ADVERTISEMENT

ಭಾರತದಲ್ಲಿ ಇ.ವಿ ಕಾರು ತಯಾರಿಕೆಗೆ ಸ್ಕೋಡಾ ಆಟೊ ನಿರ್ಧಾರ

ಪಿಟಿಐ
Published 27 ಫೆಬ್ರುವರಿ 2024, 15:52 IST
Last Updated 27 ಫೆಬ್ರುವರಿ 2024, 15:52 IST
ಸ್ಕೋಡಾ ಆಟೊ ಬೆಲೆ ಏರಿಕೆ ನಿರ್ಧಾರ
ಸ್ಕೋಡಾ ಆಟೊ ಬೆಲೆ ಏರಿಕೆ ನಿರ್ಧಾರ   

ಮುಂಬೈ (ಪಿಟಿಐ): ಭಾರತದಲ್ಲಿ 2027ರ ವೇಳೆಗೆ ಎಲೆಕ್ಟ್ರಿಕ್‌ ಕಾರುಗಳ ತಯಾರಿಕೆಗೆ ಚಾಲನೆ ನೀಡಲಾಗುವುದು ಎಂದು ಸ್ಕೋಡಾ ಆಟೊ ಕಂಪನಿ ತಿಳಿಸಿದೆ. 

ಪ್ರಸಕ್ತ ವರ್ಷದಲ್ಲಿಯೇ ಕಂಪನಿಯು ತನ್ನ ಎಸ್‌ಯುವಿ ಎನ್ಯಾಕ್ ಎಲೆಕ್ಟ್ರಿಕ್‌ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

‘ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ ಕಂಪನಿ ಒತ್ತು ನೀಡಲಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಮಾದರಿಯ ಆರು ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಲಾಗಿದೆ’ ಎಂದು ಸ್ಕೋಡಾ ಆಟೊ ಇಂಡಿಯಾ ಬ್ರ್ಯಾಂಡ್‌ನ ನಿರ್ದೇಶಕ ಪೀಟರ್ ಜನೆಬಾ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

‘ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಕಂಪನಿಯು ಕೆಲಸ ನಿರ್ವಹಿಸಲಿದೆ. 2030ರ ವೇಳೆಗೆ ಕಂಪನಿಯ ಕಾರುಗಳ ಮಾರಾಟದ ಪೈಕಿ ಶೇ 30ರಷ್ಟು ವಿದ್ಯುತ್‌ ಚಾಲಿತ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.