಿಂತ ಹೆಚ್ಚು ಮೆಣಸಿನಕಾಯಿ ಆವಕವಾದ ದಾಖಲೆ ನಿರ್ಮಾಣವಾಗಿದ್ದರೆ, ಕಳೆದ ವರ್ಷ ಸುಮಾರು 16 ಬಾರಿ ಲಕ್ಷಕ್ಕಿಂತ ಹೆಚ್ಚು ಮೆಣಸಿನಕಾಯಿ ಆವಕವಾಗಿತ್ತು.

ಸೋಮವಾರ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಕ್ವಿಂಟಲ್‌ಗೆ ₹ 1,000 ಇಳಿಕೆಯಾಗಿದ್ದು, ಉಳಿದಂತೆ ಬ್ಯಾಡಗಿ ಕಡ್ಡಿ ಮೆಣಸಿನಕಾಯಿ, ಗುಂಟೂರ ತಳಿ ಮೆಣಸಿನಕಾಯಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ಕನಿಷ್ಠ ₹ 3,008 ರಿಂದ ಗರಿಷ್ಠ ₹ 13,899, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕನಿಷ್ಠ ₹ 4,010 ರಿಂದ ಗರಿಷ್ಠ ₹ 19,000 ಹಾಗೂ ಗುಂಟೂರ ಮೆಣಸಿನಕಾಯಿ ಕನಿಷ್ಠ ₹ 2,369 ರಿಂದ ಗರಿಷ್ಠ ₹ 10,899ರ ವರೆಗೆ ಮಾರಾಟವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.