ADVERTISEMENT

Sensex | ಷೇರು ಸೂಚ್ಯಂಕ ಏರಿಕೆ

ಪಿಟಿಐ
Published 22 ಮಾರ್ಚ್ 2024, 14:27 IST
Last Updated 22 ಮಾರ್ಚ್ 2024, 14:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಷೇರು ಸೂಚ್ಯಂಕಗಳು ಸತತ ಮೂರನೇ ದಿನವಾದ ಶುಕ್ರವಾರವೂ ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 190 ಅಂಶ ಏರಿಕೆಯಾಗಿ 72,831ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ ಒಂದು ಹಂತದಲ್ಲಿ 73,115ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 84 ಅಂಶ ಹೆಚ್ಚಳವಾಗಿ 22,096ಕ್ಕೆ ಅಂತ್ಯಗೊಂಡಿತು.

ADVERTISEMENT

ಸನ್‌ಫಾರ್ಮಾ, ಮಾರುತಿ, ಇಂಡಸ್‌ಇಂಡ್‌ ಬ್ಯಾಂಕ್‌, ಟೈಟನ್‌, ಐಟಿಸಿ, ಟಾಟಾ ಮೋಟರ್ಸ್‌, ಲಾರ್ಸೆನ್‌ ಆ್ಯಂಡ್‌ ಟೂಬ್ರೊ ಮತ್ತು ಜೆಎಸ್‌ಡಬ್ಲ್ಯು ಕಂಪನಿಗಳ ಷೇರಿನ ಮೌಲ್ಯ ಏರಿಕೆ ಆಗಿದೆ. 

ಐ.ಟಿ.ಷೇರು ಇಳಿಕೆ: ಅಮೆರಿಕದ ತಂತ್ರಜ್ಞಾನ ಕಂಪನಿ ಆಕ್ಸೆಂಚರ್ 2023–24ರ ಹಣಕಾಸು ವರ್ಷದಲ್ಲಿ ತನ್ನ ವರಮಾನ ಅಂದಾಜನ್ನು ಕಡಿಮೆಗೊಳಿಸಿದ ನಂತರ ಐಟಿ ವಲಯದ ಷೇರು ಮೌಲ್ಯ ಶೇ 3ರಷ್ಟು ಇಳಿಕೆ ಕಂಡಿತು. ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಟಿಸಿಎಸ್‌ ಮತ್ತು ಬಜಾಜ್‌ ಫಿನ್‌ಸರ್ವ್‌ ಷೇರಿನ ಮೌಲ್ಯ ಇಳಿದಿದೆ.

ಹೋಳಿ ಹಬ್ಬದ ಅಂಗವಾಗಿ ಷೇರುಪೇಟೆಗೆ ಸೋಮವಾರ ರಜೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.