ADVERTISEMENT

‘ಚಿನ್ನಾಭರಣ ವರ್ತಕರ ಬೇಡಿಕೆ ಪ್ರಧಾನಿ ಜತೆ ಚರ್ಚಿಸಿ ಪರಿಹಾರ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಅಹಮದಾಬಾದ್‌ (ಪಿಟಿಐ): ಚಿನ್ನಾಭರಣಗಳ ಮೇಲೆ ಶೇ 1ರಷ್ಟು  ಅಬಕಾರಿ ಸುಂಕ ವಿಧಿಸುವ ಕುರಿತು ಎದ್ದಿರುವ ವಿವಾದವನ್ನು ಪ್ರಧಾನಿಯೊಂದಿಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯುವುದಾಗಿ ಕೇಂದ್ರ ಕೃಷಿ ಖಾತೆ ರಾಜ್ಯಸಚಿವ ಮೋಹನ್‌ ಕುಂದಾರಿಯಾ ಸೋಮವಾರ ಭರವಸೆ ನೀಡಿದ್ದಾರೆ.

ರಾಜ್‌ಕೋಟ್‌ನಲ್ಲಿ ಮುಷ್ಕರ ನಿರತ ಚಿನ್ನಾಭರಣ ವರ್ತಕರನ್ನು ಭೇಟಿ ಮಾಡಿದ ಅವರು, ಗುಜರಾತ್ ಸಂಸದರ ನಿಯೋಗದೊಂದಿಗೆ ಶೀಘ್ರವೇ ಪ್ರಧಾನಿಅವರನ್ನು  ಭೇಟಿ ಮಾಡುವುದಾಗಿ ಹೇಳಿದರು.

‘ಬಿಜೆಪಿ ಹಾಗೂ ಕೇಂದ್ರ ಸರ್ಕಾರ  ಚಿನ್ನಾಭರಣ ವರ್ತಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ  ಪ್ರಯತ್ನ ಮಾಡುತ್ತಿವೆ. ಶೀಘ್ರ ಪರಿಹಾರ ದೊರೆಯಲಿದೆ’ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಹೋರಾಟ ತೀವ್ರಗೊಳಿಸಲು ನಿರ್ಧಾರ: ಚಿನ್ನಾಭರಣ ವರ್ತಕರು ದೇಶವ್ಯಾಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ 13ನೆ ದಿನಕ್ಕೆ ಪ್ರವೇಶಿಸಿದೆ.

ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಷ್ಕರ ನಿರತರು ತೀರ್ಮಾನಿಸಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾರ್ಚ್‌ 17ರಂದು ಬೃಹತ್‌ ರ್‍್ಯಾಲಿ ಹಮ್ಮಿಕೊಳ್ಳಲಾಗಿದ್ದು,  ದೇಶದ ವಿವಿಧ ಭಾಗಗಳ ವರ್ತಕರು ರ್‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಸರಾಫ್‌ ಸಂಘದ ಉಪಾಧ್ಯಕ್ಷ ಸುರೀಂದರ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.